/newsfirstlive-kannada/media/media_files/2025/11/16/dk-suresh-2025-11-16-11-21-38.jpg)
ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಗೆಲುವಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಪ್ರಯತ್ನ ಮಾಡುತ್ತಿದ್ದೇವೆ ಎಂದ ಮೇಲೆ ಒಂದಲ್ಲ, ಒಂದು ದಿನ ಗೆಲ್ಲಲೇಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಈ ಹೇಳಿಕೆಯನ್ನು ಪ್ರಸಕ್ತ ರಾಜ್ಯದ ರಾಜಕೀಯ ಪರಿಸ್ಥಿತಿಗೆ ಹೊಂದಿಸಿಕೊಂಡು ನೋಡಲಾಗುತ್ತಿದೆ. ಹೀಗಾಗಿ ಡಿ.ಕೆ.ಸುರೇಶ್ ಮಾರ್ಮಿಕವಾಗಿ ಮಾತನಾಡಿದ್ದಾರೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಒಂದಲ್ಲ, ಒಂದು ದಿನ ನಾವು ಗೆಲ್ಲಲೇಬೇಕು ಎಂದು ಸುರೇಶ್ ಹೇಳಿದ್ದಾರೆ ಎಂಬ ಅರ್ಥದಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ.
ಕುಣಿಗಲ್ ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಡಿಕೆ ಸುರೇಶ್, ಎಲ್ಲರೂ ಒಂದಲ್ಲ ಒಂದು ದಿನ ಗೆಲ್ಲಲೇಬೇಕು. ಪ್ರಯತ್ನ ಮಾಡ್ತಾ ಇದ್ದಿವಿ. ಗೆಲುವು ಸಿಕ್ಕೆೇ ಸಿಗುತ್ತದೆ. ಒಬ್ಬರು ಗೆಲ್ಲಲೇಬೇಕು, ಇನ್ನೊಬ್ಬರು ಸೋಲಲೇಬೇಕು. ಎಲ್ಲಾ ಚಟುವಟಿಕೆಯಲ್ಲೂ ಸೋಲು ಗೆಲುವು ಇರಲೇಬೇಕು. ರಾಜಕೀಯದಲ್ಲೂ ಸೋಲು ಗೆಲುವು ಇದ್ದಿದ್ದೇ. ಗೆದ್ದಿದ್ದೇವೆ ಎಂದು ಮೇಲಕ್ಕೆ ಹೋಗೋಕೆ ಆಗಲ್ಲ. ಸೋತಿದ್ದೇವೆ ಎಂದು ಪ್ರಯತ್ನ ಬಿಡೋಕೆ ಆಗಲ್ಲ. ಕ್ರೀಡಾಪಟುಗಳ ನಿರಂತರ ಪ್ರಯತ್ನದಂತೆ, ನಿಮ್ಮಗಳ ಆಶೀರ್ವಾದದಿಂದ ನನ್ನ ಪ್ರಯತ್ನವೂ ನಿರಂತರವಾಗಿ ಇರುತ್ತದೆ ಎಂದು ಡಿಕೆಶಿ ಸೋದರ ಡಿ.ಕೆ.ಸುರೇಶ್ ಹೇಳಿದ್ದಾರೆ. ಸೋಲು ಗೆಲುವು ಒಂದು ಭಾಗ. ಎಲ್ಲವನ್ನೂ ಸಮಾನವಾಗಿ ತೆಗೆದುಕೊಳ್ಳಬೇಕು ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ ಬೌಲಿಂಗ್ ಗೆ ಬೌಂಡರಿ ಬಾರಿಸಿ ಡಿ.ಕೆ ಸುರೇಶ್ ಗಮನ ಸೆಳೆದರು. . ಬಳಿಕ ವೇದಿಕೆ ಭಾಷಣದಲ್ಲಿ ಗೆಲುವಿನ ಬಗ್ಗೆಯೂ ಡಿಕೆ ಸುರೇಶ್ ಮಾತನಾಡಿದ್ದರು. ಡಿಕೆ ಶಿವಕುಮಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಇದು.
ಇನ್ನೂ ನ್ಯೂಸ್ ಫಸ್ಟ್ ಗೆ ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ ಸುರೇಶ್ ಆಟಗಾರರಿಗೆ ಹುರಿದುಂಬಿಸುವ ವೇಳೆ ಮಾತನ್ನಾಡಿದ್ದರು. ಪ್ರಯತ್ನ ಮಾಡ್ತಿದ್ದೇವೆ, ಒಂದಲ್ಲಾ ಒಂದು ದಿನ ಗೆಲ್ಲುತ್ತೇವೆ ಎಂದಿದ್ದಾರೆ. ಇದು ಆಟಗಾರರಿಗೆ ಪ್ರೋತ್ಸಾಹ ನೀಡಲು ಹೇಳಿದ ಮಾತು. ಇದನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಅವರ ಹೇಳಿಕೆಗೂ ನಾಯಕತ್ವ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕ ಎಚ್.ಡಿ.ರಂಗನಾಥ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us