ತುಮಕೂರಿನ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಲ್ಲ ಎಂದ ಡಿಸಿಎಂ ಡಿಕೆಶಿ: ಮತ್ತೆ ಕಾಮಗಾರಿ ಆರಂಭ ಮಾಡುತ್ತೇವೆ ಎಂದು ಘೋಷಣೆ

ತುಮಕೂರು ಜಿಲ್ಲೆಯಿಂದ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಮತ್ತೆ ಕಾಮಗಾರಿ ಆರಂಭಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಘೋಷಿಸಿದ್ದಾರೆ. ಇಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.

author-image
Chandramohan
HEMAVATHI EXPRESS LINK02

ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮುಂದುವರಿಕೆ ಎಂದ ಡಿಕೆಶಿ

Advertisment
  • ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮುಂದುವರಿಕೆ ಎಂದ ಡಿಕೆಶಿ
  • ಮತ್ತೆ ಕಾಮಗಾರಿ ಆರಂಭಿಸುತ್ತೇವೆ ಎಂದ ಡಿಸಿಎಂ ಡಿಕೆಶಿ
  • ಪೈಪ್ ಗಾಗಿ ಈಗಾಗಲೇ 400 ಕೋಟಿ ರೂ ಹಣ ಬಿಡುಗಡೆಯಾಗಿದೆ-ಡಿಕೆಶಿ
  • ಎಲ್ಲರ ಹಿತಾಸಕ್ತಿ ಕಾಪಾಡುತ್ತೇವೆ ಎಂದ ಡಿಸಿಎಂ ಡಿಕೆಶಿ

