Advertisment

ನಾಳೆ ಡಿಸಿಎಂ ಡಿಕೆಶಿ ದೆಹಲಿ ಯಾತ್ರೆ: ನಮ್ಮನ್ನು ಪ್ರಚೋದಿಸಬೇಡಿ ಎಂದ ಶಾಸಕ ಇಕ್ಬಾಲ್ ಹುಸೇನ್‌

ನಾಳೆ ಇತ್ತ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಜಲಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಬಜೆಟ್ ಸಿದ್ದತಾ ಸಭೆ ನಡೆಸುತ್ತಿದ್ದಾರೆ. ಡಿಸಿಎಂ ಡಿಕೆಶಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಮತ್ತೊಂದೆಡೆ ಡಿಕೆಶಿ ಬೆಂಬಲಿಗ ಇಕ್ಬಾಲ್ ಹುಸೇನ್ ನಮ್ಮನ್ನು ಪ್ರಚೋದಿಸಬೇಡಿ ಎಂದು ಯತೀಂದ್ರಗೆ ವಾರ್ನಿಂಗ್ ನೀಡಿದ್ದಾರೆ.

author-image
Chandramohan
iqbal hussain
Advertisment

ಇನ್ನೆಷ್ಟು ದಿನ ಕೇಳಿಸ್ಕೊಂಡು ಸುಮ್ನೆ ಇರೋಕ್ಕಾಗುತ್ತೆ ಹೇಳಿ.. ಹಾದಿ-ಬೀದಿಯಲ್ಲಿ ನಮ್ಮ ತಂದೆನೇ ಉಳಿದ ಅವಧಿಗೂ ಸಿಎಂ, ಶಸ್ತ್ರತ್ಯಾಗನೂ ಇಲ್ಲ, ಪದತ್ಯಾಗನೂ ಇಲ್ಲ ಅಂತ ಡಾ.ಯತೀಂದ್ರ ಹೇಳಿದ್ದೇ ಹೇಳಿದ್ದು.. ಪದೇ ಪದೇ ಕಿಚ್ಚು ಹೊತ್ತಿಸ್ತಿರೋ ಸಿಎಂ ಪುತ್ರನ ಮೇಲೆ ಡಿಸಿಎಂ ಡಿಕೆಶಿ ಬಣ ಕೆರಳಿದೆ.. ಇವತ್ತು ಬಹಿರಂಗವಾಗಿಯೇ ಸಿಎಂ ಪುತ್ರಗೆ ಇಕ್ಬಾಲ್ ಹುಸೇನ್ ಎಚ್ಚರಿಕೆ ನೀಡಿದ್ದಾರೆ.. ಇತ್ತ ಕಾಂಗ್ರೆಸ್​​ನ ಕುರ್ಚಿ ಜಗಳ ಬಿಜೆಪಿಗೆ ರಸದೌತಣ ಬಡಿಸಿದೆ
ಸಂಕ್ರಾತಿನೂ ಕಳೆದಿತ್ತು. ಕ್ರಾಂತಿಯ ಗುಮ್ಮ ತಕ್ಕಮಟ್ಟಿಗೆ ಮಂಜುಗಡ್ಡೆಯಂತೆ ಹೆಪ್ಪುಗಟ್ಟಿತ್ತು..  ಈ ಮಧ್ಯೆ ಸಮಯವೇ ಎಲ್ಲದಕ್ಕೂ ಉತ್ತರ ನೀಡುತ್ತೆ, ಧೈರ್ಯಂ ಸರ್ವತ್ರ ಸಾಧನಂ ಮಂತ್ರ ಪಠಿಸಿತ್ತಾ ಡಿಸಿಎಂ ಡಿಕೆಶಿ ಕೂಡ ಸುಮ್ಮನಾಗಿಬಿಟ್ಟಿದ್ದರು.. ಆದ್ರೆ, ರಥಸಪ್ತಮಿ ಕಳೆದು ಮಾಘಮಾಸ ಆರಂಭ ಆಗ್ತಿದ್ದಂತೆ ಯತೀಂದ್ರ ಹಚ್ಚಿದ ದಳ್ಳುರಿ, ಸಿಎಂ ಕುರ್ಚಿ ಕುರಿತ ಹಸ್ತಕ್ಷೇಪ ಮತ್ತೆ ದಟ್ಟ ಹೊಗೆಯಾಡುವಂತೆ ಮಾಡಿದೆ..

