/newsfirstlive-kannada/media/media_files/2025/08/26/bangalore-tunnel-road-project-03-2025-08-26-17-07-35.jpg)
ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣದ ಡಿಪಿಆರ್ ನಲ್ಲೇ ಲೋಪ!
ಬೆಂಗಳೂರಿನಲ್ಲಿ ಟನಲ್ ರಸ್ತೆ ಯೋಜನೆಯನ್ನು ಜಾರಿಗೊಳಿಸಬೇಕು ಅನ್ನೋದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆ. ವಿಶ್ವದ ಹಾಗೂ ಭಾರತದ ಬೇರೆ ಬೇರೆ ನಗರಗಳಲ್ಲಿರುವ ಸುರಂಗ ರಸ್ತೆ ಮಾರ್ಗಗಳನ್ನು ಡಿ.ಕೆ.ಶಿವಕುಮಾರ್ ಖುದ್ದಾಗಿ ಹೋಗಿ ನೋಡಿಕೊಂಡು ಬಂದಿದ್ದಾರೆ. ಬೆಂಗಳೂರಿನಲ್ಲೂ ಸುರಂಗ ರಸ್ತೆ ಮಾರ್ಗ ನಿರ್ಮಾಣಕ್ಕಾಗಿ ಡಿಪಿಆರ್ ಸಿದ್ದಪಡಿಸಲಾಗಿದೆ. ಆದರೇ, ಈ ವಿಸ್ತೃತ ಯೋಜನಾ ವರದಿಯಲ್ಲೇ ಹತ್ತಾರು ಲೋಪಗಳು, ನ್ಯೂನ್ಯತೆಗಳೂ ಇರೋದನ್ನು ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯೇ ಪತ್ತೆ ಹಚ್ಚಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿಂದೆ ಡಿಪಿಆರ್ ನಲ್ಲಿ ಬೇರೆ ನಗರಗಳ ಯೋಜನೆಯ ಕಟ್ ಅಂಡ್ ಪೇಸ್ಟ್ ಮಾಡಿರೋದು ಪತ್ತೆಯಾಗಿತ್ತು. ಬೆಂಗಳೂರಿನ ರಸ್ತೆಗಳ ಹೆಸರು ಅನ್ನು ಸರಿಯಾಗಿ ಉಲ್ಲೇಖಿಸಿರಲಿಲ್ಲ.
DPRನಲ್ಲಿ 121 ನ್ಯೂನ್ಯತೆಗಳನ್ನು ಸರ್ಕಾರಿ ತಜ್ಞರ ಸಮಿತಿ ಪತ್ತೆಹಚ್ಚಿದೆ. ಲಾಲ್ ಬಾಗ್ ಕೆಳಗೆ ಟನಲ್ ರಸ್ತೆ ಹೋಗುವ ಕುರಿತು ಪುನರ್ ಪರಿಶೀಲನೆಗೆ ಶಿಫಾರಸ್ಸು ಮಾಡಿತ್ತು. ಅದರಂತೆ BMRCLನ ಕಾರ್ಯಕಾರಿ ನಿರ್ದೇಶಕ ಸಿದ್ದನಗೌಡ ಹೆಗ್ಗರಡಿ ನೇತೃತ್ವದ ಸಮಿತಿಯನ್ನ ರಚನೆ ಮಾಡಲಾಯಿತು. ಸದ್ಯ ಸಮಿತಿ ಸರ್ಕಾರಕ್ಕೆ 89 ಪುಟಗಳ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಮಣ್ಣಿನ ಪರೀಕ್ಷೆಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ. ಪ್ರವೇಶ ಮತ್ತು ನಿರ್ಗಮನ ರಾಂಪ್ ಗಳು ಇನ್ನಷ್ಟು ಅಗಲವಾಗಿರಬೇಕು ಅನ್ನೋದು ಸೇರಿದಂತೆ 121 ನ್ಯೂನ್ಯತೆಗಳನ್ನ ಬಯಲಿಗೆಳೆದಿದೆ.
