/newsfirstlive-kannada/media/media_files/2025/11/24/dk-camp-mla-in-delhi-hotel-2025-11-24-18-27-45.jpg)
ದೆಹಲಿಯಲ್ಲಿ ಡಿಕೆ ಬಣದ ಶಾಸಕರಿಂದ ಲಾಬಿ
ಇತ್ತ ಡಿಸಿಎಂ ಡಿಕೆಶಿ ಬಣ ಡೆಲ್ಲಿ ಅಂಗಳದಲ್ಲಿ ಕೂತು ರಣವ್ಯೂಹ ರಚಿಸ್ತಿದೆ.. ಮೂರು ಹಂತದ ದಾಳ ಉರುಳಿಸಿದ ಡಿಕೆಶಿ, ಒಂದು ಡೆಲ್ಲಿ, ಎರಡು ಸಿದ್ದು ಆಪ್ತರ ಆಪರೇಷನ್​​.. ಮೂರು ಖುದ್ದು ತಾವೇ ಇಡೀ ಕಾರ್ಯಾಚರಣೆ ನೋಡ್ತಿದ್ದಾರೆ..
ರಾಜ್ಯ ಕಾಂಗ್ರೆಸ್‌ನ ಬಣ ರಾಜಕಾರಣ ಸ್ಫೋಟಗೊಳ್ತಿದೆ.. ಅಸ್ತ್ರ-ಪ್ರತ್ಯಾಸ್ತ್ರಗಳು ಪ್ರಯೋಗ ಆಗ್ತಿದ್ದು, ಎದುರಾಳಿಗಳನ್ನ ಕಟ್ಟಿಹಾಕಲು ಯೋಜನೆಗಳು ಸಿದ್ಧಗೊಳ್ತಿವೆ. ಎರಡೂ ಬಣಗಳ ಮೇಲಾಟದಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ಅಧಿಕಾರ ಹಸ್ತಾಂತರಕ್ಕೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಶಿವಕುಮಾರ್ ಬಣದ ಶಾಸಕರ ದಂಡೊಂದು ಮತ್ತೆ ಡೆಲ್ಲಿಯಲ್ಲಿ ಠಿಕಾಣಿ ಹೂಡಿದೆ..
ದೆಹಲಿಯಲ್ಲಿ ಡಿಕೆ ಬಣದ ‘ಸೆಕೆಂಡ್ ಇನ್ನಿಂಗ್ಸ್ ಬ್ಯಾಟಿಂಗ್
ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವಂತೆ ಬಿಗಿಯಾದ ಪಟ್ಟು!
ಅಧಿಕಾರದ ಇಂದ್ರಜಾಲ ಭೇದಿಸಲು ಡಿಸಿಎಂ ಡಿಕೆಶಿ ಈಗ ಡೆಲ್ಲಿ ಅಂಗಳದ ರಂಗೋಲಿಗೆ ಕೆಳಗೆ ನುಸುಳ್ತಿದ್ದಾರೆ.. ಡಿಕೆಶಿ ಬಣದ ತಂಡ ದೆಹಲಿಗೆ ತೆರಳಿ ಪ್ರೆಷರ್​​ ಪಾಲಿಟಿಕ್ಸ್​​ಗೆ ಮುಂದಾಗಿದೆ.. ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ ಡಿಕೆಶಿ ಪರ ಬ್ಯಾಟ್​​​ ಬೀಸ್ತಿದ್ದಾರೆ..
ಡೆಲ್ಲಿಯಲ್ಲಿ ಡಿಕೆ ಬಣದ ಚದುರಂಗ!
