/newsfirstlive-kannada/media/media_files/2025/10/27/cm-siddu-and-dks-watching-chair-2025-10-27-17-29-23.jpg)
ಈ ರಾಜ್ಯ ಸರ್ಕಾರಕ್ಕೆ ಆಯಸ್ಸಿನ ಆತಂಕ ಏನಾದ್ರೂ ಕಾಡ್ತಿದ್ಯಾ? ನವೆಂಬರ್​ ಏಣಿಗೆ ಒಂದು ಮೆಟ್ಟಿಲು ಬಾಕಿ ಇದೆ.. ಕಾಂಗ್ರೆಸ್ ಸರ್ಕಾರದಲ್ಲಿ ನಿತ್ಯವೂ ಸಂಚಲನದ ಸುದ್ದಿಗಳು ಪ್ರಕಟ ಆಗ್ತಾನೇ ಇವೆ.. ಅದರಲ್ಲೂ ನಾಯಕತ್ವ ಬಗ್ಗೆ ಡೆಲ್ಲಿ ಅಂಗಳದಿಂದಲೇ ಉತ್ತರ ಸಿಗುವ ಕಾಲವಂತು ಸನ್ನಿಹಿತವಾಗಿದೆ.. ಹೀಗಾಗಿ ಹಗಲು-ರಾತ್ರಿಗಳು ಒಂದಾಗಿವೆ.. ಸರಣಿ ಮೀಟಿಂಗ್​ಗಳು ಈ ಕುತೂಹಲವನ್ನ ಹೆಚ್ಚಿಸಿದೆ..
ಎಲ್ಲರೂ ಹೇಳುವ ನವೆಂಬರ್​​ಗೆ ನಾಳೆ ಒಂದೇ ದಿನ ಬಾಕಿ.. ರಾಜ್ಯದಲ್ಲಿ ನಾಯಕತ್ವ ಗದ್ದಲ ಡೆಲ್ಲಿ ಅಂಗಳಕ್ಕೂ ಶಿಫ್ಟ್​​ ಆಗಿ ಸದ್ಯಕ್ಕೆ ಸಾಫ್ಟ್​​ ಆಗಿದೆ.. ಆದ್ರೂ ಬೂಬಿಮುಚ್ಚಿಕೊಂಡಿದೆ.. ಸಿದ್ದರಾಮಯ್ಯ ಪರ ನಿಂತ ಬಣ, ಕುರ್ಚಿ ಅಲ್ಲಾಡದಂತೆ ಶತಾಯಗತಾಯ ಪ್ರಯತ್ನ ನಡೆಸ್ತಿದೆ.. ಸಿದ್ದು ಆಪ್ತ ಪಡೆ, ಊಟ-ತಿಂಡಿ-ಚಹಾ, ಕಾಫಿ ಹೆಸರಲ್ಲಿ ಗೌಪ್ಯ ಸಭೆಗಳ ಮೇಲೆ ನಡೆಸ್ತಿದ್ದಾರೆ.. ಆದ್ರೆ, ಡಿಸಿಎಂ ಡಿಕೆಶಿ ಮಾತ್ರ ಸೈಲೆಂಟಾಗಿ ಒಂಟಿಯಾಗೇ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.
ಸರಣಿ ಅಸ್ತ್ರಗಳನ್ನ ಪ್ರಯೋಗಕ್ಕಿಳಿಸಿದ ಸಿಎಂ ಕ್ಯಾಂಪ್​!
ಹಿರಿತನ, ಅನುಭವ, ದಲಿತ ದಾಳ ಉರುಳಿಸಿದ ಪರಂ!
ತಂತ್ರಕ್ಕೆ ಪ್ರತಿತಂತ್ರ.. ದಾಳಕ್ಕೆ ಪ್ರತಿದಾಳ.. ಸವಾಲಿಗೆ ಸವಾಲು.. ಎರಡು ಬಣಗಳಿಂದ ಬರಿದಾಗದ ರಣವ್ಯೂಗಳು ರಚನೆ ಆಗಿ ಪಟ್ಟದಾಟಕ್ಕೆ ಪೈಪೋಟಿ ಅಗಣಿತವಾಗಿ ಮಾರ್ಪಟ್ಟಿದೆ.. ಶ್ರಮಕ್ಕೆ ಪ್ರತಿಫಲ ಕೇಳ್ತಿರುವ ಡಿಕೆಶಿ ಕ್ಯಾಂಪ್​ಗೆ ಡಾ.ಜಿ.ಪರಮೇಶ್ವರ್​​, ಸೀನಿಯಾರಿಟಿ ಕ್ಲೈಮ್ ದಾಳ ಉರುಳಿಸಿದ್ದಾರೆ.. 2013ರಲ್ಲಿ ರಾಜಕೀಯದ ಚಿತ್ರಣವೇ ಬದಲಿಸುವ ಶ್ರಮ ಹಾಕಿದ್ದ ತಮಗೂ ಪ್ರತಿಫಲ ಬೇಕಲ್ವಾ ಅಂತ ಪ್ರಶ್ನೆ ಇಟ್ಟಿದ್ದಾರೆ.. ಡಿಕೆಗೆ ಪ್ರತಿಸ್ಪರ್ಧಿಯಾಗಿ ಅಖಾಡಕ್ಕೆ ಇಳಿಯಲು ಸೆಡ್ಡು ಹೊಡೆದು ನಿಂತಿದ್ದಾರೆ ಪರಮೇಶ್ವರ್..
