/newsfirstlive-kannada/media/post_attachments/wp-content/uploads/2023/07/Nandini-Ghee-Tirupati-1.jpg)
ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಭಾರಿ ಡಿಮ್ಯಾಂಡ್
KMF ನಂದಿನಿ ತುಪ್ಪಕ್ಕೆ ಮತ್ತೆ ಫುಲ್ ಡಿಮ್ಯಾಂಡ್ ಬಂದಿದೆ. ನಂದಿನಿ ಬಿಟ್ರೆ ಬೇರೆ ಯಾವ ತುಪ್ಪವೂ ಬೇಡ ಎಂದು ಆಂಧ್ರದ ಟಿಟಿಡಿ ಹೇಳಿದೆ. ಟಿಟಿಡಿಯಿಂದ ಮತ್ತೆ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದೆ. ಆಂಧ್ರದ ತಿರುಮಲದಲ್ಲಿ ಭಕ್ತರಿಗೆ ತಯಾರಿಸುವ ಲಡ್ಡುವಿಗೆ ನಂದಿನಿ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆ.
ನಂದಿನಿ ತುಪ್ಪಕ್ಕೆ ಪ್ರಪಂಚದ ಶ್ರೀಮಂತ ದೇವಸ್ಥಾನ ಮನಸೋತಿದೆ. ತಿರುಪತಿ ಲಾಡು ಪ್ರಸಾದಕ್ಕೆ ನಂದಿನಿ ತುಪ್ಪ ಬಳಕೆ ಮಾಡಲಾಗುತ್ತಿದೆ. ಮತ್ತೆ ನಂದಿನಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ. 1 ಸಾವಿರ ಮೆಟ್ರಿಕ್ ಟನ್ ತುಪ್ಪ ಪೂರೈಸುವಂತೆ ಮನವಿ ಮಾಡಿದೆ. ಕೆಎಂಎಫ್ ಆಡಳಿತ ಮಂಡಳಿಗೆ ಟಿಟಿಡಿ
ಬೇಡಿಕೆ ಸಲ್ಲಿಸಿದೆ. ಲಡ್ಡು ವಿವಾದದ ಬಳಿಕ ಕೆಎಂಎಫ್ ನಿಂದ ಹೆಚ್ಚು ತುಪ್ಪ ಖರೀದಿ ಮಾಡಲಾಗುತ್ತಿದೆ. KMF ನಿಂದ ದಾಖಲೆ ಮಟ್ಟದಲ್ಲಿ ತುಪ್ಪವನ್ನು ಟಿಟಿಡಿ ಖರೀದಿ ಮಾಡುತ್ತಿದೆ.
/filters:format(webp)/newsfirstlive-kannada/media/post_attachments/wp-content/uploads/2023/08/NANDINI.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us