ಮತ್ತೆರಡು ಜವಾಬ್ದಾರಿ ಬೆನ್ನಲ್ಲೇ ‘ಕರ್ನಾಟಕಕ್ಕೆ ಬಂಪರ್ ಗಿಫ್ಟ್’ ಘೋಷಿಸಿದ ಕುಮಾರಸ್ವಾಮಿ..!

ಕೇಂದ್ರ ಬಜೆಟ್ ಅನ್ನು ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಮಂಡ್ಯಕ್ಕೆ ನಾನೇನು ಮಾಡಿದ್ದೇನೆ ಎಂದು ಕೇಳುವ ಕಾಂಗ್ರೆಸ್ ನಾಯಕರಿಗೆ ಬೃಹತ್ ಯೋಜನೆಯೊಂದನ್ನು ಘೋಷಿಸುವ ಮೂಲಕ ಉತ್ತರಿಸಿದ್ದಾರೆ.

author-image
Ganesh Kerekuli
hd kumaraswamy (4)
Advertisment
  • ಮಂಡ್ಯದಲ್ಲಿ ಆಟೋ ಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ನಿರ್ಧಾರ
  • ARAI ಇಂಡಸ್ಟ್ರಿ ತರುತ್ತೇವೆ, 100 ಎಕರೆ ಜಾಗ ಬೇಕು-ಹೆಚ್​ಡಿಕೆ
  • ಮುಖ್ಯಮಂತ್ರಿ ಸಿದ್ದುಗೆ ಪತ್ರ ಬರೆದ ಹೆಚ್​ಡಿ ಕುಮಾರಸ್ವಾಮಿ

ಮೈಸೂರು: ಕೇಂದ್ರ ಬಜೆಟ್ ಅನ್ನು ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಮಂಡ್ಯಕ್ಕೆ ನಾನೇನು ಮಾಡಿದ್ದೇನೆ ಎಂದು ಕೇಳುವ ಕಾಂಗ್ರೆಸ್ ನಾಯಕರಿಗೆ ಬೃಹತ್ ಯೋಜನೆಯೊಂದನ್ನು ಘೋಷಿಸುವ ಮೂಲಕ ಉತ್ತರಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಮಂಡ್ಯದ ಅಭಿವೃದ್ಧಿ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.

‘ಖಾಲಿ ಚಂಬಿನ’ ಕ್ರೆಡಿಟ್ ರಾಜ್ಯ ಸರ್ಕಾರದ್ದೇ!

‘ಕೇಂದ್ರದ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಲಘುವಾಗಿ ಮಾತನಾಡಿದ್ದಾರೆ. 16 ಬಜೆಟ್ ಮಂಡಿಸಿರುವ ಅವರಿಗೆ ಕೇಂದ್ರದ ದೂರದೃಷ್ಟಿಯ ಬಜೆಟ್ ಅರ್ಥವಾಗಿಲ್ಲ, ಅವರು ಸಂಕುಚಿತ ಭಾವನೆ ತೋರಿದ್ದಾರೆ‘ ಎಂದು ಹೆಚ್‌ಡಿಕೆ ಟೀಕಿಸಿದರು. ‘ಖಾಲಿ ಚಂಬು’ ಎಂಬ ಟೀಕೆಗೆ ಉತ್ತರಿಸಿದ ಅವರು, ‘ಖಾಲಿ ಚಂಬಿನ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ ಹೋಗಬೇಕು. ಏಕೆಂದರೆ, ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಜನರಿಗೆ ಖಾಲಿ ಚಂಬನ್ನೇ ಕೊಡುತ್ತಿದೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಮಂಡ್ಯಕ್ಕೆ ಬಂಪರ್ ಕೊಡುಗೆ: ಏನದು ಯೋಜನೆ?

‘ಕುಮಾರಸ್ವಾಮಿ ಮಂಡ್ಯಕ್ಕೆ ಹಾಗೂ ರಾಜ್ಯಕ್ಕೆ ಏನು ತಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದಿನನಿತ್ಯ ಸಣ್ಣತನದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ಪ್ರಶ್ನೆಗೆ ಈಗ ನನ್ನ ಕೆಲಸವೇ ಉತ್ತರವಾಗಿದೆ’ ಎಂದ ಹೆಚ್‌ಡಿಕೆ, ಮಂಡ್ಯದಲ್ಲಿ ಆಟೋಮೊಬೈಲ್ ಇಂಡಸ್ಟ್ರಿ ಸ್ಥಾಪನೆಯ ಘೋಷಣೆ ಮಾಡಿದರು.

‘ಕೇಂದ್ರ ಸರ್ಕಾರ ನನಗೆ ಮಹತ್ವದ ಜವಾಬ್ದಾರಿ ನೀಡಿದೆ. ಇದರ ಅನ್ವಯ ರಾಜ್ಯದಲ್ಲಿ ಆಟೋಮೊಬೈಲ್ ರಿಸರ್ಚ್ ಆಫ್ ಇಂಡಿಯಾ (ARAI) ಟೆಸ್ಟಿಂಗ್ ಸೆಂಟರ್ ತರಲು ಮುಂದಾಗಿದ್ದೇವೆ. ಈ ಘಟಕವನ್ನು ಮಂಡ್ಯದಲ್ಲೇ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಸಿಎಂಗೆ ಪತ್ರ: 100 ಎಕರೆ ಬೇಕು

‘ಮಂಡ್ಯದಲ್ಲೇ ಈ ಆಟೋಮೊಬೈಲ್ ಸೆಂಟರ್ ನಿರ್ಮಾಣವಾಗಬೇಕು. ಇದಕ್ಕಾಗಿ ಮಂಡ್ಯದಲ್ಲೇ 100 ಎಕರೆ ಜಾಗವನ್ನು ನೀಡುವಂತೆ ಕೋರಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ನಾನು ನಾಟಕವಾಡಲು ಪತ್ರ ಬರೆದಿಲ್ಲ. ಪ್ರಧಾನಿಗಳು ನನಗೆ ಮಂತ್ರಿ ಸ್ಥಾನ ಕೊಟ್ಟಿರುವುದು ನಾಟಕವಾಡಲಲ್ಲ. ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಮಂಡ್ಯ ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಈ ಬಜೆಟ್ ಮತ್ತು ನನ್ನ ಕೆಲಸದಲ್ಲಿ ಉತ್ತರವಿದೆ ಎಂದು ಅವರು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

ARAI testing center HD Kumaraswamy
Advertisment