/newsfirstlive-kannada/media/media_files/2025/08/11/kn-rajanna-statement-2025-08-11-20-16-45.jpg)
ಕೆ.ಎನ್ . ರಾಜಣ್ಣ
ಸಹಕಾರ ಖಾತೆ ಸಚಿವ ಸ್ಥಾನಕ್ಕೆ ಕೆ.ಎನ್.ರಾಜಣ್ಣ ರಾಜೀನಾಮೆ ಕೊಟ್ಟ ನಂತರ ಮತ್ತೆ ಕ್ಯಾಬಿನೆಟ್ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ. ಕೆ.ಎನ್.ಆರ್ ಬೆಂಬಲಿಗರು ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದರ ವಿವಿಧ ಹಿಂದುಳಿದ ವರ್ಗಗಳ ಮಠಾಧೀಶರು ಕೂಡ ಕೆ.ಎನ್.ರಾಜಣ್ಣರನ್ನು ಮತ್ತೆ ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಆದರೇ, ಕೆ.ಎನ್.ರಾಜಣ್ಣ ಬಿಜೆಪಿಗೆ ಸೇರ್ಪಡೆ ಆಗ್ತಾರೆ ಎಂದು ಅವರದ್ದೇ ಕಾಂಗ್ರೆಸ್ ಪಕ್ಷದ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ಬಾಲಕೃಷ್ಣ ಹೇಳಿಕೆಗೆ ನಿನ್ನೆ ರಾಜಣ್ಣ ಪುತ್ರ ರಾಜೇಂದ್ರ ಪ್ರತಿಕ್ರಿಯಿಸಿದ್ದರು. ಬಾಲಕೃಷ್ಣ ಅವರೇ ಟೀಮ್ ಕಟ್ಟಿಕೊಂಡು ಬಿಜೆಪಿಗೆ ಹೋಗ್ತಾರೆ. ಇದೇ ರಾಜಣ್ಣ ಹೇಳಿದ್ದ ಸೆಪ್ಟೆಂಬರ್ ಕ್ರಾಂತಿ ಎಂದು ವಿಧಾನಪರಿಷತ್ ಸದಸ್ಯರೂ ಆದ ರಾಜೇಂದ್ರ ಹೇಳಿದ್ದರು.
ಈಗ ಖುದ್ದ ಮಾಜಿ ಸಚಿವ ಕೆ.ಎನ್. ರಾಜಣ್ಣ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾಕೆ ಬಿಜೆಪಿ ಸೇರಲಿ, ನಾನ್ಯಾಕೆ ಪಾರ್ಟಿ ಬಿಡಲಿ ಎಂದು ಕೆ.ಎನ್. ರಾಜಣ್ಣ ಪ್ರಶ್ನಿಸಿದ್ದಾರೆ. ಮಂತ್ರಿ ಸ್ಥಾನ ಹೋದರು, ನಿಮ್ಮ ಪ್ರೀತಿ ವಿಶ್ವಾಸ ಕಡಿಮೆಯಾಗಿಲ್ಲ . ನಿಮ್ಮ ಕೆಲಸ ಮಾಡಲು ಸಚಿವ ಸ್ಥಾನ ಇರಬೇಕು ಅಂತೇನಿಲ್ಲ. 35,500 ಮತಗಳ ಲೀಡ್ ನಲ್ಲಿ ಗೆದ್ದಿದ್ದೇನೆ. ಈಗ ಚುನಾವಣೆ ಆದ್ರೂ ಮತ್ತೆ ಗೆಲ್ತೀನಿ.ನಾನು ಭ್ರಷ್ಟಾಚಾರ ಮಾಡಿಲ್ಲ, ಅದಕ್ಷನಾಗಿ ಇಲಾಖೆ ನಡೆಸಿಲ್ಲ. ಸಹಕಾರಿ ಸಂಘಗಳಿಗೂ ರಿಸರ್ವೇಷನ್ ಕಾಯ್ದೆ ನಾನು ಮಾಡಿದ್ದೇನೆ. ಮೀಸಲಾತಿ ಮಂಜೂರಾತಿಯಾಗಿದೆ, ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ. ನಾನು ಯಾಕೆ ಬಿಜೆಪಿ ಸೇರಲಿ ಎಂದು ಪ್ರಶ್ನಿಸಿದ್ದಾರೆ. ನಾನ್ಯಾಕೆ ಪಾರ್ಟಿ ಬಿಡಲಿ. ನಾನು ಎಲ್ಲೇ, ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ, ಚುನಾವಣೆಯಲ್ಲಿ ಗೆಲ್ತೀನಿ. ಪಕ್ಷೇತರನಾಗಿ ಸ್ಪರ್ಧಿಸಿದ್ರು ಗೆಲ್ತೀನಿ. ಕಾಂಗ್ರೆಸ್ ತೊರೆಯಲ್ಲ, ರಾಹುಲ್ ಗಾಂಧಿಯ ವೋಟ್ ಚೋರಿ ಅಂದೋಲನಕ್ಕೆ ಸಂಪೂರ್ಣ ಬೆಂಬಲ ಇದೆ. ಊಹಾಪೋಹಾಗಳಿಗೆ ಕಿವಿಗೋಡೊದು ಬೇಡ ಎಂದು ಕೆ.ಎನ್.ರಾಜಣ್ಣ ತಮ್ಮ ಬೆಂಬಲಿಗರಿಗೆ ಬಹಿರಂಗ ಸಭೆಯ ಮೂಲಕ ಹೇಳಿದ್ದಾರೆ. ಈ ಮೂಲಕ ಎಚ್.ಸಿ.ಬಾಲಕೃಷ್ಣ ಹೇಳಿಕೆಯಂತೆ ತಾವು ಬಿಜೆಪಿಗೆ ಹೋಗಲ್ಲ ಎಂಬುದನ್ನು ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದಂತೆ ಆಗಿದೆ.