================
ವರದಿಯ ಮುಖ್ಯಾಂಶ
ಮುಖ್ಯಾಂಶ 01
ಲಾಲ್​ಬಾಗ್ ಕೆಳಗೆ ಟನಲ್ ರಸ್ತೆ ಹೋಗುವ ಬಗ್ಗೆ ಪುನರ್ ಪರಿಶೀಲನೆಗೆ ಶಿಫಾರಸು
ಮುಖ್ಯಾಂಶ 02
ಕೇವಲ 4 ಕಡೆ ಮಣ್ಣು ಪರೀಕ್ಷೆ ಮಾಡಿ ವರದಿ ಸಿದ್ಧ, ಇನ್ನಷ್ಟು ಮಣ್ಣು ಪರೀಕ್ಷೆ ಅವಶ್ಯಕ
ಮುಖ್ಯಾಂಶ 03
ಟನಲ್ ಮಾರ್ಗವು ಬಹುತೇಕವಾಗಿ ಮೆಟ್ರೋ ಮಾರ್ಗಗಳಲ್ಲಿಯೇ ಸಾಗಿದೆ
ಮುಖ್ಯಾಂಶ 04
ಇದರ ಆರ್ಥಿಕ ಮತ್ತು ತಾಂತ್ರಿಕ ಪರಿಣಾಮದ ಸಂಪೂರ್ಣ ಅಧ್ಯಯನ ಆಗಬೇಕು
ಮುಖ್ಯಾಂಶ 05
ಟನಲ್​ನ ಪ್ರವೇಶ ಮತ್ತು ನಿರ್ಗಮನ ಱಂಪ್​ಗಳು ಇನ್ನಷ್ಟು ಅಗಲವಾಗಿರಬೇಕು
ಮುಖ್ಯಾಂಶ 06
ಹೆಬ್ಬಾಳ ಕೆರೆ ಮಾರ್ಗ ಬದಲಿಸುವುದರಿಂದ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಡಚಣೆ
ಮುಖ್ಯಾಂಶ 07
ದೂರದೃಷ್ಟಿಯಿಂದ ಲೇನ್ ಅಗಲ ನಿರ್ಧರಿಸಿಲ್ಲ, 25 ವರ್ಷದಲ್ಲಿ 2+2 ಲೇನ್ ಇರಬೇಕು
ಮುಖ್ಯಾಂಶ 08
ಆದರೆ, ಟನಲ್ ರಸ್ತೆಯಲ್ಲಿ 1+1 ಲೇನ್ ಯೋಜನೆಯನ್ನು ರೂಪಿಸಲಾಗಿದೆ
ಮುಖ್ಯಾಂಶ 09
ಟನಲ್ ರಸ್ತೆಯ ಪೀಕ್ ಅವರ್ ನಿರ್ವಹಣೆ ಕುರಿತು ಸರಿಯಾದ ಅಧ್ಯಯನ ಆಗಿಲ್ಲ
ಮುಖ್ಯಾಂಶ 10
ನೈಸರ್ಗಿಕ ನಾಲೆಗಳ ಹರಿವು, ಅದನ್ನು ತಿರುಗಿಸುವ ಕುರಿತು ಅಧ್ಯಯನವಾಗಿಲ್ಲ
ಮುಖ್ಯಾಂಶ 11
ಯಾವುದೇ ರೀತಿಯ ಅಂತರ್ಜಲದ ಮೇಲಿನ ಪರಿಣಾಮವನ್ನೂ ಪರಿಗಣಿಸಿಲ್ಲ
====
ಟನಲ್ ರಸ್ತೆಯಲ್ಲಿ 121 ಟ್ರಬಲ್ ಗಳನ್ನು ಸರ್ಕಾರದ ತಜ್ಞರ ಸಮಿತಿ ಪತ್ತೆ ಹಚ್ಚಿದೆ.
ಟನಲ್ ರಸ್ತೆ ಸಮಗ್ರ ಯೋಜನಾ ವರದಿಯಲ್ಲಿ (ಡಿಪಿಆರ್) 121 ನ್ಯೂನ್ಯತೆ ಪತ್ತೆಯಾಗಿವೆ. ಸಮರ್ಪಕ ಮಣ್ಣಿನ ಪರೀಕ್ಷೆ ನಡೆಸಿಲ್ಲ, ಪರಿಸರ ಪರಿಣಾಮಗಳು ಪರಿಹಾರಗಳನ್ನೇ ಪರಿಗಣಿಸಿಲ್ಲ. ದೂರದೃಷ್ಟಿಯಿಂದ ಲೇನ್ ಅಗಲ ನಿರ್ಣಯವಾಗಿಲ್ಲ, ಎಂಟ್ರಿ - ಎಕ್ಸಿಟ್ ಯೋಜನೆಯಲ್ಲೂ ಲೋಪಗಳಿವೆ. ಸರ್ಕಾರವೇ ರಚಿಸಿದ್ದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ 89 ಪುಟದ ವರದಿ ಸಲ್ಲಿಕೆ ಮಾಡಿದೆ. ಆತುರಾತುರದಲ್ಲಿ ಡಿಪಿಆರ್ ರೂಪಿಸಿರುವಂತೆ ಕಾಣುತ್ತಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಬಿಎಂಆರ್ ಸಿಎಲ್ ಕಾರ್ಯಕಾರಿ ನಿರ್ದೇಶಕ ಸಿದ್ದನಗೌಡ ಹೆಗ್ಗರಡಿ ನೇತೃತ್ವದ ತಜ್ಞರ ಸಮಿತಿಯಿಂದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಸಮಿತಿಗೆ ಟನಲ್ ರಸ್ತೆ ಡಿಪಿಆರ್ ಪರಿಶೀಲನೆಗೆ ರಾಜ್ಯ ಸರ್ಕಾರ ಸೂಚಿಸಿತ್ತು. ಸಮಿತಿಯಲ್ಲಿ ಸುರಂಗ ರಸ್ತೆ ತಜ್ಞ ವಿನೋದ್ ಶುಲ್ಕ, ರಸ್ತೆ ಸುರಕ್ಷತೆ ತಜ್ಣ ಅಶ್ವತ್ಥ್ ಕುಮಾರ್, ಲೋಕೋಪಯೋಗಿ ಇಲಾಖೆ ನಿವೃತ್ತ ಇಂಜಿನಿಯರ್ ಮಾಧವ ಸೇರಿದಂತೆ ಅನೇಕ ತಜ್ಞರು ಸಮಿತಿಯಲ್ಲಿದ್ದರು .
