/newsfirstlive-kannada/media/media_files/2025/11/22/cm-siddaramaiah-and-rahul-gandhi-2025-11-22-18-19-04.jpg)
ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ!
ಕಾಂಗ್ರೆಸ್​ನಲ್ಲಿ ಪವರ್​​ ಫೈಟ್​​, ರಣಭಯಂಕರಕ್ಕೆ ತಿರುಗಿದೆ.. ಸಂಖ್ಯಾಬಲದ ಆಟಕ್ಕೂ ಚಾಲನೆ ಸಿಕ್ಕಿದೆ.. ತಂತ್ರ-ಪ್ರತಿತಂತ್ರಗಳ ದಾಳು ಉರುಳ್ತಿದ್ದು, ಶಾಸಕರು ಒಮ್ಮೆ ಆ ಕಡೆ, ಒಮ್ಮೆ ಈ ಕಡೆ ಅಂತ ಮ್ಯುಸಿಕಲ್​​ ಚೇರ್​​ ಆಡ್ತಿದ್ದಾರೆ.. ಈ ಕದನದ ನಡುವೆ ರಾಹುಲ್​​ ಗಾಂಧಿ ಮಧ್ಯಪ್ರವೇಶ ಆಗಿದೆ.. ಶಾಂತಿ-ಸಂಧಾನ-ಕದನ ವಿರಾಮದ ಸಂದೇಶ ಬಂದಿದೆ..
ರಾಜ್ಯ ಕಾಂಗ್ರೆಸ್​ನಲ್ಲೀಗ ರಣಬಿಸಿಲು.. ಡಿಕೆಶಿಯ ಹುರಿಗಣ್ಣಿನ ಜ್ವಾಲೆಗೆ ಹೈಕಮಾಂಡ್​​​ಗೂ ನಡುಕು ಹುಟ್ಟಿಸಿದೆ.. ನಿನ್ನೆ ಬಂಡೆಗಳ ನಡುವೆ ಮಾರ್ದನಿಸಿದ ವ್ಯಾಘ್ರ ಘರ್ಜನೆಗೆ ಎದುರಾಳಿ ಪಡೆ ಬೆವರಿಳಿತಿದೆ.. ಇತ್ತ ಸಿದ್ದು ಕಾಲಡಿಯಲ್ಲಿ ಗುಡುಗುವ ಸಿಡಿಲಿನ ಸದ್ದು ಕೇಳಿಸ್ತಿದೆ.. ಪಟ್ಟ ಬಿಟ್ಟು ಕೊಡಲ್ಲ ಅನ್ನೋ ಸಿಂಗಲ್​​ ಶೇರ್​​ನಂತೆ ಆರ್ಭಟಿಸಿದ್ದಾರೆ.. ಈ ರಣಾರ್ಭಟಗಳಿಂದ ಹಸ್ತಪಡೆ ಅತ್ತ ಧರಿ-ಇತ್ತ ಪುಲಿ ಆಗಿ ಒದ್ದಾಡ್ತಿದೆ..
ತಾರಕಕ್ಕೆ ತಲುಪಿದ ಕುರ್ಚಿ ಕದನ.. ತಂತ್ರ-ಪ್ರತಿತಂತ್ರಗಳ ದಾಳ!
ಹೈಕಮಾಂಡ್​​ ರಂಗಪ್ರವೇಶ, ರಾಹುಲ್​​ ಕಡೆಯಿಂದ ಸಂದೇಶ!
ಇದು ಕನಕನ ಕದನ.. ಪಟ್ಟದಾಟಕ್ಕೆ ಕಾಂಗ್ರೆಸ್​​​ನ ಕಟ್ಟಪ್ಪ ಹೂಡಿದ ಚಕ್ರವ್ಯೂಹ.. ಕಾಂಗ್ರೆಸ್​​ನಲ್ಲಿ ತೆರೆ ಮರೆಯಲ್ಲೇ ಗದ್ದುಗೆ ಗುದ್ದಾಟವೀಗ ನೇರಯುದ್ಧಕ್ಕೆ ನಾಂದಿ ಹಾಡಿದೆ.. ಶಾಸಕರ ಬಲ ಹೆಚ್ಚಿಸಿಕೊಳ್ಳಲು ಡಿಸಿಎಂ ಡಿ.ಕೆ.ಶಿವಕುಮಾರ್​ ತಂತ್ರಗಾರಿಕೆ ಆರಂಭಿಸಿದ್ದಾರೆ.. ಈ ನಡುವೆ ರಾಹುಲ್​​ ಸಂದೇಶ ಬಂದಿದೆ..
