/newsfirstlive-kannada/media/media_files/2025/12/30/congress-announces-mlc-candidates-2025-12-30-16-51-49.jpg)
ಕಾಂಗ್ರೆಸ್ ನಿಂದ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆ
ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಶಿಕ್ಷಕರು ಮತ್ತು ಮೂರು ಪದವಿಧರರ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ನಾಲ್ವರ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಪ್ರಕಟಿಸಿದೆ. 2026ರ ನವಂಬರ್ ತಿಂಗಳಲ್ಲಿ ನಡೆಯುವ ಚುನಾವಣೆಗೆ 11 ತಿಂಗಳು ಮೊದಲೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ನಾಲ್ವರು ಅಭ್ಯರ್ಥಿಗಳ ಆಯ್ಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಮತ್ತೆ ಎಸ್.ಪುಟ್ಟಣ್ಣ ಅವರನ್ನೇ ಕಣಕ್ಕಿಳಿಸುತ್ತಿದೆ. ಪುಟ್ಟಣ ಈಗಾಗಲೇ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಇದೇ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಈಗ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಕ್ಷೇತ್ರದಲ್ಲಿ ಶಿಕ್ಷಕ ಸಮುದಾಯದ ಬೆಂಬಲವನ್ನು ಪುಟ್ಟಣ ಗಳಿಸಿಕೊಂಡಿದ್ದಾರೆ. ಪುಟ್ಟಣ ಎದುರಾಳಿಯಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಬೆಂಗಳೂರು ವಕೀಲದ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ ಕಣಕ್ಕಿಳಿಯುವ ಸಿದ್ದತೆ ನಡೆಸಿದ್ದಾರೆ. ರಂಗನಾಥ್ ಕೂಡ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.
ಇನ್ನೂ ಪಶ್ಚಿಮ ಪದವಿಧರರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಮೋಹನ್ ಲಿಂಬಿಕಾಯಿ ಅವರನ್ನು ಕಣಕ್ಕಿಳಿಸುತ್ತಿದೆ.
ಇನ್ನೂ ಅಗ್ನೇಯ ಪದವಿಧರರ ಕ್ಷೇತ್ರದಿಂದ ಶಶಿ ಹುಲಿಕುಂಟೆ ಮಠ ಎಂಬ ಯುವ ಕಾಂಗ್ರೆಸ್ ನಾಯಕನನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದೆ. ಶಶಿ ಹುಲಿಕುಂಟೆ ಮಠ ಇದೇ ಮೊದಲ ಭಾರಿಗೆ ವಿಧಾನ ಪರಿಷತ್ ಚುನಾವಣಾ ಅಖಾಡಕ್ಕಿಳಿಯುತ್ತಿದ್ದಾರೆ.
ಈಶಾನ್ಯ ಪದವಿಧರರ ಕ್ಷೇತ್ರದಿಂದ ಶರಣಪ್ಪ ಮಟ್ಟೂರುಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಟಿಕೆಟ್ ಘೋಷಿಸಿದೆ.
*ಬೆಂಗಳೂರು ಶಿಕ್ಷಕರ ಕ್ಷೇತ್ರ- ಪುಟ್ಟಣ್ಣ
*ಪಶ್ಚಿಮ ಪದವೀಧರ ಕ್ಷೇತ್ರ- ಮೋಹನ ಲಿಂಬೆಕಾಯಿ
*ಆಗ್ನೇಯ ಪದವೀಧರ ಕ್ಷೇತ್ರ- ಶಶಿ ಹುಲಿಕುಂಟೆಮಠ
*ಈಶಾನ್ಯ ಪದವೀಧರ ಕ್ಷೇತ್ರ-ಶರಣಪ್ಪ ಮಟ್ಟೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us