/newsfirstlive-kannada/media/post_attachments/wp-content/uploads/2024/08/Share-Market-Bull.jpg)
ಬಜೆಟ್ ಮಂಡನೆ ಬಳಿಕ ಷೇರು ಮಾರುಕಟ್ಟೆ ಕುಸಿತ
ಇಂದು ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. 2026-27 ನೇ ಸಾಲಿನ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಬಜೆಟ್ ಮಂಡನೆಗೆ ಭಾರತೀಯ ಷೇರು ಮಾರುಕಟ್ಟೆ ರೆಡ್ ಮಾರ್ಕ್ ತೋರಿಸಿದೆ . ಬಜೆಟ್ ಮಂಡನೆಯಾಗುತ್ತಿದ್ದಂತೆ, ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡು ಬಂತು. ಕೇವಲ 13 ನಿಮಿಷದಲ್ಲೇ 13 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಹೂಡಿಕೆದಾರರಿಗೆ ಸಂಭವಿಸಿತು. ಷೇರು ಮಾಲೀಕರು ತಮ್ಮ ಷೇರುಗಳನ್ನು ಮಾರಲು ಮುಗಿಬಿದ್ದರು. ಇದರಿಂದಾಗಿ ಸೆನ್ಸೆಕ್ಸ್ 2 ಸಾವಿರ ಪಾಯಿಂಟ್ ಕುಸಿತವನ್ನು ದಾಖಲಿಸಿತು. ನಿಫ್ಟಿ 50 ಕೂಡ 400 ಪಾಯಿಂಟ್ ಕುಸಿತವನ್ನು ದಾಖಲಿಸಿತು.
ಬಜೆಟ್ ಅನ್ನು ಸುಧಾರಣೆಯ ಎಕ್ಸ್ ಪ್ಸೆಸ್ ಬಜೆಟ್ ಎಂದೇ ಕರೆಯಲಾಗುತ್ತಿದೆ. ಆದರೇ, ಸುಧಾರಣೆಯ ಎಕ್ಸ್ ಪ್ರೆಸ್ ಬಜೆಟ್‌ಗೆ ಷೇರು ಮಾರುಕಟ್ಟೆ ನಿರಾಶೆ ವ್ಯಕ್ತಪಡಿಸಿದ್ದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತೆ. ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೂ ಇದೆ. ಬಜೆಟ್ ನಲ್ಲಿ ಇದ್ದ ಆ ಒಂದು ಘೋಷಣೆಯಿಂದ ಷೇರು ಮಾರುಕಟ್ಟೆ ಇಂದು ಕುಸಿದಿದೆ.
ಹಾಗಾದರೇ, ಬಜೆಟ್ ನಲ್ಲಿದ್ದ ಯಾವ ಅಂಶ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು ಅಂತ ನೋಡಿದರೇ, ಪ್ಯೂಚರ್ ಖರೀದಿಯ ಮೇಲೆ ಸೆಕ್ಯೂರೀಟೀಸ್ ಟ್ರಾನ್ಸಕ್ಷನ್ ಟ್ಯಾಕ್ಸ್ ಏರಿಸಿದ್ದರಿಂದ ಇಂದು ಷೇರು ಮಾರುಕಟ್ಟೆ ಕುಸಿಯಿತು !
ಪ್ಯೂಚರ್ ಖರೀದಿಯ ಮೇಲಿನ ಸೆಕ್ಯೂರೀಟೀಸ್ ಟ್ರಾನ್ಸಕ್ಷನ್ ಟ್ಯಾಕ್ಸ್ ಅನ್ನು ಶೇ.0.02 ರಿಂದ ಶೇ.0.05 ಕ್ಕೆ ಕೇಂದ್ರದ ಬಜೆಟ್ ನಲ್ಲಿ ಏರಿಕೆ ಮಾಡಲಾಗಿದೆ. ಈ ಎಸ್‌ಟಿಟಿ ಏರಿಕೆಯಿಂದಾಗಿ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಇದನ್ನು ಹೊರತುಪಡಿಸಿ ಷೇರು ಮಾರುಕಟ್ಟೆ ಕುಸಿತಕ್ಕೆ ಬೇರೆ ಕಾರಣಗಳಿಲ್ಲ.
ಕಾರ್ಪೋರೇಟ್ ಪ್ರಮೋಟರ್ಸ್ ಷೇರು ಬೈಬ್ಯಾಕ್‌ಗೆ ಶೇ.22 ರಷ್ಟು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕು ಎಂದು ಕೇಂದ್ರದ ಬಜೆಟ್ ನಲ್ಲಿ ಘೋಷಿಸಲಾಗಿದೆ. ಜೊತೆಗೆ ನಾನ್ ಕಾರ್ಪೋರೇಟ್ ಪ್ರಮೋಟರ್ಸ್ ಷೇರು ಬೈಬ್ಯಾಕ್ ಗೆ ಶೇ.30 ರಷ್ಟು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.
/filters:format(webp)/newsfirstlive-kannada/media/post_attachments/wp-content/uploads/2024/04/Sensex-Share-Market.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us