Advertisment

ಮೊದಲ ಭಾರಿಗೆ ಶಾಸಕರಾಗಿರುವ 5 ಮಂದಿಗೆ ಸಚಿವ ಸ್ಥಾನ ಕೊಡಿ: 31 ಕಾಂಗ್ರೆಸ್ ಶಾಸಕರಿಂದ ಹೈಕಮ್ಯಾಂಡ್‌ಗೆ ಪತ್ರ

ಕರ್ನಾಟಕದಲ್ಲಿ ಮೊದಲ ಭಾರಿಗೆ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾದ 38 ಮಂದಿ ಶಾಸಕರ ಪೈಕಿ 31 ಮಂದಿ ಕಾಂಗ್ರೆಸ್ ಹೈಕಮ್ಯಾಂಡ್ ಗೆ ಪತ್ರ ಬರೆದಿದ್ದಾರೆ. 5 ಮಂದಿ ಮೊದಲ ಭಾರಿ ಗೆದ್ದಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಹೈಕಮ್ಯಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ.

author-image
Chandramohan
congress mla foriegn tour (1)
Advertisment


ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಸಂಪುಟ ಪುನರ್ ರಚನೆಗೆ ಒತ್ತಾಯ ಕೇಳಿ ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಇದೇ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾಗಿರುವ 31 ಮಂದಿ ಶಾಸಕರು ಕಾಂಗ್ರೆಸ್ ಹೈಕಮ್ಯಾಂಡ್ ಗೆ ಪತ್ರ ಬರೆದಿದ್ದಾರೆ. ಸಂಪುಟ ಪುನರ್ ರಚನೆ ವೇಳೆ 31 ಮಂದಿ ಮೊದಲ ಭಾರಿಗೆ ಶಾಸಕರಾದವರ ಪೈಕಿ 5 ಮಂದಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಮೊದಲ ಭಾರಿಗೆ ಗೆದ್ದ ಶಾಸಕರೆಲ್ಲಾ ಈ ಪತ್ರಕ್ಕೆ ಸಹಿ ಹಾಕಿ ಕಾಂಗ್ರೆಸ್ ಹೈಕಮ್ಯಾಂಡ್ ಗೆ ರವಾನೆ ಮಾಡಿದ್ದಾರೆ. ಹೀಗೆ ಪತ್ರ ಬರೆದಿರುವುದನ್ನು ಸಹಿ ಹಾಕಿರುವ ಶಾಸಕರು ಕೂಡ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಹೈಕಮ್ಯಾಂಡ್ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಈ ಪತ್ರ ರವಾನಿಸಿದ್ದಾರೆ. 
ಪತ್ರದಲ್ಲಿ ಕರ್ನಾಟಕದಲ್ಲಿ 38 ಮಂದಿ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾದವರು ಸಿಎಂ ಗಳಾಗಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಮೊದಲ ಭಾರಿಗೆ ಆಯ್ಕೆಯಾಗಿರುವ 38 ಮಂದಿ ಶಾಸಕರ ಪೈಕಿ ಕನಿಷ್ಠ 5 ಮಂದಿಗೆ ಸಚಿವ ಸ್ಥಾನ ನೀಡಬೇಕೆಂದು ಹೈಕಮ್ಯಾಂಡ್ ನಾಯಕರಿಗೆ ಒತ್ತಾಯಿಸಿದ್ದಾರೆ. 
ಎರಡು ತಿಂಗಳ ಹಿಂದೆಯೇ ಈ ಪತ್ರ ಬರೆದಿದ್ದೇವೆ ಎಂದು ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ. ಇಕ್ಬಾಲ್ ಹುಸೇನ್ ಕೂಡ ಈ ಪತ್ರ ಬರೆದಿರುವುದು ನಿಜ ಎಂದು ಹೇಳಿದ್ದಾರೆ. 

Advertisment

congress mla foriegn tour




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Congress KPCC Minister post demand in congress
Advertisment
Advertisment
Advertisment