/newsfirstlive-kannada/media/media_files/2025/11/22/cm-siddaramaiah-and-dks-2025-11-22-18-35-39.jpg)
ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಫೈಟ್ ದಿನೇ ದಿನೇ ಬಿರುಸಾಗುತ್ತಿದೆ. ಡಿಸಿಎಂ ಡಿಕೆಶಿ ಕೂಡ ನಂಬರ್ ಗೇಮ್ ಗೆ ಇಳಿದಿದ್ದಾರೆ. ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುವ ಆಟ ಆರಂಭಿಸಿದ್ದಾರೆ. ತಮ್ಮ ಕಡೆಯೂ ಶಾಸಕರ ಬೆಂಬಲ ಇದೆ ಎಂದು ಕಾಂಗ್ರೆಸ್ ಹೈಕಮ್ಯಾಂಡ್‌ಗೆ ತೋರಿಸುವ ಪ್ರಯತ್ನ ಆರಂಭಿಸಿದ್ದಾರೆ. ಇದರ ಭಾಗವಾಗಿಯೇ ಮಾಗಡಿ ಶಾಸಕ ಬಾಲಕೃಷ್ಣ, ಇಕ್ಬಾಲ್ ಹುಸೇನ್, ನಯನಾ ಮೋಟಮ್ಮ, ರವಿಕುಮಾರ್ ಗಣಿಗ, ಬಾಳಾಸಾಹೇಬ್ ಪಾಟೀಲ್, ಮಹೇಂದ್ರ ತಮ್ಮಣ್ಣನವರ್, ಚನ್ನಗಿರಿ ಕ್ಷೇತ್ರದ ಬಸವರಾಜ್ ಶಿವಗಂಗಾ ಸೇರಿದಂತೆ ಅನೇಕ ಶಾಸಕರನ್ನು ದೆಹಲಿಗೆ ಕಳುಹಿಸಿ ಕೆ.ಸಿ.ವೇಣುಗೋಪಾಲ್ ರನ್ನು ಭೇಟಿಯಾಗುವಂತೆ ಮಾಡುತ್ತಿದ್ದಾರೆ. ಮೊದಲ ಭಾರಿ ಶಾಸಕರಾಗಿ ಆಯ್ಕೆಯಾಗಿರುವ ಅನೇಕರನ್ನು ಡಿಕೆಶಿ ತಮ್ಮ ಕಡೆಗೆ ಈಗಾಗಲೇ ಸೆಳೆದಿದ್ದಾರಂತೆ. ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಎಚ್.ಡಿ.ತಮ್ಮಯ್ಯ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕರನ್ನು ತಮ್ಮ ಕಡೆಗೆ ಸೆಳೆದಿದ್ದಾರೆ. ಒಕ್ಕಲಿಗ ಸಮುದಾಯದ ಶಾಸಕರನ್ನು ತಮ್ಮ ಕಡೆಗೆ ಜಾತಿ ಅಸ್ತ್ರ ಬಳಸಿ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
/filters:format(webp)/newsfirstlive-kannada/media/media_files/2025/11/24/dk-camp-mla-in-delhi-hotel-2025-11-24-18-27-45.jpg)
ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಕೂಡ ಆಲರ್ಟ್ ಆಗಿದ್ದಾರೆ. ಸಿದ್ದರಾಮಯ್ಯ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲು ಆಪ್ತ ಬಳಗ ನಿರ್ಧರಿಸಿದೆ. ಸಿದ್ದರಾಮಯ್ಯ ಹೆಗಲಿಗೆ ಹೆಗಲಾಗಿ ನಿಲ್ಲಲು ಆಪ್ತ ಪಡೆ ನಿರ್ಧರಿಸಿದೆ. ಸತೀಶ್ ಜಾರಕಿಹೊಳಿ, ಮಹದೇವಪ್ಪ, ಪರಮೇಶ್ವರ್, ಬೈರತಿ ಸುರೇಶ್ ಸೇರಿದಂತೆ ಹಲವು ಸಚಿವರು ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲಲು ತೀರ್ಮಾನ ತೆಗೆದುಕೊಂಡಿದ್ದಾರೆ. ಜೊತೆಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ, ಬಸವರಾಜ ರಾಯರೆಡ್ಡಿ ಕೂಡ ಸಿದ್ದರಾಮಯ್ಯಗೆ ಬೆಂಬಲವಾಗಿ ನಿಲ್ಲಬೇಕೆಂದು ತೀರ್ಮಾನಿಸಿದ್ದಾರೆ.
ಎಂತಹದ್ದೇ ಸಂದರ್ಭ ಎದುರಾದರೂ ಸಿದ್ದರಾಮಯ್ಯ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲು ಬೆಂಬಲಿಗ ಶಾಸಕರು ತೀರ್ಮಾನ ಕೈಗೊಂಡಿದ್ದಾರೆ. ಹೈಕಮಾಂಡ್ ಯಾವುದೇ ತೀರ್ಮಾನಕ್ಕೆ ಬದ್ಧರಾದರೂ ಸಿಎಂ ಬೆನ್ನಿಗೆ ನಿಲ್ಲಲು ತೀರ್ಮಾನ ಮಾಡಿದ್ದಾರೆ. ಈಗಾಗಲೇ ಸಭೆ ನಡೆಸಿ ಹಲವು ಸಚಿವರು ತೀರ್ಮಾನ ಕೈಗೊಂಡಿದ್ದಾರೆ.
ಈಗಿನ ಸ್ಥಿತಿಯಲ್ಲಿ ಮೊದಲ ಆದ್ಯತೆ ಸಿಎಂ ಬೆನ್ನಿಗೆ ನಿಲ್ಲುವುದು. ಕೊನೆಗೆ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿದರೂ ಒಪ್ಪಿಕೊಳ್ಳುವ ನಿರ್ಧಾರಕ್ಕೆ ಸಿಎಂ ಆಪ್ತ ಸಚಿವರು ಬಂದಿದ್ದಾರೆ. ಡಿಕೆಶಿ ಶಾಸಕರಿಗೆ ಗಾಳ ಹಾಕುತ್ತಿರುವ ಬೆನ್ನಲ್ಲೇ ಸಿಎಂ ಆಪ್ತ ಬಳಗ ಅಲರ್ಟ್ ಆಗಿದೆ. ಸಿಎಂ ಗಾದಿಗಾಗಿ ಹಠಕ್ಕೆ ಬಿದ್ದಿರುವ ಡಿಕೆಶಿಯಿಂದ ಮುಖ್ಯಮಂತ್ರಿ ಆಪ್ತರನ್ನ ಸೆಳೆಯುವ ಯತ್ನ ಕೂಡ ನಡೆಯುತ್ತಿದೆ. ಸಿದ್ದರಾಮಯ್ಯ ಆಪ್ತರಿಗೆ ಡಿಕೆಶಿ ಗಾಳ ಹಾಕುತ್ತಿರುವುದು ಗೊತ್ತಾಗುತ್ತಿದ್ದಂತೆ ಸಿಎಂ ಆಪ್ತ ಬಳಗ ಕೂಡ ಅಲರ್ಟ್ ಆಗಿದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಳ್ಳದೆ ಜೊತೆಯಾಗಿರಲು ನಿರ್ಧಾರ ಮಾಡಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us