/newsfirstlive-kannada/media/media_files/2025/11/15/cm-siddu-meets-rahul-gandhi-at-delhi02-2025-11-15-16-25-02.jpg)
ಕರ್ನಾಟಕದಲ್ಲಿ ಮುಂದಿನ ಎರಡೂವರೆ ವರ್ಷಗಳವರೆಗೂ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ಹೈಕಮ್ಯಾಂಡ್ ರವಾನಿಸಿದೆ. ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ರಾಜ್ಯ ಕ್ಯಾಬಿನೆಟ್ ಪುನರ್ ರಚನೆಯ ಪ್ರಸ್ತಾಪವನ್ನು ಹೈಕಮ್ಯಾಂಡ್ ನಾಯಕರ ಮುಂದೆ ಇಟ್ಟಿದ್ದಾರೆ. ಈ ಪ್ರಸ್ತಾಪಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಕ್ಯಾಬಿನೆಟ್ ಪುನರ್ ರಚನೆಗೆ ಒಪ್ಪಿಗೆ ನೀಡಿರುವುದರಿಂದ ಮುಂದಿನ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದಂತೆ ಆಗಿದೆ.
ಹೀಗಾಗಿ ಇದೇ ಅವಧಿಯಲ್ಲಿ ಸಿಎಂ ಆಗಬೇಕೆಂದು ಕನಸು ಕಂಡು ಪ್ರಯತ್ನ ನಡೆಸುತ್ತಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಆಸೆಗೆ ಕಾಂಗ್ರೆಸ್ ಹೈಕಮ್ಯಾಂಡ್ ತಣ್ಣೀರು ಎರಚಿದಂತೆ ಆಗಿದೆ. 2028ರ ಮೇ ತಿಂಗಳವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮ್ಯಾಂಡ್ ತನ್ನ ತೀರ್ಮಾನದ ಮೂಲಕ ರವಾನಿಸಿದೆ.
ಹೀಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಗೇರಲು 2028ರ ವಿಧಾನಸಭಾ ಚುನಾವಣೆವರೆಗೂ ಕಾಯಬೇಕಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಕ್ಕರಷ್ಟೇ ಡಿ.ಕೆ.ಶಿವಕುಮಾರ್ ಗೆ ಸಿಎಂ ಹುದ್ದೆ ಸಿಗಬಹುದು. ಆಗಲೂ ಸಿಎಂ ರೇಸ್ ನಲ್ಲಿ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ಇರುತ್ತಾರೆ.
ಸಚಿವ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಅನ್ನು ಕಾಂಗ್ರೆಸ್ ಹೈಕಮ್ಯಾಂಡ್ ನೀಡಿದೆ. ಸಚಿವ ಸಂಪುಟ ಪುನರ್ ರಚನೆ ಮಾಡಿ ಎಂದು ಸಿದ್ದರಾಮಯ್ಯ ಪ್ರಸ್ತಾಪಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ನೀಡಿದ್ದಾರೆ. ಕ್ಯಾಬಿನೆಟ್‌ಗೆ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ನೀವು ಬಯಸುವವರ ಪಟ್ಟಿ ರೆಡಿ ಮಾಡಿಕೊಂಡು ಬನ್ನಿ ಎಂದು ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯಗೆ ಸೂಚಿಸಿದ್ದಾರೆ. 15-18 ಮಂದಿ ಶಾಸಕರ ಪಟ್ಟಿಯನ್ನು ತಯಾರಿಸಿಕೊಂಡು ದೆಹಲಿಗೆ ಮತ್ತೊಮ್ಮೆ ಆಗಮಿಸುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಕ್ಯಾಬಿನೆಟ್ ಪುನರ್ ರಚನೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ , ಸಿದ್ದರಾಮಯ್ಯಗೆ ಸೂಚಿಸಿದ್ದಾರೆ.
ರಾಜ್ಯ ಕ್ಯಾಬಿನೆಟ್ ನಲ್ಲಿ ಸದ್ಯ ಸಚಿವರಾಗಿ ಇರುವವರ ಪೈಕಿ 8-12 ಮಂದಿಯನ್ನು ಕ್ಯಾಬಿನೆಟ್ ನಿಂದ ಕೈ ಬಿಟ್ಟು ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಿಕೊಳ್ಳಬಹುದು. ರಾಜ್ಯದ ಕಾಂಗ್ರೆಸ್ ಶಾಸಕರ ಪೈಕಿ 30 ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ನಾಲ್ಕೈದು ಭಾರಿ ಗೆದ್ದು ಶಾಸಕರಾಗಿರುವ ಅನೇಕ ಮಂದಿ ಇದ್ದಾರೆ. ವಿಜಯಪುರ ಜಿಲ್ಲೆಯ ಅಪ್ಪಾಜಿ ನಾಡಗೌಡ, ವಿರಾಜಪೇಟೆ ಕ್ಷೇತ್ರದ ಪೊನ್ನಣ್ಣ, ತುಮಕೂರಿನ ತಿಪಟೂರಿನ ಷಡಕ್ಷರಿ, ಮೈಸೂರಿನ ತನ್ವೀರ್ ಸೇಠ್, ಪಂಚಮಸಾಲಿ ಲಿಂಗಾಯತ ಸಮುದಾಯದ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಅನೇಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನ ಆಕಾಂಕ್ಷಿ ಕಾಂಗ್ರೆಸ್ ಶಾಸಕರ ಪಟ್ಟಿ ಇಲ್ಲಿದೆ ಓದಿ.
ಆರ್. ವಿ. ದೇಶಪಾಂಡೆ - ಹಳಿಯಾಳ ಶಾಸಕ
ಬಿ.ಕೆ. ಹರಿಪ್ರಸಾದ್ - ಪರಿಷತ್ ಸದಸ್ಯ
ಸಲೀಂ ಅಹಮದ್ - ಪರಿಷತ್ ಮುಖ್ಯ ಸಚೇತಕ
ಬಸವರಾಜ ರಾಯರೆಡ್ಡಿ - ಸಿಎಂ ಆರ್ಥಿಕ ಸಲಹೆಗಾರ, ಕೊಪ್ಪಳ ಶಾಸಕ
ಲೇಔಟ್ ಕೃಷ್ಣಪ್ಪ - ವಿಜಯನಗರ ಶಾಸಕ
ಟಿ.ಬಿ. ಜಯಚಂದ್ರ - ಶಿರಾ ಶಾಸಕ
ರೂಪ ಶಶಿಧರ್ - ಕೆಜಿಎಫ್ ಶಾಸಕಿ
ಶಿವಲಿಂಗೇಗೌಡ - ಅರಸೀಕೆರೆ ಶಾಸಕ
ನಾಗೇಂದ್ರ - ಬಳ್ಳಾರಿ ಶಾಸಕ
ಅಪ್ಪಾಜಿ ನಾಡಗೌಡ - ಮುದ್ದೆಬಿಹಾಳ ಶಾಸಕ
ಲಕ್ಷ್ಮಣ್ ಸವದಿ - ಅಥಣಿ ಶಾಸಕ
ತರೀಕೆರೆ ಶ್ರೀನಿವಾಸ್ - ತರೀಕೆರೆ ಶಾಸಕ
ರಿಜ್ವಾನ್ ಅರ್ಷದ್ - ಶಿವಾಜಿನಗರ
ಯು.ಟಿ.ಖಾದರ್ - ಸ್ಪೀಕರ್, ಮಂಗಳೂರು
ಕೆ.ಎನ್. ರಾಜಣ್ಣ - ಮಧುಗಿರಿ/ ರಘುಮೂರ್ತಿ - ಚಳ್ಳಕೆರೆ
ಪಿ.ಎಂ.ನರೇಂದ್ರ ಸ್ವಾಮಿ- ಮಳವಳ್ಳಿ/ಶಿವಣ್ಣ -ಆನೇಕಲ್
ಅಜಯ್ ಸಿಂಗ್ - ಜೇವರ್ಗಿ ಶಾಸಕ
/filters:format(webp)/newsfirstlive-kannada/media/media_files/2025/11/15/cm-siddu-meets-rahul-gandhi-at-delhi-2025-11-15-16-23-03.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us