ಕೆ.ಎನ್.ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಬೆಂಬಲಿಗರಾಗಿದ್ದಾರೆ. ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವುದಕ್ಕೆ ಹೀಗೆಲ್ಲಾ ಬಾಲಕೃಷ್ಣ ಮಾತನಾಡುತ್ತಿದ್ದಾರೆ ಎಂದು ನಿನ್ನೆ ಕೆಎನ್‌ಆರ್ ಪುತ್ರ ರಾಜೇಂದ್ರ ಹೇಳಿದ್ದರು.
ಕುಣಿಗಲ್ ಶಾಸಕ ರಂಗನಾಥ್
ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಹೇಳಿದ್ದೇನು?
ಇನ್ನೂ ತುಮಕೂರು ಜಿಲ್ಲೆಯ ಹಿರಿಯ ರಾಜಕಾರಣಿಯಾಗಿರುವ ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗ್ತಾರೆ ಎಂಬ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆಗೆ ಕುಣಿಗಲ್ ಕ್ಷೇತ್ರದ ಶಾಸಕ ಎಚ್.ಡಿ.ರಂಗನಾಥ್ ಪ್ರತಿಕ್ರಿಯಿಸಿದ್ದಾರೆ. ರಾಜಣ್ಣನವರು ನಮ್ಮ ಜಿಲ್ಲೆಯ ಹಿರಿಯ ನಾಯಕರು . ಅವ್ರು ಬೇರೆ ಪಾರ್ಟಿಗೆ ಹೋಗಿ ಬಂದಿರಬಹುದು,ಆದ್ರೆ ಬಿಜೆಪಿಗೆ ಹೋಗೋ ನಿರ್ಧಾರ ಮಾಡಲ್ಲ . ಆ ವಿಚಾರದಲ್ಲಿ ಮಾತಾಡುವಷ್ಟು ನಾನು ದೊಡ್ಡವನಲ್ಲ . ಹೈಕಮಾಂಡ್ ವಿರುದ್ದ ಮಾತಾಡಿದ್ದಕ್ಕೆ ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ.
ಹೈಕಮಾಂಡ್ ನವರೇ ರಾಜಣ್ಣನವರನ್ನು ಮಂತ್ರಿ ಮಾಡಿದ್ದರು. ಕೆಎನ್‌ಆರ್ ಪುತ್ರ ರಾಜೇಂದ್ರ ಅವರು ದೊಡ್ಡ ರಾಜಕಾರಣಿ, ಅವರ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ . ಅವರ ವಿಧಾನಪರಿಷತ್ ಚುನಾವಣೆಯಲ್ಲಿ ನಾನೂ ಸಾಥ್ ಕೊಟ್ಟಿದ್ದೇನೆ . ರಾಜಣ್ಣ ಲಾಯಲ್ಟಿ ಬಗ್ಗೆ ಮಾತಾಡೋದು ಇಲ್ಲ . ಡಿಕೆಶಿ ಸಿಎಂ ಆಗಬೇಕು ಅಂತಾ ಎಲ್ಲಾ ಕಾರ್ಯಕರ್ತರು ಹೇಳುವುದರಲ್ಲಿ ಅರ್ಥ ಇದೆ . ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾ ನಾನೂ ಹೇಳಿದ್ದೇನೆ . ಸರ್ಕಾರದಲ್ಲಿ ಗೊಂದಲ ಆಗೋ ಹೇಳಿಕೆ ಕೊಡ ಕೂಡದು . ತುಮಕೂರು ಜಿಲ್ಲೆಯ ಕೆಲವು ವಿಚಾರಗಳಲ್ಲಿ ನನಗೂ ಅಸಮಾಧಾನ ಇದೆ, ನಾನು ಹೋಗಿ ಕೂತು ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ತೇನೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಎಚ್.ಡಿ. ರಂಗನಾಥ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.