1. ಹೆಚ್.ಸಿ.ಬಾಲಕೃಷ್ಣ, ಮಾಗಡಿ ಶಾಸಕ
2. ಶರತ್ ಬಚ್ಚೇಗೌಡ, ಹೊಸಕೋಟೆ ಶಾಸಕ
3. ನಯನಾ ಮೋಟಮ್ಮ, ಮೂಡಿಗೆರೆ ಶಾಸಕಿ
4. ಇಕ್ಬಾಲ್ ಹುಸೇನ್, ರಾಮನಗರ ಶಾಸಕ
5. ಉದಯ ಕದಲೂರು, ಮದ್ದೂರು ಶಾಸಕ
6. ಬಾಬಾ ಸಾಹೇಬ್​​ ಪಾಟೀಲ್​​, ಕಿತ್ತೂರು ಶಾಸಕ
7. ಮಹೇಂದ್ರ ತಮ್ಮಣ್ಣನವರ್​, ಕುಡುಚಿ ಶಾಸಕ
8. ಬಸವರಾಜ್​ ಶಿವಗಂಗಾ, ಚನ್ನಗಿರಿ ಶಾಸಕ
ಮಾಗಡಿಯ ಹೆಚ್.ಸಿ.ಬಾಲಕೃಷ್ಣ ಈ ತಂಡದ ಹಿರಿಯ ಶಾಸಕ.. ಉಳಿದವರು ಒಂದು ಬಾರಿ ಗೆದ್ದು ಶಾಸಕರಾದವರು. ಹೊಸಕೋಟೆಯ ಶರತ್ ಬಚ್ಚೇಗೌಡ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ರಾಮನಗರ ಶಾಸಕ ಇಕ್ಬಾಲ್ ಹುಸೇನ್.. ಮದ್ದೂರು ಶಾಸಕ ಉದಯ ಕದಲೂರು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.. ಅಚ್ಚರಿ ಎಂದ್ರೆ ಸಾಹುಕಾರ್​​​ ಜಿಲ್ಲೆ ಬೆಳಗಾವಿಯ ಎರಡು ಕ್ಷೇತ್ರದ ಶಾಸಕರು ಈ ಬಣದಲ್ಲಿ ಕಾಣಿಸಿಕೊಂಡಿದ್ದಾರೆ.. ಕಿತ್ತೂರು ಶಾಸಕ ಬಾಬಾ ಸಾಹೇಬ್​​ ಪಾಟೀಲ್​​, ಕುಡುಚಿ ಶಾಸಕ ಮಹೇಂದ್ರ ತಮ್ಮಣ್ಣನವರ್​ ಡಿಕೆಶಿ ಬಣದ ಬ್ಯಾಚ್​ನಲ್ಲಿ ಕಾಣಿಸಿದ್ದಾರೆ.. ಇನ್ನು, ಡಿಕೆಶಿ ಶಿಷ್ಯೋತ್ತಮ ಚನ್ನಗಿರಿಯ ಬಸವರಾಜ್​ ಶಿವಗಂಗಾ ಕೂಡ ದೆಹಲಿಯ ತಂಡದ ಜೊತೆಗಿದ್ದಾರೆ..
/filters:format(webp)/newsfirstlive-kannada/media/media_files/2025/11/24/dk-faction-mla-lobby-at-delhi-2025-11-24-18-12-39.jpg)
ಆಪ್ತರಿಂದಲೇ ಸಿದ್ದರಾಮಯ್ಯಗೆ ಸಂದೇಶ ರವಾನೆಗೆ ತಂತ್ರ
ಸಿಎಂ ಅತ್ಯಾಪ್ತರಾದ ಜಾರ್ಜ್ ಭೇಟಿ ಮಾಡಿ ಡಿಕೆಶಿ ಒತ್ತಡ
ಕಾಂಗ್ರೆಸ್​​ ಸೂತ್ರವಿಲ್ಲದ ಗಾಳಿಪಟವಾಗಿದೆ.. ಈ ಗಾಳಿಪಟಕ್ಕೆ ಈಗ ಕೆ.ಜೆ.ಜಾರ್ಜ್ ಆಸರೆ ರೀತಿ ಕಾಣ್ತಿದ್ದಾರೆ.. ಸಿದ್ದರಾಮಯ್ಯಯ ಪರಮಾಪ್ತರಾದ ಜಾರ್ಜ್​​​ ಈಗ ಸಂಧಾನಕಾರನಂತೆ ಡಿಕೆಶಿಗೆ ಕಾಣ್ತಿದ್ದಾರೆ.. ನಿನ್ನೆ ಸಿದ್ದರಾಮಯ್ಯ ಮನೆಗೆ ಬಂದೋಗಿದ್ದ ಕೆ.ಜೆ. ಜಾರ್ಜ್​ರನ್ನ ಡಿಸಿಎಂ ಡಿಕೆಶಿ ರಾತ್ರಿ ಭೇಟಿ ಆಗಿದ್ದಾರೆ.. ಸಿದ್ದರಾಮಯ್ಯ ಮನವೊಲಿಸುವ ಬಗ್ಗೆ ಡಿಕೆ ಶಿವಕುಮಾರ್ ಮಾತಾಡಿದ್ರಾ ಅನ್ನೋ ಚರ್ಚೆ ಇದೆ..
