/newsfirstlive-kannada/media/media_files/2025/11/28/dcm-dk-shivakumar-scrifice-word-used-2025-11-28-16-30-12.jpg)
ಡಿಸಿಎಂ ಡಿ.ಕೆ.ಶಿವಕುಮಾರ್ ಮನಸ್ಸಿನಲ್ಲಿ ಈಗ ಸಿಎಂ ಹುದ್ದೆಯನ್ನು ಪಡೆದೇ ತೀರಬೇಕೆಂಬ ಆಸೆ, ಛಲ ಇದೆ. ಮನಸ್ಸಿನಲ್ಲಿರುವ ಭಾವನೆಗಳು ಆಗ್ಗಾಗ್ಗೆ ಹೊರಗೆ ಬರುತ್ತಿವೆ. ಮೊನ್ನೆಯಷ್ಟೇ ಕೊಟ್ಟ ಮಾತಿನಂತೆ ದೇಶದ ರಾಷ್ಟ್ರಪತಿ, ಜಡ್ಜ್ ಕೂಡ ನಡೆಯಬೇಕು ಎಂದು ಹೇಳಿದ್ದರು. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಅದನ್ನು ಡಿಕೆಶಿ ಟೀಮ್ ನಿನ್ನೆ ಬೆಳಿಗ್ಗೆ ಟ್ವೀಟ್ ಕೂಡ ಮಾಡಿತ್ತು.
ಇನ್ನೂ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಸ್ಥಾಪನೆಯ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ , ಅಧಿಕಾರ ತ್ಯಾಗದ ಬಗ್ಗೆ ಪ್ರಸ್ತಾಪ ಮಾಡಿದ್ದರು . ಶ್ರೀಮತಿ ಸೋನಿಯಾಗಾಂಧಿ ಅಧಿಕಾರ ತ್ಯಾಗ ಮಾಡಿದವರು. ಮನಮೋಹನ್ ಸಿಂಗ್ ಅವರಿಗಾಗಿ ಅಧಿಕಾರ ಬಿಟ್ಟುಕೊಟ್ಟರು ಎಂದು ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಡಿ.ಕೆ.ಶಿವಕುಮಾರ್ ಅಧಿಕಾರ ತ್ಯಾಗದ ಬಗ್ಗೆ ಹೇಳಿದ್ದು ಮಾರ್ಮಿಕವಾಗಿತ್ತು. ಕರ್ನಾಟಕದ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ತಮಗಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಈ ಮಾತು ಹೇಳುತ್ತಿದ್ದಾರಾ ಎಂಬ ಪ್ರಶ್ನೆ ಅಲ್ಲಿದ್ದ ಜನರ ಮನಸ್ಸಿನಲ್ಲಿ ಒಂದು ಕ್ಷಣ ಮೂಢಿತ್ತು.
ಬಳಿಕ ಡಿ.ಕೆ.ಶಿವಕುಮಾರ್, ನಿಂಬೆಗಿಂತ ಹುಳಿ ಇಲ್ಲ. ದುಂಬಿಗಿಂತ ಕಪ್ಪು ಇಲ್ಲ. ಶಂಭುವಿಗಂತ ದೇವರು ಇಲ್ಲ. ನಂಬಿಕೆಗಿಂತ ದೊಡ್ಡ ಗುಣ ಇಲ್ಲ ಎಂದರು. ಬಳಿಕ ಸರ್ವಜ್ಞನ ವಚನಗಳನ್ನು ಡಿಕೆ.ಶಿವಕುಮಾರ್ ಹೇಳಿದ್ದರು.
ನಾವು ಐದು ಗ್ಯಾರಂಟಿಗಳನ್ನು ತಂದೆವು. ಅದರಲ್ಲಿ ಮೂರು ಕಾರ್ಯಕ್ರಮಗಳು ಹೆಣ್ಣು ಮಕ್ಕಳಿಗೆ ನೇರವಾಗಿ ತಲುಪುವ ಕಾರ್ಯಕ್ರಮಗಳು. ನೀವು ಅಂಗನವಾಡಿ ಕಾರ್ಯಕರ್ತರಲ್ಲ, ಸಮಾಜದ ಪೋಷಕರು . ಮನೆ ಮೊದಲ ಪಾಠಶಾಲೆ, ತಾಯಿ ಮೊದಲ ಗುರು . ಸಮಾಜ ಅಭಿವೃದ್ಧಿ ಮಾಡುವ ಒಂದು ದೊಡ್ಡ ಜವಾಬ್ದಾರಿ ನಿಮ್ಮ ಮೇಲೆ ಇದೆ. ನಾವು ಗ್ಯಾರಂಟಿಗಳನ್ನು ಕೊಡುವಾಗ ಇದು ಸಾಧ್ಯ ಇಲ್ಲ ಅಂತ ಮೋದಿ ಟೀಕಿಸಿದ್ರು. ಇವತ್ತು ಮೋದಿ ಕೂಡ ನಮ್ಮ ಗ್ಯಾರಂಟಿಗಳನ್ನು ಫಾಲೋ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗ್ಯಾರಂಟಿಗಳ ಗುಣಗಾನ ಮಾಡಿದ್ದರು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us