/newsfirstlive-kannada/media/media_files/2025/10/02/cm-and-dcm-watching-empty-chair-2025-10-02-13-14-49.jpg)
CM ಸಿದ್ದರಾಮಯ್ಯ ಹಾಗೂ DCM ಡಿ.ಕೆ.ಶಿವಕುಮಾರ್
ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಇನ್ನೂ ಎರಡೂವರೆ ವರ್ಷ ನಾನೇ ಸಿಎಂ ಆಗಿ ಇರುತ್ತೇನೆ. ಮುಂದಿನ ವರ್ಷವೂ ನಾನೇ ಮೈಸೂರು ದಸರಾ ಜಂಬೂ ಸವಾರಿಗೆ ಪುಷ್ಪಾರ್ಚನೆ ಏಕೆ ಮಾಡಬಾರದು. ನಾನೇ ಪುಷ್ಪಾರ್ಚನೆ ಮಾಡುವ ಹೋಪ್ ಇದೆ ಎಂದಿದ್ದರು.
ಈ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗಲು ಕಾರಣ ಇದೆ. ಈ ವರ್ಷದ ನವಂಬರ್‌ಗೆ ಸಿದ್ದರಾಮಯ್ಯ ಸಿಎಂ ಆಗಿ ಎರಡೂವರೆ ವರ್ಷ ಪೂರ್ಣವಾಗುತ್ತೆ. ಜೊತೆಗೆ ಕರ್ನಾಟಕದಲ್ಲಿ ಸಿಎಂ ಸ್ಥಾನದಲ್ಲಿ ಸುದೀರ್ಘ ಅವಧಿಗೆ ಆಳ್ವಿಕೆ ನಡೆಸಿದ್ದು ದಿವಂಗತ ಡಿ.ದೇವರಾಜ ಅರಸು ಅವರು. ಅವರ ದಾಖಲೆಯನ್ನು ಸಿದ್ದರಾಮಯ್ಯ ಸಿಎಂ ಆಗಿ ಈ ವರ್ಷವೇ ಮುರಿಯುತ್ತಾರೆ. ಆದಾದ ಬಳಿಕ ಸಿಎಂ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಡುತ್ತಾರೆ ಎಂದೆಲ್ಲಾ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಜೊತೆಗೆ 2023 ರಲ್ಲಿ ಸಿದ್ದರಾಮಯ್ಯಗೆ ಸಿಎಂ ಹುದ್ದೆ ನೀಡುವಾಗ, ನಾವು ಹೇಳುವವರೆಗೂ ನೀವು ಸಿಎಂ ಆಗಿ ಇರಿ. ನಾವು ಹೇಳಿದಾಗ, ನೀವು ಹುದ್ದೆಯಿಂದ ಕೆಳಗಿಳಿದು ಬೇರೆಯವರಿಗೆ ಅವಕಾಶ ಕೊಡಬೇಕಾಗುತ್ತೆ ಎಂದು ಕಾಂಗ್ರೆಸ್ ಹೈಕಮ್ಯಾಂಡ್ , ಸಿದ್ದರಾಮಯ್ಯಗೆ ಹೇಳಿದೆಯಂತೆ. ಈ ಅಂತೆ ಕಂತೆಗಳ ಕಾರಣದಿಂದಾಗಿ ಸಿದ್ದರಾಮಯ್ಯ ನವಂಬರ್‌ಗೆ ಸಿಎಂ ಹುದ್ದೆಯಿಂದ ಕೆಳಗಿಳಿದು ತಾವು ಸೂಚಿಸಿದ ನಾಯಕರನ್ನು ಸಿಎಂ ಮಾಡಬಹುದು ಇಲ್ಲವೇ ಹೈಕಮ್ಯಾಂಡ್ ಸೂಚಿಸಿದವರು ಸಿಎಂ ಆಗುತ್ತಾರೆ ಎಂದೆಲ್ಲಾ ಚರ್ಚೆಗಳು ನಡೆಯುತ್ತಿವೆ. ಚರ್ಚೆ ಮಾಡೋರು ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ನಿನ್ನೆ ಕೂಡ ಮೈಸೂರಿನಲ್ಲಿ ಹೇಳಿದ್ದಾರೆ.
ಇದರ ಬಗ್ಗೆ ಇಂದು ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರಿಗೂ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡುವ ಹಕ್ಕಿಲ್ಲ. ಕುಣಿಗಲ್ ಶಾಸಕ ರಂಗನಾಥ್ ಸೇರಿದಂತೆ ಯಾರೂ ಸಹ ಮಾತನಾಡಬಾರದು. ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ಎಲ್ಲಿ ಇದೆ? ಮಾಧ್ಯಮದವರು ಬೇರೆ ರೀತಿಯಲ್ಲಿ ಬರೆಯುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ. ಯಾರು ಚರ್ಚೆ ಮಾಡಬಾರದು. ಇದರ ಬಗ್ಗೆ ಮಾತನಾಡುವವರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದರೂ ಪಕ್ಷಕ್ಕೆ ಡ್ಯಾಮೇಜ್. ನನ್ನ ಪರವಾಗಿ ಮಾತನಾಡಿದ್ದರೂ, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. ಇದರ ಬಗ್ಗೆ ಚರ್ಚೆ ಮಾಡಿದರೇ, ಪಕ್ಷ ವಿರೋಧಿ ಚಟುವಟಿಕೆ ಮಾಡಿದಂತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯನವರು ಏನು ಹೇಳಿದ್ದಾರೋ ಅಷ್ಟೇ . ಅವರು ಹೇಳಿದ್ದಾರಲ್ಲ ಹೈಕಮಾಂಡ್ ಏನು ಹೇಳ್ತಾರೋ ಅದನ್ನ ಕೇಳ್ತೀವಿ ಅಂತ . ಹೀಗಾಗಿ ನಮಗೆ ಪಕ್ಷ ಮುಖ್ಯವೇ ಹೊರತು, ವ್ಯಕ್ತಿಯಲ್ಲ. ಪಕ್ಷ ಹೇಳಿದಂಗೆ ಕೇಳಿಕೊಂಡು ಹೋಗ್ತಿವಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನೀವು ಹೇಳಿದ್ದು ನಮ್ಮ ಬಾಯಲ್ಲಿ ಹೇಳಿಸೋಕೆ ಹೋಗಬೇಡಿ, ನಾನು ಮೂರ್ಖನಲ್ಲ. ಬಿಜೆಪಿ ಪಾರ್ಟಿಯವರು ಅವರ ಪಾರ್ಟಿಯ ಕ್ರಾಂತಿಯ ಬಗ್ಗೆ ಚರ್ಚೆ ಮಾಡಿಕೊಂಡು ಹೋಗಲಿ . ನಾನು ಸೂಜಿ ದಾರ ಬೇಕಾದರೆ ಕಳಿಸಿಕೊಡ್ತೀನಿ . ಅವರು ಹೊಲಿದುಕೊಂಡು ಅವರ ಪಕ್ಷವನ್ನು ರೆಡಿ ಮಾಡಿಕೊಳ್ಳಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.