ತುಮಕೂರು ಮತ್ತು ರಾಮನಗರ ಜಿಲ್ಲೆಯ ಮಧ್ಯೆ ಹೇಮಾವತಿ ಡ್ಯಾಂ ನೀರಿಗಾಗಿ ನಡೆಯುತ್ತಿರುವ ಫೈಟ್ ಇನ್ನೂ ನಿಂತಿಲ್ಲ. ತುಮಕೂರು ಜಿಲ್ಲೆಯ ಸಂಕಾಪುರದಿಂದ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ನಲ್ಲಿ ಪೈಪ್ ಲೈನ್ ಮೂಲಕ ಕುಣಿಗಲ್ ಮತ್ತು ಮಾಗಡಿ ತಾಲ್ಲೂಕುಗಳಿಗೆ ಹೇಮಾವತಿ ನೀರು ಹರಿಸುವ ಕಾಮಗಾರಿಗೆ ತುಮಕೂರು ಜಿಲ್ಲೆಯ ರೈತರು ಪ್ರತಿಭಟನೆಯ ಮೂಲಕ ಬ್ರೇಕ್ ಹಾಕಿದ್ದರು. 
ಆದರೇ, ಇವತ್ತು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್ ಗುಬ್ಬಿ ತಾಲ್ಲೂಕಿನ ಸಂಕಾಪುರಕ್ಕೆ  ಭೇಟಿ ನೀಡಿದ್ದಾರೆ. ಕುಣಿಗಲ್ ತಾಲ್ಲೂಕು ಮತ್ತು ಮಾಗಡಿ ತಾಲ್ಲೂಕಿಗೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಪೈಪ್ ಲೈನ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು  ಹೋಗುವ ಕಾಮಗಾರಿ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಎಲ್ಲ ಪಕ್ಷದ ಶಾಸಕರ ಜೊತೆ ಮಾತನಾಡಿದ್ದೇನೆ. ಯಾರಿಗೂ ಮೋಸ ಆಗದಂತೆ ನೋಡಿಕೊಳ್ಳುತ್ತೇವೆ.   ಇದು ಅಭಿವೃದ್ಧಿ ಕೆಲಸ. ಇದರಲ್ಲಿ ರಾಜಕಾರಣ ಬೇಡ. ಒಳ್ಳೆಯ  ಮುಹೂರ್ತದಲ್ಲಿ ಕಾಮಗಾರಿ ಆರಂಭ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.  ಹೋರಾಟಗಾರರ ಮನವೊಲಿಸಿ ಕಾಮಗಾರಿ ಆರಂಭಿಸುತ್ತೇನೆ.  ಎಲ್ಲ ಗೊಂದಲ ಬಗೆಹರಿದು ಸ್ಥಗಿತಗೊಂಡ ಕಾಮಗಾರಿ ‌ ಮತ್ತೆ ಆರಂಭವಾಗೇ ಆಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ನಾನು ಎರಡು ತಿಂಗಳ ಹಿಂದೆನೇ ಶಾಸಕರು ಹಾಗೂ ಕೇಂದ್ರ ಮಂತ್ರಿಗಳ ಸಭೆ ಕರೆದಿದ್ದೆ. ಕೇಂದ್ರ ಸಚಿವ ಸೋಮಣ್ಣ ಸಲಹೆ ಮೇರೆಗೆ ಇಲ್ಲಿಗೆ ಬಂದಿದ್ದೇನೆ . ನಾನು ಒಂದು ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ,  ನೀರಾವರಿ ಮಂತ್ರಿ ಆಗಿಲ್ಲ, ರಾಜ್ಯಕ್ಕೆ ಉಪಮುಖ್ಯಮಂತ್ರಿ ಆಗಿದ್ದೇನೆ.  ಎಲ್ಲಾ ಶಾಸಕರು, ಕೇಂದ್ರದ ಮಂತ್ರಿಗಳ ಸಲಹೆ ಮೇರಿಗೆ ಸ್ಥಳ ವೀಕ್ಷಣೆಗೆ ಬಂದಿದ್ದೇನೆ. ನಾನು ಒಂದು ಕ್ಷೇತ್ರಕ್ಕೆ ಸೀಮಿತವಾದವನು ಅಲ್ಲ.ಕರ್ನಾಟಕದ ರಾಜ್ಯದ ಉದ್ದಗಲಕ್ಕೂ‌ ನೀರಾವರಿ ಮಂತ್ರಿಯಾಗಿದ್ದಾನೆ. ತುಮಕೂರಿನ ಎಲ್ಲಾ ಕ್ಷೇತದ ಅಭಿವೃದ್ದಿ  ನಮಗೆ  ಸೇರಿದೆ.  ತುಮಕೂರು ನಮಗೆ ಹತ್ತಿರವಾದ ಜಿಲ್ಲೆ. ತುಮಕೂರು ನಾಗರೀಕರು ಬಹಳ ಸೌಮ್ಯದಿಂದ ನಮ್ಮಗೆ ಬೆಂಬಲ‌ ನೀಡಿದ್ದಾರೆ‌.  ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ, ನಾನು ನೀರಾವರಿ ಮಂತ್ರಿಯಾಗಿದ್ದಾಗ ಈ ಯೋಜನೆ ಮಾಡಿದ್ದೇವು.  ಯಡಿಯೂರಪ್ಪ ಸಿಎಂ ಆಗಿದ್ದಾಗ ಹಾಗೂ ಇಲ್ಲಿನ ಜಿಲ್ಲಾ ಮಂತ್ರಿ ಸೇರಿಕೊಂಡು ಯೋಜನೆ ನಿಲ್ಲಿಸಿದ್ರು‌. ಇದರಿಂದ ಯೋಜನೆಯ ವೆಚ್ಚ ಹೆಚ್ಚಾಯ್ತು.  ವೈ.ಕೆ ರಾಮಯ್ಯ ಕಾಲದಿಂದಲ್ಲೂ ಈ ಹೋರಾಟವಿದೆ.  ಕುಣಿಗಲ್ ಗೆ ನ್ಯಾಯ ದೊರಕಿಸಿಕೊಡಬೇಕು ಅಂತ ತೀರ್ಮಾನ ಆಗಿದೆ. ಈಗಾಗಲೇ ಪೈಪ್ ಗೆ ಹಣವನ್ನು ಬಿಡುಗಡೆ ಮಾಡಲಾಗಿದೆ, ಸುಮಾರು 400 ಕೋಟಿ ಪೈಪ್ ಹಣ ಬಿಡುಗಡೆ ಮಾಡಲಾಗಿದೆ.  ನಾಲ್ಕೈದು ತಿಂಗಳಲ್ಲಿ ಮುಗಿಯುವ ಕೆಲಸ ಇದು.
ವರ್ಷಕ್ಕೆ  177 ಟಿಎಂಸಿ ಅಡಿ  ಕಾವೇರಿ ನೀರು ಅನ್ನು ಕರ್ನಾಟಕವು ತಮಿಳುನಾಡಿಗೆ ಬಿಡಬೇಕು. ಈಗಾಗಲೇ 220 ಟಿಎಂಸಿ ಕಾವೇರಿ  ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿದು ಹೋಗಿದೆ. ನಾಲ್ಕೈದು ತಿಂಗಳು ಮಳೆ‌ ಬರುವ ಸಾಧ್ಯತೆಯಿದೆ. ಅಂದಾಜು 200 ಟಿಎಂಸಿ ನೀರು ಸಮುದ್ರಕ್ಕೆ ಹೋಗಲಿದೆ‌. ಯಾವಾಗ ನೀರು ಅನುಕೂಲವಾಗಲಿದೆ ಆಗ ಮಾತ್ರ ಈ ಯೋಜನೆ ಬಳಕೆ ಮಾಡಲು ನಿರ್ಧಾರ ಮಾಡಿದ್ದೇವೆ. ಚಾನೆಲ್ ನಿಂದ ಕೆಳಗೆ ನಾಲೆ ಮಾಡಿ ಪೈಪ್ ಹಾಕಿ ನೀರು ಹೋಗಲು ಬಿಡಲ್ಲ. ನಾಲೆಗೆ ಸಮಾನವಾಗಿಯೇ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಮಾಡ್ತೀವಿ. ಸ್ಕಾಡಾ ಹಾಕಿ ವಾಚ್ ಮಾಡಲಿದ್ದೇವೆ. ನಾನು ಸ್ಥಳಕ್ಕೆ ಬಂದು ಡಯಾ ಮೀಟರ್ ನೋಡಿದೆ.  ಯಾವುದೇ ಕಾರಣಕ್ಕೆ ನೀರು ಕೆಳಗಡೆ ಹೋಗಲು ಬಿಡಲ್ಲ, ಸ್ಕಾಡ ಹಾಕಿ ಅದನ್ನ ಬೆಂಗಳೂರಿನಲ್ಲಿ ಕುಳಿತು ನೋಡುವಂತೆ ಮಾಡ್ತೀವಿ.  ಪ್ರತಿನಿತ್ಯ ಎಷ್ಟು ನೀರು ಹೋಗಲಿದೆ ಅಂತ ಮಾಹಿತಿ ಎಲ್ಲಾ ನಾಗರೀಕರಿಗೂ ಲಭ್ಯವಾಗಲಿದೆ.