ಸಿಎಂ-ಡಿಸಿಎಂಗೆ ರಾಹುಲ್​​ ಸಂದೇಶ
ಕುರ್ಚಿ ಕದನ ನಡೆಸ್ತಿರೋ ಸಿಎಂ & ಡಿಸಿಎಂಗೆ ರಾಹುಲ್ ಸಂದೇಶ
ಗೊಂದಲದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ರಾಗಾ ಸೂಚನೆ
AICC ಅಧ್ಯಕ್ಷ ಖರ್ಗೆ ಮೂಲಕ ರಾಹುಲ್​​​​​ ಗಾಂಧಿ ಮೆಸೇಜ್​​​ ಪಾಸ್​​​
ಸಿಎಂ ಮತ್ತು ಡಿಸಿಎಂ ಇಬ್ಬರನ್ನ ಕರೆಸಿ ಮಾತನಾಡೋದಾಗಿ ವರದಿ
ಸದ್ಯ ವಿದೇಶದಿಂದ ವಾಪಸ್ಸಾದ ಮೇಲೆ ದೆಹಲಿಗೆ ಕರೆಸಿ ಮಾತುಕತೆ
ಕುರ್ಚಿ ಕದನ ನಡೆಸ್ತಿರೋ ಸಿಎಂ-ಡಿಸಿಎಂಗೆ ರಾಹುಲ್ ಗಾಂಧಿ ಸಂದೇಶ ಬಂದಿದೆ.. ಗೊಂದಲದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ.. AICC ಅಧ್ಯಕ್ಷ ಖರ್ಗೆ ಮೂಲಕ ಮೆಸೇಜ್​​​ ಪಾಸ್​​​ ಮಾಡಿದ್ದಾರೆ.. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​, ಇಬ್ಬರನ್ನೂ ಕರೆಸಿ ಮಾತನಾಡೋದಾಗಿ ತಿಳಿಸಿದ್ದಾರೆ.. ಸದ್ಯ ವಿದೇಶದಿಂದ ವಾಪಸ್ಸಾದ ಮೇಲೆ ಇಬ್ಬರನ್ನೂ ದೆಹಲಿಗೆ ಕರೆಸಿ ಮಾತನಾಡುವ ಬಗ್ಗೆ ರಾಹುಲ್ ಪ್ರಸ್ತಾಪ ಇಟ್ಟಿದ್ದಾರೆ ಅಂತ ಗೊತ್ತಾಗಿದೆ..
ನಿನ್ನೆ ಡಿಸಿಎಂ ಮನೆ, ಇವತ್ತು ಸಿಎಂ ನಿವಾಸಕ್ಕೆ ಭೇಟಿ!
ಪವರ್​​​ ಗೇಮ್​​​ನಲ್ಲಿ ಅಚ್ಚರಿ ಮೂಡಿಸಿದ ಶಾಸಕರ ನಡೆ!
ಒಂದೆಡೆ ಡಿಕೆಶಿ ಬೆಂಬಲಿಗ ಶಾಸಕರಿಂದ ಪವರ್ ಶೋ ನಡೀತಿದ್ರೆ, ಕೆಲ ಶಾಸಕರು ಯಾರ ಕೆಂಗಣ್ಣಿಗೂ ಬೀಳೋದು ಬೇಡ ಅಂತ ಎರಡೂ ಪವರ್​​ ಸೆಂಟರ್​​ಗಳಿಗೆ ಭೇಟಿ ನೀಡಿ ನಿಷ್ಠೆ ಮೆರೆದಿದ್ದಾರೆ.. ಇದರ ನಡುವೆ ನಂಬರ್ ಗೇಮ್‌ನಂತಹ ದಾಳಗಳನ್ನು ಪ್ರಯೋಗಿಸಲು ಡಿಕೆಶಿ ಸಜ್ಜಾಗ್ತಿದ್ದಂತೆ ಕಾಣಿಸ್ತಿದೆ.. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಬಣವೂ ತಂತ್ರಗಾರಿಕೆ ಆರಂಭಿಸಿದೆ..
ಇತ್ತ ಸಿಎಂ ನಿವಾಸ ಸಹ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಯ್ತು.. ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಅಂತು ಸಿಎಂ ನಿವಾಸದಿಂದಲೇ ಬೆಳವಣಿಗೆ ಮೇಲೆ ಕಣ್ಣೀಟ್ಟಂತೆ ಕಾಣಿಸ್ತು.. ನಿನ್ನೆ ಡಿಸಿಎಂ ಮನೆಯಲ್ಲಿದ್ದ ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್, ಭದ್ರಾವತಿಯ ಬಿ.ಕೆ.ಸಂಗಮೇಶ್, ಶಿಗ್ಗಾಂವಿ ಶಾಸಕ ಯಾಸೀರ್ ಪಠಾಣ್, ಹಾನಗಲ್​​​ದ ಶ್ರೀನಿವಾಸ ಮಾನೆ ಸೇರಿ ಹಲವರು ಸಿಎಂ ನಿವಾಸದಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ರು..