ಪರಂ ಸೀನಿಯಾರಿಟಿ ಕ್ಲೈಮ್!
2013ರಲ್ಲೇ ಕಾಂಗ್ರೆಸ್​​​ನ್ನ ಅಧಿಕಾರಕ್ಕೆ ತಂದಿರೋರಲ್ಲಿ ಮುಂಚೂಣಿಗ
ಸುದೀರ್ಘ 8 ವರ್ಷ ಕೆಪಿಸಿಸಿ ಸಾರಥ್ಯವಹಿಸಿ ಸಮರ್ಥ ನಿರ್ವಹಣೆ
ಸಿಎಂ ಆಗುವ ಅವಕಾಶವಿದ್ದರೂ ಸೋತ ಕಾರಣ ಕ್ಲೈಮ್​​ ಮಾಡ್ಲಿಲ್ಲ
ಡಿಕೆಶಿಗಿಂತ ಮೊದಲು ಸರ್ಕಾರ ತಂದ ತಮಗೆ, ಅವಕಾಶ ಸಿಗಬೇಕು
ಒಂದು ಅವಕಾಶ ಕೊಟ್ಟರೆ ಸನ್ನಿವೇಶ ಬಂದ್ರೆ ಸಮರ್ಥವಾಗಿ ಕೆಲಸ
ಹೈಕಮಾಂಡ್ ಭೇಟಿ ವೇಳೆ ದಲಿತಾಸ್ತ್ರ ಪ್ರಯೋಗಕ್ಕೂ ಪರಂ ಪ್ಲಾನ್​​
2013ರಲ್ಲೇ ಪಕ್ಷವನ್ನ ಅಧಿಕಾರಕ್ಕೆ ತಂದಿರೋದನ್ನ ಯಾರು ನಿರಾಕರಿಸಲಾಗದು.. 8 ವರ್ಷ ಸುದೀರ್ಘ ಅವಧಿಗೆ ಕೆಪಿಸಿಸಿ ಸಾರಥ್ಯ ವಹಿಸಿ ಸಮರ್ಥವಾಗಿ ಮುನ್ನಡೆಸಿದ್ದೇನೆ.. ಸಿಎಂ ಆಗುವ ಅವಕಾಶ ಇದ್ದರೂ ಸೋತ ಕಾರಣ ಅಂದಿನ ಸನ್ನಿವೇಶ, ತಮ್ಮನ್ನ ಹಿಂದಕ್ಕೆ ದೂಕಿದೆ.. ಡಿಕೆಶಿಗಿಂತ ಮೊದಲು 2013ರಲ್ಲೇ ಸರ್ಕಾರ ತಂದ ತಮಗೆ, ಹೈಕಮಾಂಡ್ ಅವಕಾಶ ಕೊಡಬೇಕು ಅನ್ನೋ ಕ್ಲೈಮ್​​​ನ್ನ ಪರಂ ಮುಂದಿಡ್ತಿದ್ದಾರೆ.. ನನಗೂ ಒಂದು ಅವಕಾಶ ಕೊಟ್ಟರೆ ಸನ್ನಿವೇಶ ಬಂದ್ರೆ ಸಮರ್ಥವಾಗಿ ನಿರ್ವಹಿಸುವುದಾಗಿ ಪರಮೇಶ್ವರ್​​​ ಮನದಾಳ, ಮರುಗಿದ ದನಿಯಲ್ಲಿ ಆಪ್ತರ ಬಳಿ ಪ್ರಸ್ತಾಪಿಸಿದೆ.. ಹೈಕಮಾಂಡ್ ಭೇಟಿ ವೇಳೆ ದಲಿತಾಸ್ತ್ರ ಪ್ರಯೋಗಕ್ಕೂ ಪರಮೇಶ್ವರ್​​​ ಮುಂದಾಗಿದ್ದಾರೆ..
ನ.7ರಂದು ರಾಜಣ್ಣ ಮನೇಲಿ ಮತ್ತೆ ಸಿಎಂ ಔತಣಕೂಟ!
ಕಾಂಗ್ರೆಸ್​ನಲ್ಲಿ ತೀವ್ರ ಕುತೂಹಲ ಕೆರಳಿಸಿದ ಸಿಎಂ ನಡೆ!
