/newsfirstlive-kannada/media/media_files/2026/02/03/contractors-association-jaganatha-shegaji-1-2026-02-03-12-43-21.jpg)
ರಾಜ್ಯ ಸರ್ಕಾರ ಮತ್ತು ಸಚಿವರುಗಳ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ್ದವರಿಂದಲೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿರೋ ಸ್ಫೋಟಕ ಆಡಿಯೋ ಒಂದು ಲೀಕ್ ಆಗಿದೆ. ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಡೀಲ್ ಮಾಡ್ತಿರೋ ಸ್ಫೋಟಕ​​​ ಆಡಿಯೋ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ಆಡಿಯೋದಲ್ಲಿ ಗುತ್ತಿಗೆದಾರರ ಸಂಘದ ಪದಾಧಿಕಾರಿ ಡೀಲ್​​ ಮಾತಾಡಿರೋ ರೆಕಾರ್ಡ್​ ಆಗಿದ್ದು, ಗುತ್ತಿಗೆದಾರರ ಸಂಘದ ಬಗ್ಗೆಯೇ ಅನುಮಾನಗಳು ಶುರುವಾಗಿದೆ. PWD, ಇಂಧನ, ನಗರಾಭಿವೃದ್ಧಿ, ನೀರಾವರಿ ಇಲಾಖೆಯ ಬಡ ಗುತ್ತಿಗೆದಾರರಿಂದ ಗೌರವಾಧ್ಯಕ್ಷ, ನಿರ್ದೇಶಕರು ವಸೂಲಿ ಮಾಡ್ತಿದ್ದಾರೆ. ಬಿಡ್ ವಾಪಸ್ ಪಡೆಯುವಂತೆ ಮಂಡಳಿಯ ಗೌರವಾಧ್ಯಕ್ಷ ಜಗನ್ನಾಥ್, ನಿರ್ದೇಶಕ ಎಚ್.ಆರ್.ಚಿಂಚಳಿ ಗುತ್ತಿಗೆದಾರರಿಗೆ ಅವಾಜ್ ಹಾಕಿರೋದಾಗಿ ಆರೋಪ ಕೇಳಿ ಬಂದಿದೆ. ನಮಗೆ ಶೇಕಡ 3 ರಷ್ಟು ಕಮೀಷನ್ ನೀಡಬೇಕೆಂದು ಬೇಡಿಕೆ ಇಟ್ಟು, ಅಂತಿಮವಾಗಿ ಶೇ.2.5ರಷ್ಟು ಕಮೀಷನ್​ಗೆ ಒಪ್ಪಿರೋದು ಈ ಆಡಿಯೋದಲ್ಲಿ ರೆಕಾರ್ಡ್​ ಆಗಿದೆ
ಕರ್ನಾಟಕ ರಾಜ್ಯ ಕಾಂಟ್ಯಾಕ್ಟರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷರ ಜಗನ್ನಾಥ್ಿ ಶೇಗಜಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಜಗನ್ನಾಥ್ ಶೇಗಜಿ ಅವರು ಬೇರೆ ಕಂಟ್ರಾಕ್ಟರ್ ಗಳ ಜೊತೆ ಮಾತನಾಡಿರುವ ಆಡಿಯೋ ಲೀಕ್ ಆಗಿದೆ. ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷರಾಗಿದ್ದುಕೊಂಡೇ ಬಿಡ್ ವಾಪಸ್ ಪಡೆಯುವಂತೆ ಬೇರೆ ಸಣ್ಣ ಕಂಟ್ರಾಕ್ಟರ್ ಗಳಿಗೆ ಅವಾಜ್ ಹಾಕಿರುವ ಆರೋಪ ಜಗನ್ನಾಥ್ ಶೇಗಜಿ ಮೇಲೆ ಕೇಳಿ ಬಂದಿದೆ.
ಇದರಿಂದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಜಗನ್ನಾಥ್ ಶೇಗಜಿ ಅವರನ್ನು ಗೌರವ ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಿದ್ದಾರೆ.
ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷರಿಂದಲೇ ಭ್ರಷ್ಟಾಚಾರ ನಡೆದ ಹಿನ್ನಲೆಯಲ್ಲಿ ಗೌರವಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಲಾಗಿದೆ. ಸಣ್ಣ ಗುತ್ತಿಗೆದಾರರಿಂದ ಶೇ 3% ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಜಗನ್ನಾಥ್ ಶೇಗಜಿಯಿಂದ ಸ್ಪಷ್ಟನೆ
ಆದರೇ, ತಮ್ಮ ವಿರುದ್ಧದ ಆರೋಪವನ್ನು ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ್ ಶೇಗಜಿ ಸ್ಪಷ್ಟನೆ ನೀಡಿದ್ದಾರೆ. ಬಿಡ್ ವಿತ್ ಡ್ರಾ ಮಾಡಲು ನಾನು ಎಲ್ಲೂ ಯಾರಿಗೂ ಒತ್ತಾಯ ಮಾಡಿಲ್ಲ. ಇಂಜಿನಿಯರಗಳೇ ಗುತ್ತಿಗೆದಾರರ ನಡುವೆ ಕಾಂಪ್ರೋಮೈಸ್ ಮಾಡಿಸಿದ್ದಾರೆ. ವಿತ್ ಡ್ರಾ ಮಾಡುವವರಿಗೆ ಶೇ.3% ರಷ್ಟು ಹಣ ಕೊಡುವಂತೆ ಸ್ವತಃ ಮುಖ್ಯ ಇಂಜಿನಿಯರ್ ಹೇಳಿದ್ದಾರೆ.ಹಾಗಾಗಿ ಕೆಲ ಗುತ್ತಿಗೆದಾರರು ನನ್ನ ಬಳಿ ಬಂದು ಶೇ. 3% ಬೇಡ, ಶೇ 2.5% ಮಾಡಿಸಿ ಎಂದು ಬಂದಿದ್ದರು. ನೀವು ಕಾಂಪ್ರೋಮೈಸ್ ಮಾಡಿಕೊಂಡಿದ್ದಿರಿ. ಕಾಂಪ್ರೋಮೈಸ್ ಮಾಡಿಕೊಂಡ ಮೇಲೆ ಮಾತಾಡಿದಷ್ಟು ಕೊಡಿ ಅಂತ ಹೇಳಿದ್ದೇನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ.ಟೆಂಡರ್ ಬಾಕ್ಸ್ ಓಪನ್ ಮಾಡಲು ನಾನು ಒತ್ತಾಯಿಸಿದ್ದೇನೆ. ಇದಕ್ಕಾಗಿ ನನ್ನ ಮುಖಕ್ಕೆ ಮಸಿ ಬಳಿಯುವ ಕುತಂತ್ರದಿಂದ ಈ ಕೆಲಸ ಮಾಡಿದ್ದಾರೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಈ ರೀತಿ ಹಣ ಕೊಡುವ ಪದ್ದತಿ ಹಿಂದಿನಿಂದಲೂ ಇದೆ. ಈ ಪದ್ದತಿ ಬಂದ್ ಆಗಬೇಕು ಎಂದು ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷರಾಗಿದ್ದ ಜಗನ್ನಾಥ್ ಶೇಗಜಿ ಹೇಳಿದ್ದಾರೆ.
ಗುತ್ತಿಗೆದಾರರ ಸಂಘದ ರಾಜ್ಯ ಗೌರವಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಛಾಟನೆ ಮಾಡಿದ್ದಕ್ಕೆ ಕಲಬುರಗಿಯಲ್ಲಿ ಜಗನ್ನಾಥ್ ಶೇಗಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರಿಗೂ ವಿತ್ ಡ್ರಾ ಮಾಡುವಂತೆ ಒತ್ತಡ ಹೇರಿಲ್ಲ. ಯಾರಿಗೂ ನಾನು ಹಣ ಕೊಡುವಂತೆ ಒತ್ತಡ ಹಾಕಿಲ್ಲ. ನನಗೆ ನೋಟಿಸ್ ನೀಡಿ, ತನಿಖೆ ನಡೆಸಿ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಏಕಾಏಕಿ ಉಚ್ಛಾಟನೆ ಮಾಡಿದ್ದಾರೆ ಅಂದ್ರೆ ಅವರ ಬಂಡವಾಳ ಬಯಲು ಮಾಡುತ್ತೇನೆ. ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ದ ನಾನು ಶೇ. 40% ರ ಆರೋಪ ಮಾಡಿದ್ದೆ. ಇದುವೇ ನನ್ನ ಉಚ್ಛಾಟನೆಗೆ ಕಾರಣ ಎನಿಸುತ್ತಿದೆ. ಸರ್ಕಾರದ ಮೇಲೆ ನಾನು ಮಾಡಿರುವ ಆರೋಪಗಳಿಗೆ ನನ್ನ ಬಳಿ ಸಾಕ್ಷಿಗಳಿವೆ. ಸೂಕ್ತ ಸಂದರ್ಭದಲ್ಲಿ ಎಲ್ಲವನ್ನೂ ಬಯಲಿಗೆ ತರುವೆ. ನಾನು ಗುತ್ತಿಗೆದಾರರ ಪರವಾಗಿ ಹೋರಾಟ ಮಾಡಿದ್ದೇ ತಪ್ಪಾ? ಎಂದು ಪ್ರಶ್ನಿಸಿದ್ದಾರೆ.
ಈಗಲೂ ರಾಜ್ಯಾಧ್ಯಂತ ಪ್ರವಾಸ ಮಾಡುತ್ತೇನೆ. ಗುತ್ತಿಗೆದಾರರನ್ನು ಸಂಘಟಿತರನ್ನಾಗಿ ಮಾಡುತ್ತೇನೆ. ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಹೋರಾಟ ನಡೆಸುತ್ತೇನೆ. ನಾನು ಯಾವತ್ತಿಗೂ ಹೋರಾಟಕ್ಕೆ ಸಿದ್ದ. ಯಾವುದೇ ಸರ್ಕಾರ ಇದ್ದರೂ ಟೆಂಡರ್ ಪಡೆಯಬೇಕಾದರೇ, ಪರ್ಸೆಂಟೆಜ್ ನಡೆಯುತ್ತೆ ಎಂದು ಕಲಬುರಗಿಯಲ್ಲಿ ಗುತ್ತಿಗೆದಾರರ ಸಂಘದ ರಾಜ್ಯ ಗೌರವಾಧ್ಯಕ್ಷರಾಗಿದ್ದ ಜಗನ್ನಾಥ ಶೆಗಜಿ ಸ್ಪೋಟಕ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us