ಪದೇ ಪದೇ ತಂದೆ ಪರ ಎಂಎಲ್ಸಿ ಡಾ. ಯತೀಂದ್ರ ಬ್ಯಾಟಿಂಗ್
ನಮ್ಮನ್ನು ಪ್ರಚೋದಿಸಬೇಡಿ..ಸಿಎಂ ಪುತ್ರಗೆ ಇಕ್ಬಾಲ್ ಪಂಚ್
ಇದೊಂದೇ ಬಾರಿ ಅಲ್ಲ ಬಿಡಿ.. ಸುಮಾರು ಸಾರಿ ಆಗೋಗಿದೆ.. ಸಿಎಂ ಬದಲಾವಣೆ ವಿಚಾರ ತಣ್ಣಗಾಗ್ತಿದ್ದಂತೆ ಸಿಎಂ ಪುತ್ರ ಡಾ.ಯತೀಂದ್ರ ಕಡ್ಡಿಗೀರಿ ಬೆಂಕಿ ಹಚ್ಚಿದ್ದೇ ಹಚ್ಚಿದ್ದು.. ಇದ್ರಿಂದ ಡಿಸಿಎಂ ಡಿಕೆಶಿ ಬಣದ ನಾಯಕರು ಉರಿದೋಗಿದ್ದು ಜಗಜ್ಜಾಹೀರು.. ಮೊನ್ನೆ ಪವರ್ ಶೇರಿಂಗ್ ವಿಚಾರ ಸೆಟ್ಲ್ ಆಗಿದೆ ಅಂತ ಡಾಕ್ಟರ್ ಕೊಟ್ಟ ಡೋಸ್​, ಡಿಕೆಶಿ ಕ್ಯಾಂಪ್​ನ​ ತಲೆಸುತ್ತುವಂತೆ ಮಾಡಿದೆ.. ಪದೇ ಪದೇ ತಂದೆ ಪರ ಬ್ಯಾಟ್ ಮಾಡ್ತಿರುವ ಯತೀಂದ್ರ ವಿರುದ್ಧ ಇವತ್ತು ರಾಮನಗರ ಎಂಎಲ್​ಎ ಇಕ್ಬಾಲ್ ಹುಸೇನ್ ಸಾಹೇಬ್ರು ನಖಶಿಖಾಂತ ಸಿಡಿದಿದ್ದಾರೆ.. ಎಲ್ಲರಿಗೂ ತಂದೆ ಮೇಲೆ ಪ್ರೀತಿ ಇದ್ದೇ ಇರುತ್ತೆ, ಈ ತರ ಹೇಳಿಕೆ ಕೊಟ್ಟು ಬೇರೆಯವರನ್ನ ಪ್ರವೋಕ್ ಮಾಡೋದು ಎಷ್ಟು ಸರಿ, ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಮಾತನ್ನು ನೆನಪಿಸಿ ಪಂಚ್ ಕೊಟ್ಟಿದ್ದಾರೆ..
ರಾಜ್ಯ ಕಾಂಗ್ರೆಸ್​ ಪಾಳಯದ ಕುರ್ಚಿ ಕಾದಾಟ ಬಿಜೆಪಿ ರಸದೌತಣ ಬಡಿಸ್ತಿದೆ.. ಕಾಂಗ್ರೆಸ್​​​ನಲ್ಲಿ ಎಲ್ಲಾ ಶಾಸಕರೂ ಜ್ಯೋತಿಷಿಗಳಾಗಿದ್ದಾರೆ.. ಇವರ ಜಗಳದಿಂದ ಅಭಿವೃದ್ಧಿ ಆಗ್ತಿಲ್ಲ.. ಗೊಂದಲ ಬಗೆಹರಿಸಬೇಕಾದ ಹೈಕಮಾಂಡ್​ ವೀಕ್ ಆಗಿದೆ. ಕೆಪ್ಯಾಸಿಟಿ ಇಲ್ಲ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಟೀಕೆಗಳಿಂದ ತಿವಿದಿದ್ದಾರೆ..
ಗದ್ದೆಯಲ್ಲೂ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಕೂಗು!
ಇತ್ತ ಸಿಎಂ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಡೀತಿದ್ರೆ ಅತ್ತ ಗದ್ದೆಯಲ್ಲೂ ಡಿಸಿಎಂ ಡಿಕೆ ಶಿವಕುಮಾರ್​ ಸಿಎಂ ಆಗಲಿ ಅನ್ನೋ ಕೂಗು ಕೇಳಿ ಬಂದಿದೆ.. ಮಂಡ್ಯದ ಮೊತ್ತಹಳ್ಳಿ ಗ್ರಾಮದಲ್ಲಿ ಭತ್ತದ ಪೈರಿನಲ್ಲಿ, ಡಿಕೆಶಿ​ ಸಿಎಂ ಆಗಲಿ ಅಂತ ಅಭಿಮಾನಿಗಳು ವಿಶೇಷ ಬೇಡಿಕೆ ಇಟ್ಟಿದ್ದಾರೆ. ದೇವರ ಆಶೀರ್ವಾದದಿಂದ ಸಿಎಂ ಆಗೇ ಆಗ್ತಾರೆ. ಸಿದ್ದರಾಮಯ್ಯ ಅವರು ಕೂಡ ತಮ್ಮ ಹುದ್ದೆ ಬಿಟ್ಟು ಕೊಡಲಿ ಅಭಿಮಾನಿಗಳು ಮನವಿ ಮಾಡ್ಕೊಂಡಿದ್ದಾರೆ.

