/newsfirstlive-kannada/media/media_files/2025/09/29/jarakiholi-versus-katti-family-2025-09-29-16-24-41.jpg)
ಜಾರಕಿಹೊಳಿ ವರ್ಸಸ್ ಕತ್ತಿ ಫ್ಯಾಮಿಲಿ ನಡುವಿನ ಡಿಸಿಸಿ ಬ್ಯಾಂಕ್ ಫೈಟ್
ಬೆಳಗಾವಿ ಡಿಸಿಸಿ ಬ್ಯಾಂಕ್​​​ ಚುನಾವಣೆ.. ಇದು ಬದ್ಧ ಎದುರಾಳಿಗಳ ಕದನ.. ನಿರ್ದೇಶಕ ಸ್ಥಾನಗಳಿಗಾಗಿ ನಡೆಯುತ್ತಿರೋ ಸಮರ. ನಾಳೆ ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯ ಮತಗಟ್ಟೆ ಕೇಂದ್ರಗಳ ವ್ಯವಸ್ಥೆಯಾಗಿದೆ. ಆದ್ರೆ, ಹುಕ್ಕೇರಿ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಎಲೆಕ್ಷನ್ ಮುಂದೂಡಿಕೆಯಾಗಿದೆ. ಜಾರಕಿಹೊಳಿ ವಿರುದ್ಧ ಕತ್ತಿ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ ಅಂದ್ರೆ ರಾಜಕೀಯ ಮನೆತನಗಳ ಸಮರ. ಅದರಲ್ಲೂ ಕತ್ತಿ-ಜಾರಕಿಹೊಳಿ ಕುಟುಂಬದ ಮಧ್ಯೆ ಪೊಲಿಟಿಕಲ್ ಫೈಟ್ ಕಾಮನ್. ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತೊಮ್ಮೆ ಬದ್ಧವೈರಿಗಳ ಕದನಕ್ಕೆ ಹಣಿಯಾಗಿದೆ. ನಾಳೆಯ ಎಲೆಕ್ಷನ್‌ಗೆ ಸಿದ್ಧವಾಗಿದ್ದ ಕತ್ತಿ ಬಣಕ್ಕೆ ಬಿಗ್‌ಶಾಕ್ ತಟ್ಟಿದೆ.
ನಾಳೆ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ
ಭಾರೀ ಜಿದ್ದಾಜಿದ್ದಿ.. ಏಳು ತಾಲೂಕಿನ ಸ್ಥಾನಗಳಿಗೆ ಎಲೆಕ್ಷನ್
ಲೇವಾದೇವಿದಾರರ ಕಪಿಮುಷ್ಠಿಯಿಂದ ಜಿಲ್ಲೆಯ ರೈತರನ್ನು ಮುಕ್ತಗೊಳಿಸಿದ ಬ್ಯಾಂಕ್ ಅಂದ್ರೆ ಬೆಳಗಾವಿ ಡಿಸಿಸಿ ಬ್ಯಾಂಕ್. ಇದೀಗ ಬೆಳಗಾವಿ ಕೇಂದ್ರ ಸಹಕಾರಿ ಬ್ಯಾಂಕ್​​ ನಿರ್ದೇಶಕರ ಆಯ್ಕೆಗೆ ನಾಳೆ ಚುನಾವಣೆ ನಡೆಯಲಿದೆ. ಬೆಳಗಾವಿಯ ಪ್ರಬಲ ರಾಜಕೀಯ ಕುಟುಂಬಗಳ ಜಿದ್ದಾಜಿದ್ದಿನಿಂದ ಡಿಸಿಸಿ ಬ್ಯಾಂಕ್ ಚುನಾವಣೆ ರಾಜ್ಯದ ಗಮನ ಸೆಳೆದಿದ್ದು, ಗೆಲುವಿಗಾಗಿ ರೆಸಾರ್ಟ್ ರಾಜಕಾರಣವೂ ನಡೀತಿದೆ.
ನಾಳೆ ಡಿಸಿಸಿ ಬ್ಯಾಂಕ್ ಚುನಾವಣೆ!
