/newsfirstlive-kannada/media/post_attachments/wp-content/uploads/2025/02/G-Parameshwar.jpg)
2026 ರಲ್ಲಿ ರಾಜಕೀಯವಾಗಿ ಪ್ರಮೋಷನ್ ಆಕಾಂಕ್ಷೆ ವ್ಯಕ್ತಪಡಿಸಿದ ಪರಮೇಶ್ವರ್
ಎಲ್ಲರಿಗೂ ಜೀವನದಲ್ಲಿ ಏನೇನೋ ಆಗಬೇಕು ಅನ್ನೋ ಆಸೆ ಇರುತ್ತೆ. ಅದೇ ರೀತಿ ನನಗೂ ಆಕಾಂಕ್ಷೆ ಇದೆ. ಎಲ್ಲರ ರೀತಿಯಲ್ಲಿ ನನಗೂ ಆಕಾಂಕ್ಷೆ ಇದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ 2026 ರಲ್ಲಿ ಪದನ್ನೋತ್ತಿಯ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವರ್ಷ ರಾಜಕೀಯ ಪದೋನ್ನತಿ ಸಿಗಲಿದೆಯೇ ಎಂಬ ಪ್ರಶ್ನೆಗೆ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. 2026 ರಲ್ಲಿ ತಮಗೆ ರಾಜಕೀಯ ಪದೋನ್ನತಿ ಸಿಗುತ್ತೆ ಎಂದು ಡಾ.ಜಿ.ಪರಮೇಶ್ವರ್ ಸುಳಿವು ಕೊಟ್ಟಿದ್ದಾರೆ. 2026 ರಲ್ಲಿ ರಾಜಕೀಯ ಪದನ್ನೋತಿಯು ನಮ್ಮ ಹೈಕಮ್ಯಾಂಡ್‌ಗೆ ಬಿಟ್ಟ ವಿಚಾರ. ಹೈಕಮ್ಯಾಂಡ್ ನವರು ತೀರ್ಮಾನ ಮಾಡಿದರೇ, ಅದು ಆಗುತ್ತೆ. ನಾನು ಯಾವತ್ತೂ ಇಲ್ಲಿಯವರೆಗೂ ಆಶಾವಾದಿಯಾಗಿಯೇ ಬದುಕಿದ್ದೇನೆ. ಅದೇನು ಹೊಸದಾಗಿ ಆಗಬೇಕು ಎಂದೇನೂ ಇಲ್ಲ. ಎಲ್ಲರಿಗೂ ಜೀವನದಲ್ಲಿ ಏನೇನೋ ಆಗಬೇಕು ಅಂತ ಇರುತ್ತೆ. ಮನುಷ್ಯನಿಗೆ ಆಕಾಂಕ್ಷೆ ಅನ್ನೋದು ಇರಲೇಬೇಕು, ಇಲ್ಲ ಅಂದರೇ, ಮನುಷ್ಯ ಅನಿಸಿಕೊಳ್ಳಲ್ಲ. ನನಗೂ ಆಕಾಂಕ್ಷೆ ಇದೆ, ಎಲ್ಲರ ರೀತಿಯಲ್ಲಿ ನನಗೂ ಇದೆ. ರಾಜಕೀಯ ಸೇರಿದಾಗ ಶಾಸಕ ಆಗಬೇಕು, ನಂತರ ಮಂತ್ರಿ ಆಗಬೇಕು ಅಂತೆಲ್ಲ ಆಸೆ ಇರುತ್ತೆ. ಒಂದೊಂದು ಹಂತದಲ್ಲೂ ಮುಂದಿನ ಹಂತಕ್ಕೆ ಹೋಗಬೇಕು ಅಂತ ಆಸೆ ಇರುತ್ತೆ. ಅದೆಲ್ಲ ನಮ್ಮ ಹೈಕಮಾಂಡ್ ಗೆ ಬಿಟ್ಟ ವಿಚಾರ.
ಅದಕ್ಕೆ ವಾತಾವರಣ ಪೂರಕವಾಗಿದೆಯಾ ಇಲ್ವಾ ಅಂತ ನೀವೇ ಗಮನಿಸುತ್ತಿದ್ದೀರಿ ಅಲ್ಲವೇ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಯಾರಾರಿಗೆ ವಾತಾವರಣ ಪೂರಕವಾಗಿದೆ? ಯಾರಿಗೆ ಇಲ್ಲ? ಅಂತ ನಿಮ್ಮ ಕ್ಯಾಮರಾ ಲೆನ್ಸ್‌ಗಳಲ್ಲಿ ನೀವು ಸೂಕ್ಷ್ಮವಾಗಿ ಗಮನಿಸುತ್ತಿದ್ದೀರಲ್ಲ, ನಿಮಗೆ ಕಾಣಿಸುತ್ತೆ ಎಂದು ಪರೋಕ್ಷವಾಗಿ ಸಿಎಂ ಆಗುವ ಆಶಾವಾದವನ್ನು ಗೃಹ ಸಚಿವ ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2025/07/DR_G_PARAMESHWARA_NEW.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us