ದ್ವೇಷ ಭಾಷಣ ತಡೆ ಮಸೂದೆೆ ರಾಷ್ಟ್ರಪತಿ ಅಂಕಿತಕ್ಕೆ ರವಾನಿಸಿದ ರಾಜ್ಯಪಾಲರು: ಮುಂದುವರಿದ ರಾಜ್ಯ ಸರ್ಕಾರ, ರಾಜ್ಯಪಾಲರ ನಡುವಿನ ಕಿತ್ತಾಟ

ರಾಜ್ಯದಲ್ಲಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಕಿತ್ತಾಟ ಮುಂದುವರಿದಿದೆ. ನರೇಗಾ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿ ಭಾಷಣ ಓದಲು ನಿರಾಕರಿಸಿದ್ದ ರಾಜ್ಯಪಾಲರು ಈಗ ದ್ವೇಷ ಭಾಷಣ ತಡೆ ಮಸೂದೆಗೆ ಸಹಿ ಹಾಕದೇ, ರಾಷ್ಟ್ರಪತಿ ಅಂಕಿತಕ್ಕೆ ಕಳಿಸಿದ್ದಾರೆ.

author-image
Chandramohan
ಮುಡಾ ಹಗರಣದಲ್ಲಿ ರಾಜ್ಯಪಾಲರಿಂದ ಸಿಎಂಗೆ ನೋಟಿಸ್; ಇಬ್ಬರಿಗೂ ಇರೋ ಕಾನೂನು ಅವಕಾಶಗಳೇನು?
Advertisment


ರಾಜಭವನ ಮತ್ತು ಸರ್ಕಾರದ ಮಧ್ಯೆ ಹೊಸ ಸಂಘರ್ಷದ ಸೂಚನೆಗಳು ಕಾಣಿಸ್ತಿದೆ.. ಕಾರ್ಯಾಂಗದ ಮುಖ್ಯಸ್ಥರಾದ ರಾಜ್ಯಪಾಲರ ನಡೆ ಸರ್ಕಾರವನ್ನ ಕೆಂಡವಾಗಿಸಿದೆ.. ಪದೇ ಪದೆ ಮಸೂದೆ ಹಿಂತಿರುಗಿಸ್ತಿದ್ದು, ಈಗ ದ್ವೇಷ ಭಾಷಣ ತಡೆ ವಿಧೇಯಕವು ಅದೇ ಹಾದಿ ಹಿಡಿದಿದೆ.. ರಾಜ್ಯಪಾಲರು ಈ ಬಾರಿ ಹೊಸ ದಾಳ ಉರುಳಿಸಿದ್ದು, ವಿಧೇಯಕ ಪರಿಶೀಲನೆಗಾಗಿ ರಾಷ್ಟ್ರಪತಿಗೇ ರವಾನಿಸಿದೆ.. 

ಇದು ಮುನಿಸು, ಮನಸ್ತಾಪವು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಶೀತಲ ಸಮರಕ್ಕೆ ನಾಂದಿ ಹಾಡಿದೆ.. ಅಪೂರ್ಣ ಭಾಷಣದ ಬಳಿಕ ರಾಜ್ಯ ಸರ್ಕಾರ ವರ್ಸಸ್‌ ರಾಜಭವನದ ಮಧ್ಯೆ ತಿಕ್ಕಾಟ ಮತ್ತೆ ಮುನ್ನೆಲೆಗೆ ಬಂದಿದೆ.. ಹಲವು ಬಿಲ್​​​ಗಳ ಫೈಲ್​ಗೆ ಧೂಳು ಮೆತ್ತಿಕೊಳ್ತಿದೆ.. ಸಹಿ ಹಾಕದೇ ಸಿದ್ದು ಸರ್ಕಾರದ ವಿರುದ್ಧ ರಾಜ್ಯಪಾಲರು ಶಾಹಿ ಪವರ್‌ ಪ್ರಯೋಗಿಸಿದ್ದು, ಸಂಘರ್ಷ ತೀವ್ರಗೊಳಿಸಿದೆ..