Advertisment

DCM DKS PRAYER AT KENKERAMMA





ಕುರ್ಚಿ ಫೈಟ್ ನಡುವೆ ನಾಳೆ ಡಿಕೆಶಿ ದೆಹಲಿಯಾತ್ರೆ!
ನೀರಾವರಿ ಯೋಜನೆಗಳ ಸಂಬಂಧ ಡಿಕೆಶಿ ಟೂರ್
ಈ ಮಧ್ಯೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಾತ್ರೆ ಕೈಗೊಂಡಿದ್ದಾರೆ.. ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಯಾತ್ರೆ ಅಂತ ಖುದ್ದು ಡಿಸಿಎಂ ಅವರೇ ಮಾಹಿತಿ ನೀಡಿದ್ದಾರೆ.. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿ ಕುರ್ಚಿ ವಿಚಾರ ಚರ್ಚೆ ಮಾಡುವ ಸಾಧ್ಯತೆ ಇದೆ..

ಇತ್ತ ಮುಂದೆ  ಪಂಚ ರಾಜ್ಯಗಳ ಚುನಾವಣಾ ಅಗ್ನಿಪರೀಕ್ಷೆ ಎದುರಾಗಿದೆ, ಹೀಗಾಗಿ ಸಿಎಂ ಚೇಂಜ್ ವಿಚಾರ ಹೈಕಮಾಂಡ್​ಗೆ ಧರ್ಮ ಸಂಕಟ ತಂದಿಟ್ಟಿದೆ.. ಅಹಿಂದ ಮತಗಳ ಮಷಿನ್  ಸಿದ್ದರಾಮಯ್ಯರಿಂದ ಬಲವಂತಾಗಿ ಅಧಿಕಾರ ಕಿತ್ತುಕೊಳ್ಳುವ ಧೈರ್ಯ ತೋರಲಾಗ್ತಿಲ್ಲ.. ಇತ್ತ, ಡಿಸಿಎಂ ಡಿಕೆಶಿಗೂ ವಿವೇಕ ಜಾಗೃತ ಆದಂತಿದೆ.. ಡಿಕೆಶಿ ವಿವೇಕ ಹೊಂದಿದ್ದಾರೆಂದರೆ ಅವರೊಳಗೆ ಪಳಗಿದ ರಾಜಕಾರಣಿ ಕೆಲಸ ಮಾಡ್ತಿದ್ದಾನೆ ಅಂತಾನೇ ಅರ್ಥ.. ಪ್ರಯತ್ನ ವಿಫಲ ಆದ್ರೂ ಪ್ರಾರ್ಥನೆಯ ಫಲ ಸಿಗುವ ಅದಮ್ಯ ವಿಶ್ವಾಸ ಇನ್ನೂ ಇದೆ.. ಇದನ್ನೆಲ್ಲಾ ನೋಡಿದ್ರೆ ಸರ್ವಂ ಕಾಲ ಮಯಂ.. ಕಾಲಾಯ ತಸ್ಮೈ ನಮಃ ಎನ್ನಬಹುದು..

ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​ಫಸ್ಟ್​​​


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

CM SIDDARAMAIAH iqbal hussain DCM DKS DELHI TOUR CURIOSITY DCM DK SHIVAKUMAR
Advertisment
Advertisment
Advertisment