ಸಿದ್ದರಾಮಯ್ಯ ನಡೆ ಯಾರ ಊಹೆಗೂ ನಿಲುಕದ ದಾಳ ಉರುಳಿದೆ.. ರಾಜ್ಯದಲ್ಲಿ ಡಿನ್ನರ್​​​ ಪಾಲಿಟಿಕ್ಸ್​​ ಹೊಸದಲ್ಲ.. ಆದ್ರೆ, ಸಿಎಂ ಹೋಗ್ತಿರುವ ಔತಣಕೂಟವನ್ನ ರಾಜ್ಯ ರಾಜಕಾರಣವೇ ಬೆಚ್ಚಿಬಿದ್ದು ಬೆರಗಿನಿಂದ ಕಾಯ್ತಿದೆ.. ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಸಂಪುಟದಿಂದ ಹೊರಬಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ನಿವಾಸಕ್ಕೆ ನವೆಂಬರ್​​​ 7ರಂದು ಸಿಎಂ ಹೋಗ್ತಿರೋದು ಅಚ್ಚರಿ ಮತ್ತು ಕುತೂಹಲ.. ಹೈಕಮಾಂಡ್‌ನಿಂದ ಕ್ರಮ ಎದುರಿಸಿದ ನಾಯಕನ ಮನೆಗೆ ಸಿಎಂ ಊಟಕ್ಕೆ ತೆರಳ್ತಿರೋದು ಹತ್ತಾರು ರೀತಿಯಲ್ಲಿ ವ್ಯಾಖ್ಯಾನಿಸಲಾಗ್ತಿದೆ..
ಆದ್ರೆ, ಗೃಹ ಸಚಿವ ಪರಮೇಶ್ವರ್​​ ಮಾತ್ರ ರಾಜಣ್ಣ ಮನೆ ಊಟಕ್ಕೆ ಸಜ್ಜಾಗಿದ್ದಾರೆ.. ಅದಕ್ಕೂ ಮೊದಲೇ ಮಹದೇವಪ್ಪ ಕಚೇರಿಯಲ್ಲಿ ಮುದ್ದೆ ಸವಿದಿದ್ದಾರೆ.. ಇನ್ನು, ದಲಿತ ಸಚಿವರ ಜೊತೆ ಸಿಎಂ ಸಭೆ ನಡೆಸಿಲ್ಲ ಅಂತ ಸ್ಪಷ್ಟನೆ ಕೊಟ್ರು..
/filters:format(webp)/newsfirstlive-kannada/media/media_files/2025/10/29/dalit-cm-faces-of-karnataka-2025-10-29-18-10-31.jpg)
ಡಿಕೆಶಿ ಡೆಲ್ಲಿ ರೌಂಡ್ಸ್​​ನಿಂದ ಸಿಎಂ ಸಿದ್ದು ಕ್ಯಾಂಪ್​​ ಅಲರ್ಟ್​
ಹಿರಿಯ ಸಚಿವರಿಂದ ನಡೀತು ‘ಮಿಡ್​ ನೈಟ್​’ ಮೀಟಿಂಗ್!
ಡಿಕೆಶಿ ಡೆಲ್ಲಿಗೆ ಹೋಗಿ ಮರಳಿದ ಬಳಿಕ ಸಿದ್ದರಾಮಯ್ಯ ಕ್ಯಾಂಪ್​​​ ಫುಲ್​ ಅಲರ್ಟ್​​ ಮೂಡ್​ನಲ್ಲಿದೆ.. ನವೆಂಬರ್ ಕ್ರಾಂತಿ ಚರ್ಚೆ ನಡುವೆ ಸರಣಿ ಸಭೆ ನಡೀತಿದ್ದು, ನಿನ್ನೆ ಹಿರಿಯ ಸಚಿವರ ಮಿಡ್ ನೈಟ್ ಮೀಟಿಂಗ್, ಮತ್ತಷ್ಟು ಮಸಾಲ ಸಿಕ್ಕಂತಾಗಿದೆ.. ಗೃಹ ಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ನಡೆದ ಮೀಟಿಂಗ್​ನಲ್ಲಿ ದಿನೇಶ್ ಗುಂಡೂರಾವ್, ಎಂ.ಬಿ ಪಾಟೀಲ್, ಮಹದೇವಪ್ಪ ಇದ್ರು.. ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಸುದೀರ್ಘ ಚರ್ಚೆ ನಡೆದಿದೆ.. ದಲಿತ ಸಿಎಂ ಕೂಗು ಬೆನ್ನಲ್ಲೆ ಪರಮೇಶ್ವರ್​​, ಲಿಂಗಾಯತ ನಾಯಕರ ಬೆಂಬಲ ಬಯಸಿದಂತೆ ಕಾಣಿಸ್ತಿದೆ.. ಒಟ್ಟಾರೆ, ಸರಣಿ ಸಭೆಗಳು ಮಾತ್ರ ಕುತೂಹಲ ಮೂಡಿಸ್ತಿದ್ದು, ಡಿಕೆಶಿ ಕ್ಯಾಂಪ್​​​ ಮೌನಕ್ಕೆ ಬಿದ್ದಿದೆ..
ಹರೀಶ್​ ಕಾಕೋಳ್​, ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us