/newsfirstlive-kannada/media/media_files/2025/08/11/dk_shivakumar_bng-2025-08-11-13-01-35.jpg)
ಬೆಂಗಳೂರು: ಪ್ರಧಾನಿ ಮೋದಿಯವರು ಬಂದು ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆ ಮಾಡಿ ಹೋಗಿದ್ದಾರೆ. ಅವರು ಬಂದು ಹೋದಾಗಿನಿಂದ ಬಿಜೆಪಿ ಸಂಸದರ ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕಿಡಿ ಕಾರುತ್ತಿದ್ದಾರೆ. ಮತ್ತೆ ವಾಗ್ದಾಳಿ ನಡೆಸಿ, ಕೆಲವು ಖಾಲಿ ಟ್ರಂಕ್ಗಳಿವೆ ಅವು ಜಾಸ್ತಿ ಶಬ್ಧ ಮಾಡುತ್ತಿವೆ ಎಂದು ಮತ್ತೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಪ್ರಧಾನಿ ಮೋದಿಯವರು ಬಂದಾಗ ಎರಡು ಕಾರ್ಯಕಾರ್ಯಕ್ರಮಗಳಿದ್ದವು. ಮೋದಿಯವರನ್ನು ಸ್ವಾಗತಿಸಬೇಕಿತ್ತು. ಆದರೆ ಆಗಲಿಲ್ಲ. ಅದಕ್ಕೆ ರೈಲ್ವೆ ಸಚಿವರಿಂದ ಸ್ವಾಗತಿಸುತ್ತೇವೆ ಎಂದರು ಅದಕ್ಕೆ ನಾನು ಓಕೆ ಎಂದೆ. ಬೆಂಗಳೂರು ಮಿನಿಸ್ಟರ್ ಆಗಿದ್ದರೂ ನನ್ನ ಡಿಪಾರ್ಟ್ಮೆಂಟ್ನಿಂದಲೇ ಕಾರ್ಯಕ್ರಮ, ನಾನು ಮಾತನಾಡುವುದೇ ಹೋಯಿತು ಎಂದು ಹೇಳಿದ್ದಾರೆ.
ಬೆಂಗಳೂರು ಎಷ್ಟು ಇಂಪಾರ್ಟೆಂಟ್, ಬೆಂಗಳೂರು ವಿಷ್ಯ ಏನು?. ಇಡೀ ವಿಶ್ವ, ಭಾರತವನ್ನು ಬೆಂಗಳೂರು ಮೂಲಕ ನೋಡಬೇಕು ಎನ್ನುವುದನ್ನು ಮೋದಿ ಅವರೇ ನಿನ್ನೆ ಒಪ್ಪಿಕೊಂಡಿದ್ದಾರೆ. ಇದನ್ನು ನಾನು ಒಬ್ಬನೇ ಮಾಡಿಲ್ಲ. ಎಲ್ಲ ಸರ್ಕಾರಗಳು ಸೇರಿ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ದುಡ್ಡು ಬೇಕು. ಕೇಂದ್ರ ಸರ್ಕಾರದಿಂದ ಹಣ ತರಲು ಬಿಜೆಪಿಯವರಿಗೆ ಸಾಧ್ಯವಿಲ್ಲ ಎಂದು ಹೆಸರು ಹೇಳದೇ ಬಿಜೆಪಿ ಸಂಸದರ ವಿರುದ್ಧ ಡಿ.ಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.
ಕೆಲವರು ಖಾಲಿ ಟ್ರಂಕ್ಗಳಿವೆ. ಅವು ತುಂಬಾ ಶಬ್ಧ ಮಾಡುತ್ತಿವೆ. ಅದಕ್ಕೆ ಸಂಸದರಿಗೂ ಕಳಿಸುತ್ತಿದ್ದೇನೆ. ಸಂಸತ್ನಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ. ಅಲ್ಲಿಂದ ನಗರಕ್ಕೆ 10 ರೂಪಾಯಿ ತಂದು ಬಿಡಿ ಸಾಕು. ಒಬ್ಬರು 1 ರೂಪಾಯಿ ತರಲು ಆಸಕ್ತಿ ತೋರಿಸಿಲ್ಲ. ಹಣಕಾಸು ಸಚಿವರನ್ನು ಕರೆ ತಂದಿಲ್ಲ. ಇವರಿಂದ ಬೆಂಗಳೂರಿಗೆ ಏನು ಸಹಾಯ ಇಲ್ಲ. ಅದಕ್ಕೆ ನಾನು ಪ್ರಧಾನಿಗಳಿಗೆ ಮನವಿ ಮಾಡಿಕೊಂಡಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
BJPಯಲ್ಲಿ ಕೆಲ ಕಾಲಿ ಟ್ರಂಕ್ಗಳು ಇದಾವೆ.. BJP MPಗಳ ವಿರುದ್ಧ ಡಿಕೆಶಿ ಕಿಡಿ | DCM DK Shivakumar | @newsfirstkannadaBJPಯಲ್ಲಿ ಕೆಲ ಕಾಲಿ ಟ್ರಂಕ್ಗಳು ಇದಾವೆ.. BJP MPಗಳ ವಿರುದ್ಧ ಡಿಕೆಶಿ ಕಿಡಿ | DCM DK Shivakumar | @newsfirstkannada
Posted by NewsFirst Kannada on Sunday, August 10, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