/newsfirstlive-kannada/media/media_files/2025/08/13/dharmasthala-case1-2025-08-13-08-18-32.jpg)
ಧರ್ಮಸ್ಥಳದಲ್ಲಿ ಪತ್ತೆಯಾದ ಬುರುಡೆಗಳ ಎಫ್‌ಎಸ್‌ಎಲ್ ವರದಿ ಲಭ್ಯ
ಧರ್ಮಸ್ಥಳದ ವಿರುದ್ಧ ಷಡ್ಯಂತ್ರದ ಆರೋಪ ಪ್ರಕರಣದ ಸ್ಪೋಟಕ ಸತ್ಯ ಈಗ ಬಹಿರಂಗವಾಗಿದೆ.
ಎಸ್ಐಟಿ ತನಿಖೆ ವೇಳೆ ಪತ್ತೆಯಾಗಿದ್ದ ತಲೆಬುರುಡೆಗಳ ಎಫ್ಎಸ್ಎಲ್ ವರದಿ ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ. ಎಫ್ಎಸ್‌ಎಲ್ ವರದಿಯ ಪ್ರಕಾರ, ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ತಲೆ ಬುರುಡೆ ಹಾಗೂ ಮೂಳೆಗಳು ಮಹಿಳೆಯರದ್ದಲ್ಲ. ಎಲ್ಲವೂ ಪುರುಷರ ತಲೆಬುರುಡೆ ಹಾಗೂ ಮೂಳೆ ಎಂದು ಎಫ್‌ಎಸ್‌ಎಲ್ ಸ್ಪಷ್ಟವಾಗಿ ವರದಿ ನೀಡಿದೆ.
ಹೀಗಾಗಿ ಚಿನ್ನಯ್ಯ ಹೇಳಿದಂತೆ ಯುವತಿಯರು, ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಬಳಿಕ ಅವರ ಶವಗಳನ್ನು ತಾನು ಹೂತು ಹಾಕಿದ್ದಾಗಿ ಹೇಳಿದ್ದು ಸಂಪೂರ್ಣ ಸುಳ್ಳು ಎಂಬುದು ಈಗ ಎಫ್‌ಎಸ್‌ಎಲ್ ವರದಿಯಿಂದ ಪುಷ್ಟಿಯಾಗುತ್ತಿದೆ. ಚಿನ್ನಯ್ಯನ ಬುರುಡೆ ಗ್ಯಾಂಗ್ ಸಂಪೂರ್ಣ ಬುರುಡೆ ಬಿಟ್ಟಿದೆ. ಚಿನ್ನಯ್ಯ ಮೊದಲು ಕೊಟ್ಟಿದ್ದ ದೂರಿಗೆ ಪೂರಕವಾದ ಸಾಕ್ಷ್ಯ, ಆಧಾರಗಳೂ ಸಿಕ್ಕಿಲ್ಲ. ಸಿಕ್ಕ ಬುರುಡೆಗಳು ಪುರುಷರ ಬುರುಡೆಗಳು ಅಂತ ಎಫ್‌ಎಸ್‌ಎಲ್ ವರದಿಯೇ ಸ್ಪಷ್ಟವಾಗಿ ಹೇಳಿದೆ.
ಎಸ್ಐಟಿಗೆ ವರದಿ ನೀಡಿದ ಎಫ್ಎಸ್ ಎಲ್.
ಚಿನ್ನಯ್ಯ ತಂದು ಕೊಟ್ಟಿದ್ದ ಬರುಡೆ ಸೇರಿ ಒಟ್ಟು ಮೂರು ತಲೆಬುರುಡೆ ಮತ್ತು ಮೂಳೆಗಳ ವರದಿ ಲಭ್ಯ..
1) ಚಿನ್ನಯ್ಯ ಕೋರ್ಟ್ ನಲ್ಲಿ ತಂದುಕೊಟ್ಟಿದ್ದ ಬುರುಡೆ…
ಇದು ನಲವತ್ತರ ಆಸುಪಾಸಿನ ವಯಸ್ಸಿನ ಗಂಡಸಿನ ಬುರುಡೆ ಎಂಬುದಾಗಿ ಎಫ್ಎಸ್‌ಎಲ್ ವರದಿ ನೀಡಿದೆ.
2) ಉತ್ಖನನ ವೇಳೆ ಸಿಕ್ಕಿದ್ದ ಎರಡನೇ ಬುರುಡೆ ಮತ್ತು ಕೆಲ ಮೂಳೆಗಳು..
ಸ್ಪಾಟ್ ನಂಬರ್ ಆರರಲ್ಲಿ ಸಿಕ್ಕಿದ್ದ ಬುರುಡೆ ಮತ್ತು ಮೂಳೆ
ಇದು ಸಹ ಇಪತ್ತೈದರಿಂದ ಮೂವತ್ತು ವಯಸ್ಸಿನ ಗಂಡಸಿನ ಮೂಳೆ ಮತ್ತು ಬುರುಡೆ ಎಂದು ಎಫ್ಎಸ್ಎಲ್ ವರದಿ ನೀಡಿದೆ.
