/newsfirstlive-kannada/media/post_attachments/wp-content/uploads/2023/06/RAMALINGA_REDDY_DK_SHIVAKUMAR-300x169.jpg)
ರಾಮಲಿಂಗಾರೆಡ್ಡಿ ಹಾಗೂ ಡಿಸಿಎಂ ಡಿಕೆಶಿ
ಇವಿಎಂ ಬಳಕೆಗೆ ಕಾಂಗ್ರೆಸ್ ವಿರೋಧ ಮಾಡುತ್ತಿರುವುದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವಿಎಂ ಮೂಲಕ ಕಾಂಗ್ರೆಸ್ ಪಕ್ಷ 136 ಕ್ಷೇತ್ರಗಳಲ್ಲಿ ಗೆದ್ದಿದೆ. ಇವಿಎಂ ಬಳಸಿ ಚುನಾವಣೆ ಮಾಡಿದರೇ, ಮೋಸ ಮಾಡಲಾಗುತ್ತೆ ಎನ್ನುವುದಾದರೇ, ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಲಿ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಆಗ್ರಹಿಸಿದ್ದಾರೆ.
ಇದಕ್ಕೆ ಕಲಬುರಗಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ಇವಿಎಂ ತಯಾರಿಸಿದ್ದೇ ಜರ್ಮನಿಯವರು. ಆದರೆ ಅಲ್ಲಿನ ಸುಪ್ರೀಂ ಕೋರ್ಟ್ ಇವಿಎಂ ಬೇಡ ಅಂತ ತೀರ್ಮಾನ ಮಾಡಿದೆ. ಅಮೇರಿಕಾದಲ್ಲಿಯೂ ಇವಿಎಂ ಇಲ್ಲ, ಇಂಗ್ಲೆಂಡ್ ನಲ್ಲಿಯೂ ಇವಿಎಂ ಇಲ್ಲ, ಫ್ರಾನ್ಸ್ ನಲ್ಲಿಯೂ ಇವಿಎಂ ಇಲ್ಲ. ಜಗತ್ತಿನ ಮುಂದುವರೆದ ಯಾವುದೇ ರಾಷ್ಟ್ರಗಳು ಇವಿಎಂ ಉಪಯೋಗಿಸುತ್ತಿಲ್ಲ. ನಮ್ಮಲ್ಲಿ ರಾಜೀವ್ ಗಾಂಧಿ ಸರ್ಕಾರ ಇದ್ದಾಗ ಚುನಾವಣಾ ಆಯೋಗ, ಸರ್ಕಾರ ಇವಿಎಂ ಬಳಕೆಗೆ ತೀರ್ಮಾನ ಕೈಗೊಂಡಿದ್ದು ಹೌದು. ಆದರೆ ಇತ್ತೀಚಿಗೆ ಇದರಲ್ಲಿ ಮೋಸ ಆಗುತ್ತಿದೆ ಎನ್ನುವ ಡೌಟ್ ಬರುತ್ತಿದೆ. ಎಲ್ಲಾ ಮುಂದುವರೆದ ದೇಶಗಳೇ ಬಳಸದೆ ಇರುವಾಗ ನಾವ್ಯಾಕೆ ಇವಿಎಂ ಬಳಸಬೇಕು. ಇದರಿಂದ ನಾವು ತಂತ್ರಜ್ಞಾನದಿಂದ ಹಿಂದೆ ಸರಿಯುತ್ತಿದ್ದೇವೆ ಅಂತೇನಿಲ್ಲ. ಲಕ್ಷ ಲಕ್ಷ ಕಿ.ಮೀ. ದೂರದ ಗ್ರಹ ಗಳಿಗೆ ಉಪಗ್ರಹ ಬಳಸಿ ಮನುಷ್ಯರನ್ನು ಕಳುಹಿಸಿ ಇಲ್ಲಿಂದಲೇ ಮಾನಿಟರ್ ಮಾಡಲ್ವಾ ? ಇದು ಸಾಧ್ಯ ಇರುವಾಗ ಎಲ್ಲೋ ಕೂತು ಇವಿಎಂ ಮಾನಿಟರ್ ಮಾಡಕ್ಕಾಗಲ್ವಾ ? ಎನ್ನುವ ಸಂಶಯ ಇದೆ. ಬ್ಯಾಲೆಟ್ ಪೇಪರ್ ಆದ್ರೆ ಯಾವುದೇ ಮೋಸ ಆಗಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇನ್ನೂ ಕಾಂಗ್ರೆಸ್ ನವರು ತಂತ್ರಜ್ಞಾನ ಬಳಕೆಯನ್ನು ಬಿಟ್ಟು, ವಾಪಸ್ ಶಿಲಾಯುಗಕ್ಕೆ ಹೋಗ್ತಿದಾರೆ ಎನ್ನುವ ಬಿಜೆಪಿ ಮುಖಂಡ ಸುರೇಶಕುಮಾರ ಹೇಳಿಕೆಗೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, ಶಿಲಾಯುಗ ಅಲ್ಲ, ಮೋಸದ ಯುಗದಿಂದ ಯಾವ ಯುಗಕ್ಕೆ ಬಂದ್ರೂ ತೊಂದರೆ ಇಲ್ಲ. ಸದ್ಯ ಅವರಿರೋದು ಮೋಸದ ಯುಗದಲ್ಲಿ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಮೋಸ ಮಾಡುವವರು ಎಲ್ಲಾ ಎಲೆಕ್ಷನ್ ನಲ್ಲಿ ಮಾಡೋದಿಲ್ಲ. ಸಮಯ ಸಂದರ್ಭ ನೋಡಿಕೊಂಡು ಯಾವಾಗ ಬೇಕು ಆಗ ಮಾತ್ರ ಮೋಸ ಮಾಡ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.