ದ್ವೇಷ ಭಾಷಣ ತಡೆ ಮಸೂದೆಗೆ ಬೀಳದ ರಾಜ್ಯಪಾಲರ ಅಂಕಿತ!
ರಾಷ್ಟ್ರಪತಿ ಅಂಗಳಕ್ಕೆ ವಿಧೇಯಕ.. ಗೆಹ್ಲೋಟ್​​​​ ನಡೆಗೆ ‘ಕೈ’ ಕೆಂಡ!
ರಾಜ್ಯಪಾಲರಿಂದ ಪದೇ ಪದೆ ವಿಧೇಯಕಗಳ ವಾಪಸ್​ ಆಗ್ತಿವೆ.. ಹತ್ತಾರು ಮಸೂದೆಗಳಿಗೆ ಸ್ಪಷ್ಟನೆ ಕೇಳ್ತಾ ರಾಜ್ಯಪಾಲರು ಮಸೂದೆಗಳನ್ನ ರಿಟರ್ನ್​​​ ಮಾಡ್ತಿದ್ದಾರೆ.. ಇದೀಗ ದ್ವೇಷ ಭಾಷಣ ಮಸೂದೆಗೂ ಅದೇ ಗತಿ ಆಗಿದೆ.. ರಾಜ್ಯಪಾಲರು ಒಪ್ಪಿಗೆ ನೀಡದೇ ಕಾನೂನು ದುರುಪಯೋಗ ಸಾಧ್ಯತೆಯ ಆತಂಕ ಹೇಳಿದ್ದಾರೆ.. ದ್ವೇಷ ಭಾಷಣ ವ್ಯಾಖ್ಯಾನವೇ ಅಸ್ಪಷ್ಟ ಅಂತ ಅಭಿಪ್ರಾಯ ಪಟ್ಟ ರಾಜ್ಯಪಾಲರು, ಮಸೂದೆ ಪರಿಶೀಲನೆಗೆ ರಾಷ್ಟ್ರಪತಿಗೆ ರವಾನಿಸಿ ಕಾಲಹರಣ ಕಾಯಕವೇ ಉತ್ತಮ ಅನ್ನೋ ಮಾರ್ಗ ಆಯ್ದಿದ್ದಾರೆ.. 
ರಾಜ್ಯಪಾಲರ ವಿಟೋ ಆಟಕ್ಕೆ ಕೆರಳಿದ ಕಾಂಗ್ರೆಸ್​​​ ಪಡೆ, ಕಿಡಿಕಿಡಿ ಆಗಿದೆ.. ಗೃಹ ಸಚಿವ ಡಾ.ಜಿ. ಪರಮೇಶ್ವರ್​, 28 ಅಂಶಗಳನ್ನ ರಾಜ್ಯಪಾಲರು ಪ್ರಶ್ನೆ ಮಾಡಿದ್ದಾರೆ.. ನಾವು ಪ್ರಜ್ಞಾಪೂರ್ವಕವಾಗಿ ಮಸೂದೆ ತಂದಿದ್ದು.. ಫ್ರೀಡಂ ಆಫ್ ಸ್ಪೀಚ್ ಎಲ್ಲರಿಗೂ ಇದೆ. ಹಾಗಂತ ಏನು ಬೇಕಾದರೂ ಮಾತನಾಡುವುದು ತಪ್ಪು ಅಂತ ಮಸೂದೆಯನ್ನ ಸಮರ್ಥಿಸಿದ್ದಾರೆ.. ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.. ಇನ್ನು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ, ಜಾತಿ ನಿಂದನೆ ಮಾಡೋದು.. ದ್ವೇಷ ಭಾಷಣ ಮಾಡೋದು ಸರಿನಾ ಅಂತ ಪ್ರಶ್ನಿಸಿದ್ದಾರೆ.
ಆದ್ರೆ, ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ, ಯಾವುದೋ ವ್ಯಕ್ತಿ, ಸಂಸ್ಥೆಯನ್ನ ಕಾನೂನಿನ ಅಡಿಯಲ್ಲಿ ಸಿಲುಕಿಸೋದು ಸರಿಯಲ್ಲ ಅಂತ ಅಭಿಪ್ರಾಯ ಪಟ್ಟಿದ್ದಾರೆ.. 
ರಾಜ್ಯದಲ್ಲಿ ಶುರುವಾಗಿರೋ ರಾಜಭವನ ವರ್ಸಸ್‌ ರಾಜ್ಯ ಸರ್ಕಾರ ಜಟಾಪಟಿ ಇದೇ ಮೊದಲು ಅಲ್ಲ, ಕೊನೆನೂ ಅಲ್ಲ.. ಒಟ್ಟಾರೆ, ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕದಲ್ಲಿ ರಾಜ್ಯಪಾಲರು ಮಾದರಿ ಆಡಳಿತಕ್ಕೆ ನಿದರ್ಶನರಾಗಿದ್ರು.. ಒಂದೇ ಒಂದೂ ವಿವಾದ ಇರಲಿಲ್ಲ.. ಆದ್ರೆ ಮೆಜಾರಿಟಿ ಸರ್ಕಾರವೊಂದು ಸದನದಲ್ಲಿ ಪಾಸ್​​ ಮಾಡಿದ್ದ ವಿಧೇಯಕಗಳನ್ನ ಸಹಿ ಹಾಕದೇ ವಿಳಂಬಕ್ಕೆ ಮಾಡ್ತಿದೆ.. ಇದು ಸಂವಿಧಾನಿಕ ಬಿಕ್ಕಟ್ಟಿಗೆ ಕಾರಣ ಆಗುವ ಲಕ್ಷಣ ಕಾಣಿಸ್ತಿದೆ.. 


ಶಿವಪ್ರಸಾದ್​, ಪೊಲಿಟಿಕಲ್​ ಬ್ಯೂರೋ, ನ್ಯೂಸ್​ಫಸ್ಟ್​ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

GOVERNOR SPEECH CONTRAVERSY governor of karnataka ANTI HATE SPEECH BILL TABLED IN ASSEMBLY
Advertisment