3) ಸ್ಪಾಟ್ ನಂಬರ್ ಹದಿನೈದರಲ್ಲಿ ಸಿಕ್ಕಿದ್ದ ಬುರುಡೆ ಮತ್ತು ಮೂಳೆ..
ಇದು ಮರದ ಬುಡದಲ್ಲಿ ಸಿಕ್ಕಿದ್ದ ಅಸ್ಥಿಪಂಜರವಾಗಿತ್ತು.
ಇದು ಸಹ ಓರ್ವ ಗಂಡಸಿನ ದೇಹ ಎಂಬುದು ಸ್ಪಷ್ಟ ಎಂದು ವರದಿ ನೀಡಿದೆ.
ಮೂವತ್ತೈದರಿಂದ ಮೂವತ್ತೊಂಬತ್ತು ವಯಸ್ಸಿನ ಒಳಗಿನ ಗಂಡಸಿನ ದೇಹದ ಮೂಳೆ ಎಂದು ಸ್ಪಷ್ಟವಾಗಿ ವರದಿ ನೀಡಿದ ಎಫ್ ಎಸ್ಎಲ್.
ಮೂವರ ಸಾವಿಗೆ ನಿಖರವಾಗಿ ಕಾರಣ ಗೊತ್ತಾಗಿಲ್ಲ. ದೇಹದಲ್ಲಿ ಸಿಕ್ಕಿರುವ ಮೂಳೆಗಳ ಮೇಲೆ ಹಲ್ಲೆಗೆ ಒಳಗಾಗಿರುವ ಕುರುಹು ಇಲ್ಲ. ಇನ್ನೂ ವಿಷ ಸೇವನೆ ಮಾಡಿರಬಹುದಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ.
ಅಹಮದಾಬಾದ್ ನಲ್ಲಿರುವ ಎಫ್ ಎಸ್ ಎಲ್ ಗೂ ಸ್ಯಾಂಪಲ್ ಕಳಿಸಲಾಗಿದೆ..
ಅಲ್ಲಿಂದ ವರದಿ ಬಂದ ಬಳಿಕ ಮಾಹಿತಿ ಗೊತ್ತಾಗಲಿದೆ.
ಇನ್ನೂ ಕೊನೆಯ ಬಾರಿಗೆ ಬಂಗ್ಲೆ ಗುಡ್ಡದಲ್ಲಿ ಪರಿಶೀಲನೆ ನಡೆಸಲಾಗಿತ್ತು.
ಈ ವೇಳೆ ಕೆಲ ಬುರುಡೆ ಮತ್ತು ಮೂಳೆಗಳು ದೊರೆತಿದ್ದವು. ಸದ್ಯ ಈ ಬುರುಡೆ ಮತ್ತು ಮೂಳೆಗಳನ್ನು ಇನ್ನೂ ಎಫ್ಎಸ್ಎಲ್ ಗೆ ಕಳಿಸಲಾಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.
ಧರ್ಮಸ್ಥಳದ ದೇವಸ್ಥಾನದ ವಿರುದ್ಧ ಷಡ್ಯಂತ್ರ ರೂಪಿಸಿ, ಚಿನ್ನಯ್ಯನನ್ನು ದಾಳವಾಗಿ ಬಳಸಿಕೊಂಡು ಆತನ ಮೂಲಕ ಸುಳ್ಳು ದೂರು ಕೊಡಿಸಿ, ತನಿಖೆಯಾಗುವಂತೆ ಮಾಡಲಾಗಿದೆ. ಆದರೇ, ಚಿನ್ನಯ್ಯ ಮೊದಲು ಕೊಟ್ಟ ದೂರಿನಂತೆ ಧರ್ಮಸ್ಥಳದ ನೇತ್ರಾವತಿ ನದಿ ದಂಡೆಯ ಬಂಗ್ಲೆಗುಡ್ಡದಲ್ಲಿ ಆಗಲೀ, ಬೇರೆ ಯಾವುದೇ ಭಾಗದಲ್ಲಾಗಲೀ, ಮಹಿಳೆಯರು, ಯುವತಿಯರ ಅಸ್ಥಿಪಂಜರ, ತಲೆ ಬುರುಡೆ, ಮೂಳೆಗಳೇ ಪತ್ತೆಯಾಗಿಲ್ಲ. ಎಲ್ಲವೂ ಪುರುಷರ ಅಸ್ಥಿಪಂಜರಗಳು , ತಲೆ ಬುರುಡೆ, ಮೂಳೆಗಳು ಪತ್ತೆಯಾಗಿವೆ. ಹೀಗಾಗಿ ಧರ್ಮಸ್ಥಳದ ದೇವಸ್ಥಾನದ ವಿರುದ್ಧ ಚಿನ್ನಯ್ಯನನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ದೂರು ಕೊಡಿಸಿ, ಧರ್ಮಸ್ಥಳಕ್ಕೆ ಅಪಖ್ಯಾತಿ ತರುವ ದುರುದ್ದೇಶ ಇತ್ತು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.