/newsfirstlive-kannada/media/media_files/2025/11/25/agri-minister-cheluvaraya-swamy-2025-11-25-17-35-12.jpg)
ಕೃಷಿ ಸಚಿವ ಚಲುವರಾಯಸ್ವಾಮಿ
ಡಿಸಿಎಂ ಡಿಕೆಶಿ ನನಗೂ ಒಂದು ಭಾರಿ ಸಿಎಂ ಅವಕಾಶ ನೀಡಿ ಎಂದು ಕಾಂಗ್ರೆಸ್ ಹೈಕಮ್ಯಾಂಡ್ ಗೆ ಕೇಳಿದ್ದಾರೆ ಎಂದು ರಾಜ್ಯದ ಕೃಷಿ ಸಚಿವ ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿದ್ದಾರೆ. ನಮ್ಮ ಪಕ್ಷದ ಹೈಕಮ್ಯಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತೆ ಎಂದು ಸಹ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ . ಎಲ್ಲವು ಸರಿ ಹೋಗುತ್ತೆ. ಶೀಘ್ರವಾಗಿ ಪಕ್ಷದ ಹೈಕಮಾಂಡ್ ಎಲ್ಲವನ್ನು ಸರಿ ಮಾಡುತ್ತಾರೆ. ಸಿಎಂ.ಕುರ್ಚಿ ಕಿತ್ತಾಟ ಎಲ್ಲವೂ ಮಾಧ್ಯಮಗಳ ಸೃಷ್ಟಿ ಅಷ್ಟೇ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಸದ್ಯಕ್ಕೆ ಈ ವಿಚಾರ ಹೆಚ್ಚಾಗಿ ಚರ್ಚೆ ಮಾಡೋದು ಬೇಡ. ನೀವು ಆ ಬಗ್ಗೆ ಚರ್ಚೆ ಮಾಡೋದು ಬಿಟ್ಟು ಕೃಷಿ ಮೇಳದ ವರದಿ ಮಾಡಿ ಎಂದು ಮಾಧ್ಯಮಗಳಿಗೆ ಚಲುವರಾಯಸ್ವಾಮಿ ಮನವಿ ಮಾಡಿದ್ದರು. ಇದರಿಂದ ಹೆಚ್ಚಿನ ರೈತರಿಗೆ ಅನುಕೂಲ ಆಗುತ್ತೆ. ರಾಜ್ಯದಲ್ಲಿ ಸಿ.ಎಂ. ಕುರ್ಚಿಯ ಚರ್ಚೆ ವಿಚಾರವನ್ನು ಮಾಧ್ಯಮಗಳು ಕೆಲ ದಿನಗಳು ದೂರ ಇಡುವಂತೆ ಸಲಹೆ ನೀಡಿದ್ದರು. ರಾಜಕೀಯ ಪಕ್ಷಗಳಲ್ಲಿ ಇದು ಸರ್ವೇ ಸಾಮಾನ್ಯ. ಸಚಿವ ಸಂಪುಟ ಪುನಾರಚನೆ ಬಗ್ಗೆ ಸಿ.ಎಂ. ಮಾತನಾಡಿದ್ದಾರೆ ಅಷ್ಟೇ. ಪಕ್ಷದ ಹೈ ಕಮಾಂಡ್ ಈ ಬಗ್ಗೆ ಎಲ್ಲವನ್ನು ಸ್ಪಷ್ಟವಾಗಿ ತೀರ್ಮಾನ ಮಾಡುತ್ತೆ . ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಸಿಎಂ, ಡಿಸಿಎಂ ಜೊತೆಯಲ್ಲೆ ಇದ್ದಾರೆ. ಆದ್ರೆ ಬಿಜೆಪಿಯಲ್ಲಿ ಯಾವುದೇ ನಾಯಕರಲ್ಲಿ ಈ ತರ ಇಲ್ಲ. ದೆಹಲಿಗೆ ಶಾಸಕರು ಹೋಗಿರುವುದು ಸಚಿವ ಸ್ಥಾನದ ಆಸೆಗಾಗಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2023/11/Siddaramaiah-Dkshivakumar-3.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us