/filters:format(webp)/newsfirstlive-kannada/media/media_files/2025/11/22/cm-siddaramaiah-and-rahul-gandhi02-2025-11-22-18-23-26.jpg)
ಪವರ್​​ ಶೇರಿಂಗ್​​ ಗುದ್ದಾಟದ ಮಧ್ಯೆ ಸಿಎಂ-ಡಿಸಿಎಂ ಮುಖಾಮುಖಿ
ಮತ್ಸ್ಯಮೇಳದಲ್ಲಿ ‘ಮೀನಿಗೆ ಗಾಳ’ ಹಾಕುವ ಕಲೆ ವಿವರಿಸಿದ ಡಿಕೆಶಿ!
ಇಷ್ಟೆಲ್ಲ ಗದ್ದಲ ಗಲಾಟೆ, ಮುನಿಸು, ಕ್ರಾಂತಿಯ ಕಿಚ್ಚಿನ ನಡುವೆ ಸಿಎಂ ಮತ್ತು ಡಿಸಿಎಂ ಮುಖಾಮುಖಿ ಆದ್ರು.. ಮತ್ಸ್ಯಮೇಳದಲ್ಲಿ ಇಬ್ಬರೂ ಭಾಗಿ ಆಗಿ ಗುಸುಗುಸು-ಪಿಸುಪಿಸು ಮಾತು ಏನೂ ನಡೆದೇ ಇಲ್ಲ ಅನ್ನೋ ರೀತಿ ಬಾಹ್ಯವಾಗಿ ತೋರಿಸಿಕೊಂಡ್ರು.. ಮೀನು ಹಿಡಿಯುವ ಕಲೆ ನನಗೆ ಗೊತ್ತು ಅಂತ ಸಿಎಂ ಎದುರೆ ಡಿಕೆಶಿ ಪವರ್​​ ಪಂಚ್​​ ಕೊಟ್ರು..
‘ಮೀನಿಗೆ ಗಾಳ ಹಾಕೋದು ಗೊತ್ತು’ -ಡಿಕೆಶಿ
‘ದಿನವೂ ಶಿಕಾರಿ ಸಿಗಲ್ಲ, ತಾಳ್ಮೆ ಬೇಕು’ -- ಡಿಕೆಶಿ
ಪಾವಗಡ ಕ್ಷೇತ್ರದ ಶನೇಶ್ವರ ದೇಗುಲದಲ್ಲಿ ಎಳ್ಳಾರತಿ, ತುಲಾಭಾರ
ಡಿಕೆಶಿ ನಿವಾಸಕ್ಕೆ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿ!
ಈ ಹಿಂದೆ ಡಿಕೆಶಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಮೊರೆಹೋಗಿದ್ರು.. ಅದ್ರಂತೆ ಇವತ್ತು ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ಡಿಸಿಎಂ ನಿವಾಸಕ್ಕೆ ಆಗಮಿಸಿದೆ.. ನಿವಾಸದ ಒಳಗೆ ವಿಶೇಷ ಪೂಜೆ ನೆರವೇರಿದೆ. ಇತ್ತ, ಡಿಕೆಶಿ ಬೆಂಬಲಿಗರು ತುಮಕೂರಿನ ಪಾವಗಡದ ಶನೇಶ್ವರ ದೇವಾಲಯದಲ್ಲಿ ಕುಜದೋಷ, ಶನಿ ದೋಷ ದೂರವಾಗಿ ಸಿಎಂ ಆಗಲಿ ಎಂದು ವಿಶೇಷ ಪೂಜೆ ಹಾಗೂ ಎಳ್ಳಿನ ತುಲಾಭಾರ ಮಾಡಿದ್ದಾರೆ..
ಒಟ್ಟಾರೆ, ಕುರ್ಚಿ ಕದನ ತಾರಕಕ್ಕೇರಿದ್ದು, ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆ ನಡೆಯುತ್ತಿದೆ.. ಸದ್ಯಕ್ಕೆ ಹೈಕಮಾಂಡ್​​, ಮೌನ ಸಂದೇಶ ನೀಡಿದ್ದು, ನವೆಂಬರ್​​ ಕ್ರಾಂತಿ ಸಸ್ಪೆನ್ಸ್​ ಥ್ರಿಲ್ಲರ್​ ರೀತಿ ಕಾಣಿಸ್ತಿದೆ..
/filters:format(webp)/newsfirstlive-kannada/media/media_files/2025/11/22/cm-siddaramaiah-and-dks-2025-11-22-18-35-39.jpg)
ಹರೀಶ್​​ ಕಾಕೋಳ್​​, ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us