ಜಿಬಿಎ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆಗೆ ತೀರ್ಮಾನ : ಕರಡು ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆಗೆ ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಬ್ಯಾಲೆಟ್ ಪೇಪರ್ ಬಳಕೆ ಮಾಡಬೇಡಿ ಎಂದು ಸುಪ್ರೀಂಕೋರ್ಟ್ ಹೇಳಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. ಜಿಪಂ, ತಾಪಂ ಚುನಾವಣೆಗೂ ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗುತ್ತೆ.

author-image
Chandramohan
STATE ELECTION COMMISSIONER GS SANGRESHI

ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ

Advertisment
  • ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿಕೆ
  • ಜಿಬಿಎ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆಗೆ ತೀರ್ಮಾನ
  • ಮುಂದೆ ಜಿಪಂ, ತಾಪಂ ಚುನಾವಣೆಯಲ್ಲೂ ಬ್ಯಾಲೆಟ್ ಪೇಪರ್ ಬಳಕೆ

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಯ ಚುನಾವಣೆಗೆ ಇಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ನಾಳೆಯಿಂದ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಫೆಬ್ರವರಿ 6 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಾಳೆಯಿಂದ ಮನೆ ಮನೆಗೆ ಹೋಗಿ ಬಿಎಲ್‌ಓ ಗಳು ಮತದಾರರ ಪಟ್ಟಿ ಬಗ್ಗೆ ಪರಿಶೀಲನೆ ನಡೆಸುವರು.  ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೇ, ಹೆಸರು ತಪ್ಪಿದ್ದರೇ, ಬೇರೆ ಯಾವುದೇ ಲೋಪದೋಷ ಇದ್ದರೂ ಸರಿಪಡಿಸಿಕೊಳ್ಳಲು ಅವಕಾಶ ಇದೆ ಎಂದು ರಾಜ್ಯ   ಚುನಾವಣಾ ಆಯುಕ್ತ ಜಿ.ಎಸ್ ಸಂಗ್ರೇಶಿ ಹೇಳಿದ್ದಾರೆ. 
ಇನ್ನೂ  ಇಂದು  ಜಿಬಿಎ ಕರಡು ಮತದಾರರ ಪಟ್ಟಿ ಪ್ರಕಟವಾಗಿದೆ.  ಜನವರಿ 20 ರಿಂದ ಫೆಬ್ರವರಿ 3 ರವರೆಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.  ಆಕ್ಷೇಪಣೆಗಳ ವಿಲೇವಾರಿಗೆ ಫೆಬ್ರವರಿ 4 ರಿಂದ ಫೆಬ್ರವರಿ 18 ರವರೆಗೆ ದಿನಾಂಕ ನಿಗದಿ ಮಾಡಲಾಗಿದೆ.  ಮತದಾರರ ಅಂತಿಮ‌ ಪಟ್ಟಿಯನ್ನು  ಮಾರ್ಚ್ 16ಕ್ಕೆ‌ ಪ್ರಕಟ ಮಾಡಲಾಗುತ್ತೆ. 


ಜಿಬಿಎ ವ್ಯಾಪ್ತಿಯಲ್ಲಿ ಕರಡು‌ ಮತದಾರರ ಪಟ್ಟಿ ಪ್ರಕಟ

ಗ್ರೇಟರ್ ಬೆಂಗಳೂರು ಮತದಾರರ ಕರಡು ಪಟ್ಟಿಯ ಸಂಕ್ಷಿಪ್ತ ವಿವರ

ಗ್ರೇಟರ್ ಬೆಂಗಳೂರಲ್ಲಿ ಒಟ್ಟು ಮತದಾರರು 88,91,411 ಮತದಾರರು

ಪುರುಷರು 45,69,193 ಮತದಾರರು
ಮಹಿಳೆಯರು 43,20,583 ಮತದಾರರು
ಇತರೆ 1635

ಒಟ್ಟು 369 ವಾರ್ಡ್...‌ಒಟ್ಟು 8045 ಮತಗಟ್ಟೆಗಳು..

ಜಿಬಿಎ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆಗೆ ತೀರ್ಮಾನ


ಜಿಬಿಎ ಎಲೆಕ್ಷನ್  ನಲ್ಲಿ ಇವಿಎಂ ಅನ್ನು ಬಳಸದೇ ಇರಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಈ ಸಲ ಜಿಬಿಎ‌ ಚುನಾವಣೆಯನ್ನು  ಬ್ಯಾಲೇಟ್ ಪೇಪರ್ ಮೂಲಕ ನಡೆಯಲಿದೆ.  ಮೇ 25ರ ನಂತರ ಜಿಬಿಎ ಎಲೆಕ್ಷನ್ ನಡೆಯುವ ಸಾಧ್ಯತೆ ಇದೆ.   ಕಳೆದ ಸಲ‌ ಬಿಬಿಎಂಪಿ ಎಲೆಕ್ಷನ್ ಇವಿಎಂ  ಮೆಷಿನ್  ಮೂಲಕ ನಡೆದಿತ್ತು.  ಆದರೆ, ಈ ಸಲ ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. 
ನಮ್ಮದು ಸ್ವತಂತ್ರ ಸಂಸ್ಥೆ. ನಮ್ಮ ನಿರ್ಧಾರ ಇದು ಎಂದು   ರಾಜ್ಯ ಚುನಾವಣೆ ಆಯೋಗದ ಅಧ್ಯಕ್ಷ ಜಿ.ಎಸ್. ಸಂಗ್ರೇಶಿ ಹೇಳಿದ್ದಾರೆ.   ಬ್ಯಾಲೆಟ್ ಪೇಪರ್ ಹಾಗೂ ಇವಿಎಂ  ಎರಡರಲ್ಲೂ ದೋಷವಿಲ್ಲ. ಸುಪ್ರೀಂಕೋರ್ಟ್ ನಲ್ಲೂ ಬ್ಯಾಲೆಟ್ ಪೇಪರ್ ಬಳಸಬೇಡಿ ಅಂತ ಹೇಳಿಲ್ಲ  ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಜಿ.ಎಸ್.ಸಂಗ್ರೇಶಿ ಹೇಳಿದ್ದಾರೆ. 
ನಾವು ಏಕೆ ಬ್ಯಾಲೆಟ್ ಪೇಪರ್ ಬಳಸಬಾರದು?  ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆ  ಕೂಡ ಬ್ಯಾಲೆಟ್ ಪೇಪರ್ ಮೂಲಕ  ನಡೆಸುತ್ತೇವೆ ಎಂದು ಜಿ.ಎಸ್ ಸಂಗ್ರೇಶಿ ಹೇಳಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Ballot paper GBA Election
Advertisment