ಆರ್ಎಂಸಿ ಯಾರ್ಡ್ ಮಹಿಳೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರಿಗೆ ಕ್ಲೀನ್ ಚೀಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಎಸ್ಐಟಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ. ಕ್ಲೀನ್ ಚೀಟ್ ಸಿಕ್ಕ ಬಳಿಕ ಮಾತನಾಡಿದ್ದ ಮುನಿರತ್ನ ಅವರು ಡಿ.ಕೆ ಸುರೇಶ್ ಅವರು ಸೋತ ಮೇಲೆ ನನಗೆ ಸಮಸ್ಯೆಗಳು ಬರಲು ಶುರುವಾದವು ಎಂದಿದ್ದರು. ಸದ್ಯ ಈ ಸಂಬಂಧ ಡಿ.ಕೆ ಸುರೇಶ್ ಅವರು ಮಾತನಾಡಿದ್ದಾರೆ.
ಯಾರಿಗೆ ಎಂಎಲ್ಎ ಆಗಬೇಕು ಎನ್ನುವ ಆಸೆ ಇದೆಯೋ, ಇಲ್ವೋ ಗೊತ್ತಿಲ್ಲ. ಆದರೆ ಮುನಿರತ್ನಗೆ ಆಸೆ ಇದೆ ಅಲ್ವಾ?. ಹಾಗಾಂತ ಮುನಿರತ್ನನ ಫ್ರೀಯಾಗಿ ಬಿಟ್ಟು ಬಿಡೋಕೆ ಆಗುತ್ತಾ?. ಅಪಪ್ರಚಾರ, ಅವ್ಯವಹಾರ, ಅಚಾತುರ್ಯಗಳನ್ನು ಮಾಡಿದ್ದಾರಲ್ಲ, ಆ ಬಗ್ಗೆ ಯಾರು ಮಾತನಾಡಬಾರದಾ?. ಒಕ್ಕಲಿಗರ ತಾಯಿನ, ಹೆಂಡತಿನ ಕರೀತಾರೆ, ದಲಿತರನ್ನ ಹೀಯಾಳಿಸಿ ಮಾತನಾಡಿಸ್ತಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