/newsfirstlive-kannada/media/media_files/2025/11/22/cm-siddaramaiah-and-rahul-gandhi02-2025-11-22-18-23-26.jpg)
ಡಿಸೆಂಬರ್ 1 ರೊಳಗೆ ಕರ್ನಾಟಕದ ಸಿಎಂ ಸ್ಥಾನದ ಬಗ್ಗೆ ಸ್ಪಷ್ಟತೆ!
ಕರ್ನಾಟಕದಲ್ಲಿ ಸಿಎಂ ಕುರ್ಚಿಗಾಗಿ ಅಂತರಿಕ ಕಿತ್ತಾಟ ಶುರುವಾಗಿದೆ. ಕರ್ನಾಟಕದ ಕಾಂಗ್ರೆಸ್ ನ ಅಂತರಿಕ ಗೊಂದಲವನ್ನು ಡಿಸೆಂಬರ್ 1 ರೊಳಗಾಗಿ ಕಾಂಗ್ರೆಸ್ ಹೈಕಮ್ಯಾಂಡ್ ಬಗೆಹರಿಸುವ ನಿರೀಕ್ಷೆ ಇದೆ. ಡಿಸೆಂಬರ್ 1 ರಂದು ಪಾರ್ಲಿಮೆಂಟ್‌ನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಅದಕ್ಕೂ ಮುನ್ನ ಕರ್ನಾಟಕದ ಕಾಂಗ್ರೆಸ್ ನ ಅಂತರಿಕ ಗೊಂದಲ ಬಗೆಹರಿಸಿ ಕಾಂಗ್ರೆಸ್ ಹೈಕಮ್ಯಾಂಡ್ ನಾಯಕರು ಸಂಪೂರ್ಣವಾಗಿ ಪಾರ್ಲಿಮೆಂಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ನ ದೆಹಲಿ ಮೂಲಗಳು ಹೇಳಿವೆ. ಡಿಸೆಂಬರ್ 1 ರೊಳಗೆ ಕಾಂಗ್ರೆಸ್ ಹೈಕಮ್ಯಾಂಡ್ , ಸಿಎಂ ಸ್ಥಾನದ ಬಗ್ಗೆ ಮಹತ್ವದ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ಸದ್ಯ ಸಿಎಂ ಹುದ್ದೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ನೀಡಬೇಕೋ ಬೇಡವೋ ಎಂಬ ಬಗ್ಗೆ ಮಾತ್ರ ತೀರ್ಮಾನ ಕೈಗೊಳ್ಳಬೇಕು. ಇದರ ಬಗ್ಗೆ ಇಂದು ಅಥವಾ ನಾಳೆಯೊಳಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸುವ ನಿರೀಕ್ಷೆ ಇದೆ.
ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಸಿ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ. ನವಂಬರ್ 28 ಅಥವಾ 29 ರಂದು ಸಿಎಂ, ಡಿಸಿಎಂ ರನ್ನು ದೆಹಲಿಗೆ ಹೈಕಮ್ಯಾಂಡ್ ನಾಯಕರು ಕರೆಸಿಕೊಳ್ಳುವ ಸಾಧ್ಯತೆ ಇದೆ.
ಸಿಎಂ ಮತ್ತು ಡಿಸಿಎಂ ಬಣದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ದೆಹಲಿಯವರೆಗೂ ತಂಡ ಕಟ್ಟಿಕೊಂಡು ಹೋಗಿದ್ದಾರೆ. ಇದು ಸರಿಯಲ್ಲ ಎಂಬ ಭಾವನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿದೆ.
/filters:format(webp)/newsfirstlive-kannada/media/media_files/2025/11/23/siddaramaiah-mallikarjuna-kharge-2025-11-23-09-05-23.jpg)
ಹೀಗಾಗಿ ಡಿಸೆಂಬರ್ 1 ರಂದು ಸಂಸತ್‌ನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕರ್ನಾಟಕದ ಸಿಎಂ ಸ್ಥಾನದ ಬಗ್ಗೆ ಸ್ಪಷ್ಟ ತೀರ್ಮಾನವನ್ನು ಕಾಂಗ್ರೆಸ್ ಹೈಕಮ್ಯಾಂಡ್ ತೆಗೆದುಕೊಂಡು ಸಿಎಂ, ಡಿಸಿಎಂ ಇಬ್ಬರಿಗೂ ತಿಳಿಸಲಿದೆ. ಈ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಸ್ಥಿರತೆ ಉಂಟಾಗದಂತೆ ನೋಡಿಕೊಳ್ಳುವ ಪ್ಲ್ಯಾನ್ ಅನ್ನು ಕಾಂಗ್ರೆಸ್ ಹೈಕಮ್ಯಾಂಡ್ ರೂಪಿಸುತ್ತಿದೆ.
ಸಿಎಂ ರೇಸ್ ನಲ್ಲಿ ಡಿ.ಕೆ.ಶಿವಕುಮಾರ್ ಹೊರತುಪಡಿಸಿ ಸದ್ಯ ಮೂರನೇ ನಾಯಕರ ಹೆಸರು ಇಲ್ಲ ಎಂದು ಕೂಡ ಹೈಕಮ್ಯಾಂಡ್ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ಡಿಕೆಶಿಗೆ ಸಿಎಂ ಸ್ಥಾನವನ್ನು ಈಗ ನೀಡಬೇಕೇ ಇಲ್ಲವೇ ಎಂಬ ಬಗ್ಗೆ ಹೈಕಮ್ಯಾಂಡ್ ತೀರ್ಮಾನ ಕೈಗೊಳ್ಳಬೇಕು, ಸಿಎಂ ಸ್ಥಾನವನ್ನು ಡಿಕೆಶಿಗೆ ನೀಡಲೇಬಾರದೇ,? ಒಂದು ವೇಳೆ ಸಿಎಂ ಸ್ಥಾನ ನೀಡುವುದಾದರೇ, ಯಾವಾಗ ನೀಡಬೇಕು , ಹೇಗೆ ನೀಡಬೇಕು, ಸಿದ್ದರಾಮಯ್ಯರನ್ನು ಹೇಗೆ ಮನವೊಲಿಸಬೇಕು ಎಂಬ ಬಗ್ಗೆ ಮಾತ್ರ ತೀರ್ಮಾನ ಕೈಗೊಳ್ಳಬೇಕು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us