/newsfirstlive-kannada/media/media_files/2026/02/28/trump-vs-iran-2026-02-28-16-39-44.jpg)
ಇರಾನ್ ವಿರುದ್ಧದ ಯುದ್ದ ನಾಲ್ಕು ವಾರದ ಪ್ರಕ್ರಿಯೆ . ಇರಾನ್ ದೊಡ್ಡ ದೇಶ, ಹೀಗಾಗಿ ನಾಲ್ಕು ವಾರ ಅಥವಾ ಅದಕ್ಕಿಂತ ಕಡಿಮೆ ಸಮಯ ಬೇಕಾಗಬಹುದು. ಇದು ಯಾವಾಗಲೂ ನಾಲ್ಕು ವಾರದ ಪ್ರಕ್ರಿಯೆ ಎಂದು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆ ಬಹಳ ಸಂಕೀರ್ಣ ಕಾರ್ಯಾಚರಣೆ. ಕಾರ್ಯಾಚರಣೆಯಲ್ಲಿ ಅಮೆರಿಕಾದ ಸೈನಿಕರ ಸಾವು ಅನ್ನು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ಅಮೆರಿಕಾದ ಸೈನಿಕರ ಸಾವು ದುರದೃಷ್ಟಕರ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕಾದ ಸೈನಿಕರು ಗ್ರೇಟ್ ವ್ಯಕ್ತಿಗಳು. ಸೇನಾ ಕಾರ್ಯಾಚರಣೆ ನಮ್ಮ ಎಲ್ಲ ಉದ್ದೇಶ ಈಡೇರುವವರೆಗೂ ಮುಂದುವರಿಯುತ್ತೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಬಳಿ ಇದ್ದ ಲಾಂಗ್ ರೇಂಜ್ ಮಿಸೈಲ್, ನ್ಯೂಕ್ಲಿಯರ್ ಅಸ್ತ್ರ ದೊಡ್ಡ ಬೆದರಿಕೆ ಆಗಿತ್ತು. ಹೀಗಾಗಿ ಇರಾನ್ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇಂಗ್ಲೆಂಡ್ ನ ಡೈಲಿ ಮೇಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಹಾಗೇನೇ ಕಾರ್ಯಾಚರಣೆ ಮುಂದುವರಿದಂತೆಲ್ಲಾ ಅಮೆರಿಕಾದ ಸೈನ್ಯಕ್ಕೂ ಹಾನಿ ಉಂಟಾಗಲಿದ್ದು ಸೈನಿಕರ ಸಾವು-ನೋವು ಹೆಚ್ಚಾಗಬಹುದಾಗಿದೆ ಎಂಬ ಮುನ್ಸೂಚನೆಯನ್ನು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ್ದಾರೆ. ಶಸ್ತಾಸ್ತ್ರ ತ್ಯಜಿಸಿ ಶರಣಾದರೆ ಉಳಿಗಾಲ ಇಲ್ಲದಿದ್ದರೆ ಪೂರ್ತಿ ಬಲಪ್ರಯೋಗದೊಂದಿಗೆ ದಾಳಿ ನಡೆಸುವುದಾಗಿ ಇರಾನ್ ಸೈನಿಕರಿಗೆ ಡೋನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಸರ್ವೋಚ್ಛ ನಾಯಕ ಖಮೇನೀಯೇ ನನ್ನ ಹತ್ಯೆಗೆ ಸಂಚು ರೂಪಿಸಿದ್ದರು. ಆದ್ರೆ ಆತ ನನ್ನನ್ನ ಹತ್ಯೆ ಮಾಡೋದಕ್ಕೂ ಮೊದಲೇ ನಾನೇ ಆತನನ್ನ ಹತ್ಯೆ ಮಾಡಿದ್ದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. 2024ರಲ್ಲಿ ಖಮೇನೀ ತನ್ನ ಹತ್ಯೆಗೆ ಸಂಚು ರೂಪಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ. ಚುನಾವಣಾ ಱಲಿ ವೇಳೆ ಟ್ರಂಪ್ ಕಿವಿಯ ಬಳಿ ಹಾದು ಹೋದ ಗುಂಡೇಟಿನ ಘಟನೆ ಇರಾನ್ ಯೋಜಿತ ಕೃತ್ಯ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us