HEMAVATHI EXPRESS LINK CANAL

ಗುಬ್ಬಿ ತಾಲ್ಲೂಕಿನ ಸಂಕಾಪುರ ಗ್ರಾಮದಲ್ಲಿ ಸ್ಥಗಿತವಾಗಿರುವ ಕಾಮಗಾರಿ 

 ಮಹಾರಾಷ್ಟ್ರದವರು ಕೃಷ್ಣ ಡ್ಯಾಂ ಎತ್ತರ ಮಾಡಲು ಬಿಡಲ್ಲ ಅಂತಾರೆ, ಆ ರೀತಿ ಕೆಲಸ ಇಲ್ಲಿ ಆಗುವುದು ಬೇಡ. ಎಲ್ಲರ ರಕ್ಷಣೆಗೆ ನಾವು ಇದ್ದೇವೆ.  ಇದರಲ್ಲಿ ರಾಜಕಾರಣ ಬೇಡ. ನಾವು ತಮಿಳುನಾಡಿನವರ ತರಹ ಕಿತ್ತಾಡೋದು ಬೇಡ, ಇಲ್ಲಿ ರಾಜಕಾರಣ ಬೇಡ,  ಅಭಿವೃದ್ಧಿ ಬೇಕು.  ಮೊದಲ ಆದ್ಯತೆ ಕುಡಿಯುವ ನೀರು. ಎರಡು ದಶಕಗಳಿಂದ ಕುಣಿಗಲ್‌ಗೆ ನೀರು ಕೊಡಬೇಕಿತ್ತು,  ಅದು ಹಂಚಿಕೆ ಆಗಿಲ್ಲ. ಅನ್ಯಾಯ ಆಗೋದನ್ನು ತಡೆಯುತ್ತೇವೆ. ಹೆಚ್ಚುವರಿ ನೀರು ಬಂದಾಗ, ಕುಡಿಯುವ ನೀರು ಬಿಟ್ಟು,  ಸಮುದ್ರಕೆ ಹೋಗುವ ನೀರು ಬಳಕೆ ಮಾಡುತ್ತೇವೆ. ಯಾವ ರೈತರು ಗಾಬರಿಗೊಳ್ಳುವುದು ಬೇಡ. ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಎಲ್ಲಾ ನೀರು ಸಮುದ್ರಕ್ಕೆ ಹೋಗುತ್ತಿದೆ. ಕುಣಿಗಲ್ ವಿಚಾರ ಮುಖ್ಯವಲ್ಲ, ಎಲ್ಲರ ಹಿತ ಕಾಪಾಡುವುದು ಮುಖ್ಯ . ಸ್ವಾಮೀಜಿಗಳು ಯಾರೂ ಇದಕ್ಕೆ ಭಾಗಿಯಾಗುವುದು ಬೇಡ . ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡೋಣ. ಪ್ರಾಜೆಕ್ಟ್ ಪ್ಲಾನ್ ಬದಲಾವಣೆ ಮಾಡಲು ಆಗಲ್ಲ. ಯಾರಿಗೂ ಅಡಚಣೆ ಆಗದಂತೆ ವ್ಯವಸ್ಥೆ ಮಾಡ್ತೀವಿ. ಎಲ್ಲರಿಗೂ ಸಮಪಾಲು ನೀಡಲಾಗುವುದು. ಹೋರಾಟಗಾರಿಗೆ ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ, ನಾವು ಎಲ್ಲ  ಅಣ್ಣ ತಮ್ಮಂದಿರು ಒಟ್ಟಾಗಿ‌ ಕೆಲಸ ಮಾಡೋಣ. ಬಿಜೆಪಿ- ಜೆಡಿಎಸ್ ಶಾಸಕರು ಪ್ರಾಣ ಬಿಡ್ತೀವಿ ನೀರು ಬಿಡಲ್ಲ ಅಂತಾರೆ.  ಅವರ ಪ್ರಾಣ ಉಳಿಸಲು ನಾವು ಇರೋದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HEMAVATHI EXPRESS LINK CANAL CONTRAVERSY
Advertisment