/newsfirstlive-kannada/media/post_attachments/wp-content/uploads/2024/10/GT_DEVEGOWDA.jpg)
ಜೆಡಿಎಸ್ ಪಕ್ಷ ಬಿಡಲ್ಲ ಎಂದ ಜಿ.ಟಿ.ದೇವೇಗೌಡ!
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸಾ.ರಾ.ಮಹೇಶ್ ರನ್ನು ಕಣಕ್ಕಿಳಿಸಬೇಕೆಂಬ ಚರ್ಚೆ ಜೆಡಿಎಸ್ ಪಕ್ಷದಲ್ಲಿ ಶುರುವಾಗಿದೆ. ಈ ಬಗ್ಗೆ ನಿನ್ನೆ ಬೆಂಗಳೂರಿನ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಚರ್ಚೆ ಕೂಡ ನಡೆದಿದೆ. ಜೆಡಿಎಸ್ ವರಿಷ್ಠರು ಬಯಸಿದರೇ, ಚಾಮುಂಡೇಶ್ವರಿ ಅಥವಾ ಕೆ.ಆರ್. ನಗರ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ದ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಕೂಡ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಇಂದು ಮೈಸೂರಿನಲ್ಲಿ ಶಾಸಕ ಜಿ.ಟಿ.ದೇವೇಗೌಡ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೈಸೂರಿನ ಜನತೆಗೆ ಹಾಗೂ ಚಾಮುಂಡೇಶ್ವರಿ ಜನತೆಗೆ ನಾನು ಏನು ಅಂತ ಗೊತ್ತಿದೆ. ಯಾವ ನಾಯಕರಿಗೂ ನಾನು ದ್ರೋಹ ಮಾಡುವ ಬುದ್ಧಿ ಇಲ್ಲ . ನಾನು ಯಾವತ್ತು ನಾಯಕತ್ವವನ್ನು ನಂಬಿ ಬೆಂಬಲವನ್ನು ಕೊಡುವವನು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ನಂತರ 3 ಬಾರಿ ಎಂಎಲ್ ಎ ಆಗಿ ಕುಮಾರಪರ್ವ, ಮರಳಿ ಮನೆಗೆ ಕಾರ್ಯಕ್ರಮ ಮಾಡಿದ್ದೇನೆ. ಅಲ್ಲಿಂದ ಇಲ್ಲಿಯವರೆಗೂ ಮೊದಲ ಬಾರಿಗೆ ಕುಮಾರಸ್ವಾಮಿ ನಾಯಕತ್ವಕ್ಕೆ ಮೆರವಣಿಗೆ ಮಾಡಿರುವುದು , ನನ್ನ ಕ್ಷೇತ್ರದ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿಸಿದ್ದೇನೆ. ಇವತ್ತಿಗೂ ನಾನು ದೇವೇಗೌಡ, ಕುಮಾರಸ್ವಾಮಿ ಜೊತೆಗೆ ಒಟ್ಟಾಗಿ ಇದ್ದೇನೆ. ಚಾಮುಂಡೇಶ್ವರಿ ಕ್ಷೇತ್ರ ನನ್ನನ್ನು ಅವರ ಮನೆಯ ಮಗನ ರೀತಿ, ಸಹೋದರನ ರೀತಿ ನೋಡಿಕೊಡಿದೆ .
ನಾನು ಜೆಡಿಎಸ್ ನಿಂದ ಗೆದ್ದಿದ್ದೇನೆ. ಈಗಲೂ ಜೆಡಿಎಸ್ ನಲ್ಲಿ ಇದ್ದೇನೆ ಮುಂದೆಯು ಜೆಡಿಎಸ್ ನಿಂದ ಚುನಾವಣೆಗೆ ನಿಲ್ಲುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ
/filters:format(webp)/newsfirstlive-kannada/media/post_attachments/wp-content/uploads/2024/10/GTD-ON-MUDA-CASE-2.jpg)
ನಾನು ಯಾವತ್ತು ಪಕ್ಷದ ವರಿಷ್ಠರ ವಿರುದ್ದ ಮಾತನಾಡಿಲ್ಲ . ನನ್ನ ಕ್ಷೇತ್ರದ ದೊಡ್ಡದು. ಅದರ ಕೆಲಸ ಮಾಡುವುದರಲ್ಲಿ ಬ್ಯುಸಿ ಯಾಗಿದ್ದೇನೆ. ಅಸೆಂಬ್ಲಿ ಚುನಾವಣೆ ಇನ್ನು ಎರಡು ವರ್ಷ ಇದೆ. ಚುನಾವಣೆ ಸಂಧರ್ಭದಲ್ಲಿ ಅದನ್ನು ಮಾತನಾಡೋಣ . ನಾನು ಜೆಡಿಎಸ್ ನಲ್ಲಿ ಇದ್ದೇನೆ. ಒಂದು ಕಾಲನ್ನು ಹೊರಗಡೆ ಹಾಕಿಲ್ಲ. ಹಾಕುವುದು ಇಲ್ಲ.
ನಾನು ಏಕೆ ಪಕ್ಷದ ಮೇಲೆ ನೋವು ಮಾಡಿಕೊಡಿದ್ದೇನೆ ಎಂದು ನಮ್ಮ ಪಕ್ಷದ ವರಿಷ್ಠರಿಗೆ ,ಕೇಂದ್ರ ಮಂತ್ರಿಗಳಿಗೆ ಗೊತ್ತು. ನಾನು ಪಕ್ಷದ ಕೋರ್ ಕಮಿಟಿ ಅಧ್ಯಕ್ಷನಾಗಿ ರಾಜ್ಯ ಪ್ರವಾಸ ಮಾಡಿದ್ದೇನೆ. ಪಕ್ಷದ ಕಾರ್ಯಕರ್ತರನ್ನು ಗಟ್ಟಿಗೊಳಿಸುವ ಕೆಲಸ ಮಾಡಿದ್ದೇನೆ. ಚುನಾವಣೆ ಸಮೀಪ ಬಂದಾಗ ಎಲ್ಲವೂ ಸರಿಯಾಗುತ್ತೆ. ನಮಗೂ ಒಳ್ಳೆಯ ಕಾಲ ಬರುತ್ತೆ ಎಂದು ಮೈಸೂರಿನಲ್ಲಿ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us