/newsfirstlive-kannada/media/media_files/2025/10/27/cm-siddu-and-dks-watching-chair-2025-10-27-17-29-23.jpg)
ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಹೈಕಮ್ಯಾಂಡ್ ಹಾಗೂ ಸಿದ್ದರಾಮಯ್ಯ ಆಪ್ತರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಸಿಎಂ ಹುದ್ದೆಯನ್ನು ತಮಗೆ ನೀಡಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಡೆಡ್ ಲೈನ್ ಅನ್ನು ಕೂಡ ಕಾಂಗ್ರೆಸ್ ಹೈಕಮ್ಯಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತರಿಗೆ ನೀಡಿದ್ದಾರೆ.
ಸಿಎಂ ಗಾದಿಗಾಗಿ ಡೆಡ್ ಲೈನ್ ಸಂದೇಶವನ್ನು ಡಿಸಿಎಂ ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಸಿಎಂ ಆಪ್ತರೊಬ್ಬರಿಗೆ ಕರೆ ಮಾಡಿ ಡೆಡೆ ಲೈನ್ ದಿನಾಂಕವನ್ನ ಕೂಡ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ನವೆಂಬರ್ 21ರಂದು ತಾನೇ ಸಿಎಂ ಆಗಬೇಕೆಂದು ಕಡ್ಡಿ ತುಂಡಾಗುವಂತೆ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಎಐಸಿಸಿ ನಾಯಕರ ಮೂಲಕ ಹೈಕಮಾಂಡ್ ಗೂ ಇದೇ ಸಂದೇಶವನ್ನು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ನವೆಂಬರ್ ನಲ್ಲಿ ಮೂರು ದಿನಾಂಕಗಳನ್ನು ಡಿ.ಕೆ ಶಿವಕುಮಾರ್ ನಿಗದಿ ಮಾಡಿಕೊಂಡಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ನವೆಂಬರ್ ಮೂರನೇ ವಾರದಲ್ಲಿ ಮೂರು ದಿನಾಂಕಗಳನ್ನು ಡಿಕೆಶಿ ನಿಗದಿಪಡಿಸಿಕೊಂಡಿದ್ದಾರೆ. ಆ ಮೂರು ದಿನಾಂಕಗಳಲ್ಲೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬೇಕೆಂದು ಡಿಕೆಶಿ ಸಜ್ಜಾಗಿದ್ದಾರೆ. ನಿಗದಿತ ದಿನಾಂಕದ ಬಳಿಕ ಸಿಎಂ ಆಗದಿದ್ದರೆ ಮುಂದೇನು ಮಾಡಬೇಕು ಎಂಬುದು ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅತ್ಯಾಪ್ತರ ಬಳಿಯೂ ಇದೇ ಸಂದೇಶವನ್ನು ಡಿ.ಕೆ.ಶಿವಕುಮಾರ್ ರವಾನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಬೆಂಬಲಿಗರ ಪಾಳಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಡೆಡ್ ಲೈನ್ ನೀಡಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಈಗ ಮುಂದೇನಾಗುತ್ತೆ ಎಂಬುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ 2008-2013ರ ಅವಧಿಯಲ್ಲಿ ಹಾಗೂ 2019-2023ರ ಅವಧಿಯಲ್ಲಿ ಸಿಎಂ ಕುರ್ಚಿಗಾಗಿ ಬಿಜೆಪಿ ಪಕ್ಷದಲ್ಲಿ ನಡೆದ ಬಿರುಸಿನ ಬೆಳವಣಿಗೆಗಳು ಈಗ ಕಾಂಗ್ರೆಸ್ ಪಕ್ಷದಲ್ಲಿ ನಡೆಯುವ ಸೂಚನೆಯನ್ನು ಡಿಸಿಎಂ ಡಿಕೆಶಿ ಡೆಡ್ ಲೈನ್ ನೀಡುತ್ತಿದೆ.
/filters:format(webp)/newsfirstlive-kannada/media/post_attachments/wp-content/uploads/2025/07/MALLIKARJUN_KHARGE_DKS.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us