/newsfirstlive-kannada/media/media_files/2025/11/21/dcm-dks-jail-visit-2025-11-21-18-12-34.jpg)
ಜೈಲಿಗೆ ಭೇಟಿ ನೀಡಿ ಕಾಂಗ್ರೆಸ್ ಶಾಸಕರ ಭೇಟಿಯಾದ ಡಿಕೆಶಿ!
ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್ 1992 ರಲ್ಲಿ ಮೊದಲ ಭಾರಿಗೆ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಆಗ ಬಂಗಾರಪ್ಪ ಕ್ಯಾಬಿನೆಟ್ ನಲ್ಲಿ ಅವರಿಗೆ ಸಿಕ್ಕಿದ್ದು ಬಂಧಿಖಾನೆ ಇಲಾಖೆ. ಈಗ ಅದೇ ತಾವು ಮೊದಲ ಭಾರಿಗೆ ಮಂತ್ರಿಯಾಗಿದ್ದ ಇಲಾಖೆಯ ವ್ಯಾಪ್ತಿಯ ಜೈಲಿಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಜೈಲಿನ ಲೋಪದೋಷಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೈಲಿನ ಖೈದಿಗಳಿಗೆ ಜೈಲಿನೊಳಗೆ ರಾಜ್ಯಾತಿಥ್ಯ ಸಿಗುತ್ತಿರುವುದು ಹೇಗೆಂದು ಪ್ರಶ್ನಿಸಿದ್ದಾರೆ. ಜೈಲಿನೊಳಗೆ ಮೊಬೈಲ್ ಹೇಗೆ ಬಂತು? ಖೈದಿಗಳಿಗೆ ವಿಐಪಿ ಸೌಲಭ್ಯ ನೀಡಿದವರು ಯಾರೆಂದು ಪ್ರಶ್ನಿಸಿದ್ದಾರೆ. ಖೈದಿಗಳಿಗೆ ಮೊಬೈಲ್ ನೆಟ್ ವರ್ಕ್ ಹೇಗೆ ಸಿಗುತ್ತಿದೆ? ಜೈಲಿನ ಆಕ್ರಮಗಳ ಬಗ್ಗೆ ಮಾಧ್ಯಮಗಳಲ್ಲಿ ಇಷ್ಟೆಲ್ಲಾ ವರದಿಯಾಗುತ್ತಿದೆ, ಜೈಲು ಅಧಿಕಾರಿಗಳು ಏನ್ ಮಾಡ್ತಿದ್ದೀರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/08/22/bangalore-central-jail-2025-08-22-18-16-58.jpg)
ಸಜಾ ಬಂಧಿಗಳ ಬ್ಯಾರಕ್, ಕ್ಯಾಂಟಿನ್, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೈಲಿನ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. … ಇಂತಹ ಘಟನೆ ಮರುಕಳಿಸಿದ್ರೆ ಎಲ್ಲರ ಮೇಲೆ ಕ್ರಮವಾಗುತ್ತೆ ಅಂತ ಖಡಕ್ ಎಚ್ಚರಿಕೆ…ನೀಡಿದ್ದಾರೆ.
ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹಾಗೂ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದಾರೆ. ಜೈಲಿನ ಹೊರಗೆ ನಡೆಯುತ್ತಿರುವ ಸಿಎಂ ಕುರ್ಚಿ ಗೇಮ್ ನಲ್ಲಿ ತಮಗೆ ಬೆಂಬಲ ನೀಡುವಂತೆ ಇಬ್ಬರು ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಇನ್ನೂ ಕಾರವಾರ ಶಾಸಕ ಸತೀಶ್ ಸೈಲ್ ವೈದ್ಯಕೀಯ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಇದ್ದಾರೆ.
ಇವತ್ತು ವಿನಯ್ ಕುಲಕರ್ಣಿರನ್ನು ಕೊಲೆ ಕೇಸ್ ವಿಚಾರಣೆಗೆ ಕೋರ್ಟ್ ಗೆ ಕರೆದುಕೊಂಡು ಹೋಗಲಾಗಿತ್ತು . ವಿನಯ್ ಕುಲಕರ್ಣಿ ಜೈಲಿಗೆ ಬಂದ ಮೇಲೆ ಡಿಕೆಶಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us