/newsfirstlive-kannada/media/media_files/2025/11/26/dk-shivakumar-10-2025-11-26-15-57-36.jpg)
ರಾಜ್ಯ ಕಾಂಗ್ರೆಸ್​ನಲ್ಲಿ ಕುರ್ಚಿ ಗದ್ದಲಕ್ಕೆ ಸಿಎಂ ಡಿಸಿಎಂ ಬ್ರೇಕ್​ಫಾಸ್ಟ್​ ಮೂಲಕ ಬ್ರೇಕ್​ ಹಾಕಿದ್ದಾರೆ. ಸಿಎಂ-ಡಿಸಿಎಂ ಮನೆಯಲ್ಲಿ ಬ್ರೇಕ್​ಫಾಸ್ಟ್​​ ಆದ್ಮೇಲೆ ಜೋಡ್ತಿತ್ತುಗಳಂತೆ ಒಗ್ಗಟ್ಟು ಪ್ರದರ್ಶಿಸಿವೆ. ಇದ್ರ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್ ಡೆಲ್ಲಿಯಾತ್ರೆ ಮಾಡಿದ್ದಾರೆ. ಹೈಕಮಾಂಡ್ ನಾಯಕರನ್ನ ಭೇಟಿ ಮಾಡ್ತಾರಾ? ಇಲ್ವಾ ಎಂಬ ಕುತೂಹಲ ಮೂಡಿದೆ. ಗದ್ದುಗೆ ಗುದ್ದಾಟ ವಿಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ದಂಡಯಾತ್ರೆ!
ಡಿಸಿಎಂ ಡಿ.ಕೆ. ಶಿವಕುಮಾರ್ ದಿಢೀರ್ ದೆಹಲಿಯಾತ್ರೆ ಮಾಡಿದ್ದಾರೆ. ಕುರ್ಚಿ ಕದನಕ್ಕೆ ತಾತ್ಕಾಲಿಕ ಬ್ರೇಕ್ ಬೀಳ್ತಿದ್ದಂತೆ ರಾಷ್ಟ್ರರಾಜಧಾನಿಗೆ ತೆರಳಿದ್ದಾರೆ. ಈ ಬಾರಿ ಡೆಲ್ಲಿಗೆ ಹೋಗಿರೋದು ರಾಜಕೀಯಕ್ಕೋ? ಸರ್ಕಾರದ ಕೆಲಸಕ್ಕೋ ಎಂಬ ಪ್ರಶ್ನೆ ಮೂಡಿದೆ. ಇದ್ರ ಮಧ್ಯೆ ಡಿಸೆಂಬರ್ 8ರಂದು ರಾಜ್ಯದ ಎಲ್ಲಾ ಪಕ್ಷಗಳ ಸಂಸದರ ಸಭೆಯನ್ನ ರಾಜ್ಯ ಸರ್ಕಾರ ಕರೆದಿತ್ತು. ಆದ್ರೆ, ಸಂಸದರ ಸಭೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸುಜಲಾಂ ಭಾರತ್.. ಜಲ ಸಂರಕ್ಷಣೆಯತ್ತ ದಿಟ್ಟ ಹೆಜ್ಜೆಯಿಟ್ಟ ಕೇಂದ್ರ..!
ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲ್ಲ ಎಂದ ಡಿಕೆ!
ಪವರ್ ಶೇರಿಂಗ್ ಪ್ರಹಸನ ವೇಳೆ ಡಿ.ಕೆ. ಶಿವಕುಮಾರ್ ಡೆಲ್ಲಿ ನಾಯಕರನ್ನ ಭೇಟಿ ಮಾಡ್ತಾರಾ ಎಂಬ ಪ್ರಶ್ನೆ ಮೂಡಿತ್ತು. ಆದ್ರೆ, ದೆಹಲಿಗೆ ಹೋದ್ರೂ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲ್ಲ ಅಂತ ಡಿಸಿಎಂ ಹೇಳಿಕೆ ನೀಡಿದ್ದಾರೆ. ಸಿಎಂ ಜೊತೆ ನಡೆದ ಬ್ರೇಕ್​ಫಾಸ್ಟ್​​ ಮೀಟಿಂಗ್ ಬಗ್ಗೆಯೂ ಮಾತನಾಡಿದ್ದಾರೆ.
ಕೈನಲ್ಲಿ ಏನು ಘರ್ಷಣೆ ಆಗಿದ್ಯೋ ಗೊತ್ತಿಲ್ಲ.. ಬಿವೈವಿ ವ್ಯಂಗ್ಯ!
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಸಿಎಂ ಕುರ್ಚಿಗೆ ಪೈಪೋಟಿ ಹೆಚ್ಚಾಗುತ್ತಿದೆ ಅಂತ ಗುಡುಗಿದ್ದಾರೆ.
ರಾಜ್ಯದಲ್ಲಿ ಗದ್ದುಗೆ ಗುದ್ದಾಟ ಸದ್ಯಕ್ಕೆ ಸೈಲೆಂಟ್ ಆಗಿದೆ. ಆದ್ರೆ, ಡಿ.ಕೆ. ಶಿವಕುಮಾರ್ ಈ ವೇಳೆ ಡೆಲ್ಲಿಯಾತ್ರೆ ಮಾಡಿದ್ದೇಕೆ? ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲ್ಲ ಅಂದ್ಮೇಲೆ ರಾಷ್ಟ್ರರಾಜಧಾನಿಗೆ ಪಯಣಿಸಿದ್ದೇಕೆ? ಇದೆಲ್ಲವೂ ಕುತೂಹಲಕ್ಕೆ ಕಾರಣವಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us