ಡಿಕೆ ‘ಆಪ್ತ’ ಆಪರೇಷನ್!
ಒಬ್ಬೊಬ್ಬರೆ ಕಾಂಗ್ರೆಸ್​​​ ಹಿರಿಯ ನಾಯಕರ ಭೇಟಿ ಮಾಡ್ತಿರುವ ಡಿಕೆಶಿ
ಸಿಎಂಗೆ ತಿಳಿ ಹೇಳುವಂತೆ ಹಿರಿಯ ನಾಯಕರ ಬಳಿ ಡಿಸಿಎಂ ಚರ್ಚೆ
ಸ್ಥಾನ ಬಿಟ್ಟುಕೊಡುವಂತೆ ಸಿಎಂ ಆಪ್ತ ಜಾರ್ಜ್ ಮುಖಾಂತರ ಒತ್ತಡ
ಕಳೆದ ರಾತ್ರಿ ಸಚಿವ ಜಾರ್ಜ್ ನಿವಾಸಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿಕೆ
ಒಪ್ಪಂದ ಪ್ರಕಾರ ಬಿಟ್ಟು ಕೊಡುವಂತೆ ಸಿಎಂಗೆ ಹೇಳಿ ಅಂತ ಮನವಿ
ಅದರೆ ಸಿಎಂ ಸ್ಥಾನ ಬಿಟ್ಟುಕೊಡುವ ಮೋಡ್​ನಲ್ಲಿಲ್ಲ ಎಂದ ಜಾರ್ಜ್​​​
ಪಕ್ಷಕ್ಕೋಸ್ಕರ ಪಟ್ಟಿರೋ ಕಷ್ಟದ ಬಗ್ಗೆ ಜಾರ್ಜ್​​​ ಬಳಿ ಡಿಕೆಶಿ ವಿವರಣೆ
ಈ ಕುರಿತು ಸಿಎಂ ಗಮನಕ್ಕೆ ತರೋದಾಗಿ ಡಿಕೆಶಿಗೆ ಜಾರ್ಜ್ ಭರವಸೆ
ಒಬ್ಬೊಬ್ಬರೆ ಹಿರಿಯ ನಾಯಕರ ಭೇಟಿ ಮಾಡಿ ಸಿಎಂಗೆ ತಿಳಿ ಹೇಳುವಂತೆ ಡಿಕೆಶಿ ಚರ್ಚೆ ನಡೆಸ್ತಿದ್ದಾರೆ.. ಸ್ಥಾನ ಬಿಟ್ಕೊಡುವಂತೆ ಸಿಎಂ ಆಪ್ತ ಜಾರ್ಜ್ ಮುಖಾಂತರ ಒತ್ತಡ ಹಾಕಲು ಯತ್ನಿಸಿದ್ದಾರೆ.. ಕಳೆದ ರಾತ್ರಿ ಜಾರ್ಜ್ ಮನೆಗೆ ಭೇಟಿ ನೀಡಿದ್ದ ಡಿಕೆಶಿ, ಒಪ್ಪಂದದ ಪ್ರಕಾರ ಬಿಟ್ಟು ಕೊಡುವಂತೆ ಸಿಎಂಗೆ ಹೇಳಿ ಅಂತ ಮನವಿ ಮಾಡಿದ್ದಾರೆ.. ಅದ್ರೆ ಸಿಎಂ ಸ್ಥಾನ ಬಿಟ್ಟುಕೊಡುವ ಮೋಡ್​ನಲ್ಲಿಲ್ಲ ಅಂತ ಜಾರ್ಜ್​​​ ಕಡ್ಡಿಮುರಿದಂತೆ ತಿಳಿಸಿದ್ದಾರಂತೆ.. ಈ ವೇಳೆ, ಪಕ್ಷಕ್ಕೋಸ್ಕರ ಪಟ್ಟಿರೋ ಕಷ್ಟದ ಬಗ್ಗೆ ಡಿಕೆಶಿ ವಿವರಣೆ ನೀಡಿದ್ದಾರೆ.. ಫೈನಲಿ ಒಂದ್ಸಲ ಸಿಎಂ ಗಮನಕ್ಕೆ ತರೋದಾಗಿ ಜಾರ್ಜ್ ಹೇಳಿದ್ದಾರೆ ಅಂತ ಗೊತ್ತಾಗಿದೆ..
ಇದೇ ವಿಚಾರವನ್ನ ಯಾದಗಿರಿಯಲ್ಲಿ ಮಾತ್ನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಡಿಕೆಶಿ ಅವರಿಗೆ ತಾಳ್ಮೆಯಿಂದ ಇರು ಅಂತ ಹೇಳೋಕೆ ನಾನ್ಯಾರು. ತಾಳ್ಮೆಯಿಂದ ಇರು ಅಂತ ಹೇಳೋಕೆ ಯಾರಾದರೂ ನನಗೆ ಹಕ್ಕು ಕೊಟ್ಟಿದ್ದಾರಾ? ಕಾಂಗ್ರೆಸ್​ನಲ್ಲಿ ಬಂಡಾಯವೇ ಇಲ್ಲ, ಶಮನ ಎಲ್ಲಿಂದ ಅಂತ ಪ್ರಶ್ನೆ ಮಾಡಿದ್ರು.. ಅಲ್ಲದೆ, ಸಂಧಾನಕ್ಕೆ ಎಐಸಿಸಿ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ ಅಂದ್ರು..
ನಮ್ಮ ಮನೆಯಿಂದ ನೂರು ಮೀಟರ್​​​ ಅಷ್ಟೇ ಖರ್ಗೆ ಮನೆ ದೂರ ಎಂದಿದ್ದ ಡಿಕೆಶಿ, ಮೂರು ದಿನದಿಂದ ಬೆಂಗಳೂರಿನಲ್ಲೇ ಖರ್ಗೆ ಇದ್ರೂ ಭೇಟಿ ಮಾಡಿಲ್ಲ.. ಸಿಎಂ ಸಿದ್ದರಾಮಯ್ಯ ಖರ್ಗೆಯನ್ನ ಭೇಟಿ ಮಾಡಿದರೂ ಡಿಕೆ ಸಹೋದರರು ಮಾತ್ರ ಅತ್ತ ಕಡೆ ಸುಳಿದಿಲ್ಲ.. ಒಟ್ಟಾರೆ, ಡಿಸಿಎಂ ಡಿಕೆಶಿ ಪಟ್ಟಕ್ಕಾಗಿ ಹತ್ತಾರು ತಂತ್ರಗಳನ್ನ ಏಕಕಾಲದಲ್ಲಿ ಪ್ರಯೋಗಕ್ಕಿಳಿಸಿದ್ದಾರೆ.. ಒಂದಕ್ಕಾದ್ರೂ ಹಕ್ಕಿ ಬೀಳುವ ಬಯಕೆ..
ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us