/newsfirstlive-kannada/media/media_files/2025/09/11/state-cabinet-meeting-2025-09-11-20-18-45.jpg)
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆ
ರಾಜ್ಯದಲ್ಲಿ ಸಿಎಂ ಸ್ಥಾನದ ಬಗ್ಗೆ ಗೊಂದಲ ಶುರುವಾಗಿದೆ. ಸಿಎಂ ಸ್ಥಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ನೀಡಬೇಕೋ ಬೇಡವೋ ಎಂಬ ಬಗ್ಗೆ ಕಾಂಗ್ರೆಸ್ ಹೈಕಮ್ಯಾಂಡ್ ಈಗ ತೀರ್ಮಾನ ಕೈಗೊಳ್ಳಬೇಕಾಗಿದೆ. ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಶಾಸಕರೇ ತಂಡ ತಂಡವಾಗಿ ದೆಹಲಿಗೆ ಹೋಗಿ ಬಂದಿದ್ದಾರೆ. ಮತ್ತೊಂದೆಡೆ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯರನ್ನ ಮುಂದುವರಿಸಬೇಕೆಂದು ಅಹಿಂದ ಸಮುದಾಯಗಳ ಶಾಸಕರು, ಸಚಿವರು ಆಗ್ರಹಿಸುತ್ತಿದ್ದಾರೆ.
ಇದರ ಮಧ್ಯೆಯೇ ಪ್ರತಿವಾರದಂತೆ ಈ ವಾರದ ಕ್ಯಾಬಿನೆಟ್ ಸಭೆ ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದಿದೆ. ಕ್ಯಾಬಿನೆಟ್ ಸಭೆಯಲ್ಲೂ ನಾಯಕತ್ವದ ಗೊಂದಲದ ವಿಷಯ ಪ್ರತಿಧ್ವನಿಸಿದೆ .
ನಾಯಕತ್ವ ಗೊಂದಲದ ವಿಷಯವನ್ನು ಗೃಹ ಸಚಿವ ಪರಮೇಶ್ವರ್ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ನಿಮ್ಮ ಪರವಾದ ಎಂಎಲ್‌ಎ ಕರೆದುಕೊಂಡು ಹೋಗ್ತಿದ್ದಾರೆ ? ಆಚೆ ಏನೇನೋ ಆಗ್ತಿದೆ, ಮಾಧ್ಯಮದವರು ನಮ್ಮನ್ನ ಪ್ರಶ್ನೆ ಮಾಡುತ್ತಿದ್ದಾರೆ . ನಾವು ಅದಕ್ಕೆ ಉತ್ತರಿಸಬೇಕಾಗಿದೆ . ಇದು ಕ್ಯಾಬಿನೆಟ್ ಗೆ ಸಂಬಂಧಿಸಿದ ವಿಷಯ ಅಲ್ಲವೇ ? . ನಮ್ಮನ್ನೂ ಕೂಡ ಈ ವಿಚಾರವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಪರಮೇಶ್ವರ್ ಒತ್ತಾಯಿಸಿದ್ದಾರೆ. ನಾವು ಹಿರಿಯ ಸಚಿವರು ಹೈಕಮಾಂಡ್ ಅನ್ನು ಭೇಟಿಯಾಗಬಹುದಾ ಎಂದು ಪರಮೇಶ್ವರ್ ಕೇಳಿದ್ದಾರೆ.
ಆಗ ಹೌದು, ಖರ್ಗೆಯವರು ದೂರವಾಣಿ ಕರೆ ಮಾಡಿದ್ದರು . ನಾಲ್ಕೈದು ಜನ ಹಿರಿಯರನ್ನ ಕರೆದುಕೊಂಡು ಬನ್ನಿ, ಚರ್ಚಿಸೋಣ ಅಂತಾ ಖರ್ಗೆ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್‌ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಇದೇನು ದೊಡ್ಡ ವಿಷಯ ಅಲ್ಲ, ನಾನೇ ದೆಹಲಿಗೆ ಎಲ್ಲರನ್ನೂ ಕರೆಸಿಕೊಂಡು ಹೋಗುತ್ತೇನೆ ಎಂದ ಡಿಸಿಎಂ ಡಿಕೆಶಿ ಕೂಡ ಹೇಳಿದ್ದಾರಂತೆ.
/filters:format(webp)/newsfirstlive-kannada/media/media_files/2025/09/27/cm_siddu_parameshwar-2025-09-27-08-40-38.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us