/newsfirstlive-kannada/media/media_files/2025/11/28/madara-chennaiah-swamiji-2025-11-28-12-57-45.jpg)
ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ
ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುವುದೇ ಆದರೇ ನಮ್ಮ ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಲಿ ಎಂದು ಮಾದಾರ ಚೆನ್ನಯ್ಯ ಪೀಠಾಧಿಪತಿ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ. ದಲಿತ ಸಮಾಜಕ್ಕೆ ಸಿಎಂ ಸ್ಥಾನ ಕೊಡಬೇಕು ಅಂತ ಬೇಡಿಕೆ ಇದೆ. ಸಿದ್ದರಾಮಯ್ಯ ಅವರನ್ನ ಕೆಳಗೆ ಇಳಿಸಿ ಕೊಡಿ ಅಂತ ನಾವು ಕೇಳಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆದರೇ ಅಡ್ಡಿ ಇಲ್ಲ. ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿದರೇ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮುನಿಯಪ್ಪ ಸೇರಿ ಹಲವರಿದ್ದಾರೆ. ಇವರಿಗೆ ಸಿಎಂ ಸ್ಥಾನ ನೀಡಬೇಕೆಂದು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ದಲಿತ ಸಿಎಂ ಕೂಗು ಅನ್ನು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಪುನರುಚ್ಚರಿಸಿದ್ದಾರೆ. ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗುತ್ತಿದೆ . ಕಾಂಗ್ರೆಸ್ ಹೈಕಮಾಂಡ್ ನಾಯಕರು ಬೇಗ ಸಮಸ್ಯೆ ಇತ್ಯರ್ಥ ಮಾಡಬೇಕು . ಈ ನಡುವೆ ಸಿಎಂ ಸ್ಥಾನವನ್ನು ಎಲ್ಲ ಸಮುದಾಯಗಳು ಕೇಳುತ್ತಿವೆ . ಎಲ್ಲಾ ಜಾತಿಗಳಿಗೆ ಸಿಎಂ ಸ್ಥಾನ ಕೊಡುವುದಕ್ಕೆ ಆಗಲ್ಲ . ಅವರಿಗೂ ಒಂದು ಅವಕಾಶ ನೀಡಬೇಕು ಅಂತ ಬೇಡಿಕೆ ಇದೆಆ ನಡುವೆ ಡಿಸಿಎಂ ಡಿಕೆಶಿ ರೇಸ್ ನಲ್ಲಿ ಇದ್ದಾರೆ, ಮಾತುಕತೆ ನಡೆದಿರುವುದು ನಮಗೆ ಗೊತ್ತಿಲ್ಲ . ಅವರಿಗೂ ಅವಕಾಶ ಕೊಟ್ಟರೇ ತಪ್ಪಲ್ಲ . ದಲಿತರಿಗೆ ಸ್ವಾತಂತ್ರ್ಯ ಬಂದ ನಂತರ ಅವಕಾಶ ಸಿಕ್ಕಿಲ್ಲ . ಈ ಭಾರಿ ಅವಕಾಶ ಕೊಡುವ ಮೂಲಕ ಸಾಬೀತು ಮಾಡಬೇಕು . ಇದಕ್ಕೆ ಹೈಕಮಾಂಡ್ ಯಾವ ತರಹ ತೀರ್ಪು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ಆದಿ ಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಸಹಜವಾಗಿ ನಮ್ಮ ಸಮುದಾಯದ ನಾಯಕ ಡಿಕೆಶಿ ಅಂತ ಹೇಳಿಲ್ಲ . ಪಕ್ಷವನ್ನ ಮುನ್ನಡೆಸಿ ಅಧಿಕಾರಕ್ಕೆ ತರಲು ಡಿಕೆಶಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಡಿಕೆಶಿ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದಾರೆ, ಹಾಗಾಗಿ ಬಹಳಷ್ಟು ಜನರ ಬೇಡಿಕೆ ಇದೆ . ಡಿಕೆಶಿ ಪರಿಶ್ರಮಕ್ಕೆ ಫಲ ಸಿಗಬೇಕು ಅಂತ ಆದಿಚುಂಚನಗಿರಿ ಶ್ರೀಗಳೂ ಕೇಳಿದ್ದಾರೆ. ಆದರೆ ಒಕ್ಕಲಿಗರಿಗೆ ನೀಡಬೇಕು ಅಂತ ಅವರು ಕೇಳಿಲ್ಲ .
ಕಾಗಿನೆಲೆ ಪೀಠದ ಶ್ರೀಗಳು ಸಹಜವಾಗಿ ಸಿದ್ದರಾಮಯ್ಯ ಪರ ನಿಲ್ಲುತ್ತಾರೆ. ಅಹಿಂದ ನಾಯಕರಾಗಿ ಎರಡು ಬಾರಿ ಸಿಎಂ ಆಗಿದ್ದಾರೆ. ಅವರನ್ನ ಕೆಳಗೆ ಇಳಿಸಬಾರದು ಅನ್ನೋದು ಆ ಸಮುದಾಯದ ಬೇಡಿಕೆ . ಸಮುದಾಯದ ಬೇಡಿಕೆಯನ್ನು ಕಾಗಿನೆಲೆ ಶ್ರೀಗಳು ತಿಳಿಸಿದ್ದಾರೆ. ಅದು ತಪ್ಪಲ್ಲ . ಸಹಜವಾಗಿ ಸಮುದಾಯದ ಪ್ರಾತಿನಿಧ್ಯ ಬಯಸಿದ್ದಾರೆ, ಇದನ್ನ ವಿವಾದ ಮಾಡುವುದು ಬೇಡ ಎಂದು ಬಸವಮೂರ್ತಿ ಮಾದಾರ ಚೆನ್ನಯ್ಯಸ್ವಾಮೀಜಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/11/28/madara-chennaiah-swamiji02-2025-11-28-12-59-52.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us