ಬೆಂಗಳೂರಿನಲ್ಲಿ ಹೆಬ್ಬಾಳದಿಂದ ಪ್ಯಾಲೇಸ್ ಗ್ರೌಂಡ್, ವಿಧಾನಸೌಧ, ರೇಸ್ ಕೋರ್ಸ್ ರಸ್ತೆ, ಲಾಲ್ ಬಾಗ್, ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೂ ಸುರಂಗ ರಸ್ತೆ ಮಾರ್ಗ ನಿರ್ಮಿಸಲು ರಾಜ್ಯ ನಗರಾಭಿವೃದ್ದಿ ಇಲಾಖೆಯು ಪ್ಲ್ಯಾನ್ ಮಾಡಿದೆ. ಇದಕ್ಕೆ ಡಿಪಿಆರ್ ಅನ್ನು ಖಾಸಗಿ ಸಂಸ್ಥೆಯೊಂದು ತಯಾರಿಸಿ ನೀಡಿತ್ತು. ಆ ಡಿಪಿಆರ್ ನಲ್ಲೇ ಹತ್ತಾರು ಲೋಪದೋಷಗಳು ಪತ್ತೆಯಾಗಿವೆ. ಬೇರೆ ಯಾವುದೋ ಯೋಜನೆಯ ಡಿಪಿಆರ್ ಅನ್ನು ಬೆಂಗಳೂರಿನ ಸುರಂಗ ರಸ್ತೆಯ ಡಿಪಿಆರ್ ಗೆ ಕಟ್ ಅಂಡ್ ಪೇಸ್ಟ್ ಮತ್ತು ಕಾಪಿ ಪೇಸ್ಟ್ ಮಾಡಿರುವುದು ಈ ಹಿಂದೆಯೇ ಪತ್ತೆಯಾಗಿತ್ತು.
ವರದಿಯ ಮುಖ್ಯಾಂಶಗಳು...
- ಲಾಲ್ ಬಾಗ್ ಕೆಳಗೆ ಟನಲ್ ರಸ್ತೆ ಹೋಗುವ ಕುರಿತು ಪುನರ್ ಪರಿಶೀಲನೆಗೆ ಶಿಫಾರಸ್ಸು
- ಕೇವಲ ನಾಲ್ಕು ಕಡೆ ಮಣ್ಣು ಪರೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಇನ್ನಷ್ಟು ಮಣ್ಣು ಪರೀಕ್ಷೆಗಳಾಗಬೇಕು
- ಟನಲ್ ಮಾರ್ಗವು ಬಹುತೇಕ ಮೆಟ್ರೋ ಮಾರ್ಗಗಳಲ್ಲೇ ಸಾಗಿದೆ. ಇದರ ಆರ್ಥಿಕ ಮತ್ತು ತಾಂತ್ರಿಜ ಪರಿಣಾಮಗಳ ಅಧ್ಯಯನ ಆಗಬೇಕು.
- ಪ್ರವೇಶ ಮತ್ತು ನಿರ್ಗಮನ ರ್ಯಾಂಪ್‌ಗಳು ಇನ್ನಷ್ಟು ಅಗಲವಾಗಿರಬೇಕು.
- ಹೆಬ್ಬಾಳ ಕೆರೆಯ ಮಾರ್ಗ ಬದಲಿಸುವುದರಿಂದ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅಡಚಣೆ ಉಂಟಾಗುತ್ತದೆ.
- ದೂರದೃಷ್ಟಿಯಿಂದ ಲೇನ್ ಅಗಲ ನಿರ್ಧರಿಸಿಲ್ಲ. 25 ವರ್ಷಗಳಲ್ಲಿ 2+2 ಲೇನ್ ಇರಬೇಕು. ಆದರೆ 1+1 ಲೇನ್ ಯೋಜನೆ ರೂಪಿಸಲಾಗಿದೆ.
- ಟನಲ್ ರಸ್ತೆಯ ಪೀಕ್ ಅವರ ನಿರ್ವಹಣೆ ಕುರಿತು ಅಧ್ಯಯನ ಆಗಿಲ್ಲ
- ನೈಸರ್ಗಿಕ ನಾಲೆಗಳ ಹರಿವು ಮತ್ತು ಅದನ್ನು ತಿರುಗಿಸುವ ಕುರಿತು ಅಧ್ಯಯನವಾಗಿಲ್ಲ. ಅಂತರ್ಜಲದ ಮೇಲಿನ ಪರಿಣಾಮವನ್ನೂ ಪರಿಗಣಿಸಿಲ್ಲ.
ಹೀಗೆ ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈಗ ಖಾಸಗಿ ಸಂಸ್ಥೆಯು ಸರಿಯಾಗಿ ಡಿಪಿಆರ್ ರಚಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರ ಹಾಗೂ ನಗರಾಭಿವೃದ್ದಿ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.