ನಾಳೆ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ
ಬೆಳಗಾವಿಯ 7 ತಾಲೂಕಿನ ನಿರ್ದೇಶಕರ ಸ್ಥಾನಗಳಿಗೆ ಮತದಾನ
ಬಿ.ಕೆ.ಮಾಡೆಲ್ ಸ್ಕೂಲ್‌ನಲ್ಲಿ ಮತದಾನ, ನಾಳೆಯೇ ಮತ ಏಣಿಕೆ
ಅರ್ಹ ಮತದಾರರಿಂದ ಡಿಸಿಸಿ ಬ್ಯಾಂಕ್‌ಗೆ ಮತದಾನ ನಡೆಯಲಿದೆ
ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ಡಿಸಿಸಿಗೆ ಮತದಾನ
ಸಂಜೆ 4 ಗಂಟೆಯಿಂದ ಮತ ಎಣಿಕೆ ಕಾರ್ಯ, ನಾಳೆಯೇ ಫಲಿತಾಂಶ
ಗೌಪ್ಯ ಮತದಾನ, ಯಾರೇ ಮತ ಬಹಿರಂಗಪಡಿಸಿದ್ರೆ ಆ ಮತ ಅನರ್ಹ
ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿರೋ ಮತದಾನ, ಮತ ಏಣಿಕೆ
(ನಾಳೆ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳಗಾವಿಯ 7 ತಾಲೂಕಿನ ನಿರ್ದೇಶಕರ ಸ್ಥಾನಗಳಿಗೆ ಮತ ಚಲಾವಣೆ ಆಗಲಿದೆ. ನಗರದ ಬಿ.ಕೆ.ಮಾಡೆಲ್ ಸ್ಕೂಲ್‌ನಲ್ಲಿ ಮತದಾನ ನಡೆಯಲಿದ್ದು, ನಾಳೆಯೇ ಮತ ಏಣಿಕೆಕಾರ್ಯ ನಡೆಯಲಿದೆ. ಅರ್ಹ ಮತದಾರರು ಡಿಸಿಸಿ ಬ್ಯಾಂಕ್‌ಗೆ ಮತ ಚಲಾಯಿಸಲಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ಡಿಸಿಸಿ ಬ್ಯಾಂಕ್‌ಗೆ ಮತದಾನ ನಡೆದ್ರೆ, ಸಂಜೆ 4 ಗಂಟೆಯಿಂದ ಮತ ಏಣಿಕೆ ಕಾರ್ಯ ನಡೆಯಲಿದ್ದು, ನಾಳೆಯೇ ಫಲಿತಾಂಶ ಹೊರಬೀಳಲಿದೆ. ಗೌಪ್ಯವಾಗಿ ಮತದಾನ ಕಾರ್ಯ ನಡೆಯಲಿದ್ದು, ಯಾರೇ ಮತ ಬಹಿರಂಗಪಡಿಸಿದ್ದು ಕಂಡುಬಂದ್ರೆ ಆ ಮತ ಅನರ್ಹವಾಗಲಿದೆ. ಸಿಸಿಟಿವಿ ಕಣ್ಗಾವಲಿನಲ್ಲಿ ಮತದಾನ ಮತ್ತು ಮತ ಏಣಿಕೆ ಕಾರ್ಯ ನಡೆಯಲಿದೆ.)
ಹುಕ್ಕೇರಿ ನಿರ್ದೇಶಕ ಚುನಾವಣೆಗೆ ಹೈಕೋರ್ಟ್ ಅಸ್ತು!
ರಮೇಶ್ ಕತ್ತಿಗೆ ರಿಲೀಫ್.. ವೈರಿಗಳ ವಿರುದ್ಧ ವಾಕ್ಸಮರ!
ಬೆಳಗಾವಿ ಡಿಸಿಸಿ ಬ್ಯಾಂಕ್‌ನ ಪ್ರತಿನಿಧಿಸುವ ಸದಸ್ಯನ ಹೆಸರನ್ನ ಮತದಾರರ ಲಿಸ್ಟ್‌ನಿಂದ ಕೈಬಿಡಲಾಗಿತ್ತು. ಈ ವಿವಾದ ಧಾರವಾಡ ಹೈಕೋರ್ಟ್ ಪೀಠದ ಮೆಟ್ಟಿಲೇರಿತ್ತು. ಹುಕ್ಕೇರಿ ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯನ್ನ ಮುಂದೂಡಿಕೆ ಮಾಡಲಾಗಿತ್ತು. ಆದ್ರೀಗ ಇವತ್ತು ರಮೇಶ್ ಕತ್ತಿ ಬಣಕ್ಕೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ನಾಳೆಯೇ ಹುಕ್ಕೇರಿ ತಾಲೂಕಿನ ನಿರ್ದೇಶಕ ಚುನಾವಣೆಗೆ ಧಾರವಾಡ ಹೈಕೋರ್ಟ್ ಅಸ್ತು ಎಂದಿದೆ. ಇದು ನಮಗೆ ಸಿಕ್ಕಿರೋ ಮೊದಲ ಜಯ ಅಂತ ರಮೇಶ್ ಕತ್ತಿ ಬಣ್ಣಿಸಿದ್ದಾರೆ. ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಎಕೆ 47 ಗನ್ ಆರೋಪ ಮಾಡಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರೆಸಾರ್ಟ್ ರಾಜಕೀಯವೂ ನಡೆದಿದೆ. ಗೋವಾ, ಮಹಾರಾಷ್ಟ್ರ, ಉತ್ತರ ಭಾರತದ ಧಾರ್ಮಿಕ ಸ್ಥಳಗಳಿಗೆ ಮತದಾರರನ್ನ ಸ್ಥಳಾಂತರಿಸಿರೋ ಆರೋಪ ಕೇಳಿಬಂದಿದೆ. ಇದೆಲ್ಲದರ ಮಧ್ಯೆ ಬೆಳಗಾವಿಯ ಕುಟುಂಬ ರಾಜಕಾರಣದಲ್ಲಿ ಯಾರ ಕೈ ಮೇಲಾಗಲಿದೆ ಅನ್ನೋದು ನಾಳೆ ಸಂಜೆ ಗೊತ್ತಾಗಲಿದೆ.
ಜಾರಕಿಹೊಳಿ ಫ್ಯಾಮಿಲಿ ಒಟ್ಟಾಗಿ ಈ ಭಾರಿ ಡಿಸಿಸಿ ಬ್ಯಾಂಕ್ ಗದ್ದಿಗೆ ಹಿಡಿಯಲು ರಣತಂತ್ರ ರೂಪಿಸಿ ಅದರಲ್ಲಿ ಈಗಾಗಲೇ ಯಶಸ್ವಿಯಾಗಿದ್ದಾರೆ. ನಾಳೆ ನಡೆಯುವ 7 ತಾಲ್ಲೂಕಿನ ನಿರ್ದೇಶಕ ಸ್ಥಾನಗಳಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಕುತೂಹಲ ಇದೆ.
ಶ್ರೀಕಾಂತ್, ನ್ಯೂಸ್‌ಫಸ್ಟ್, ಬೆಳಗಾವಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.