ಸತತ 30 ದಿನ ಜೈಲಿನಲ್ಲಿದ್ದರೇ, ಪ್ರಧಾನಿ, ಸಿಎಂ, ಕೇಂದ್ರ ಸಚಿವರು, ರಾಜ್ಯ ಸಚಿವರು ಹುದ್ದೆಯಿಂದ ವಜಾ!

ಪ್ರಧಾನಿ, ರಾಜ್ಯದ ಸಿಎಂ, ಕೇಂದ್ರ ಸಚಿವರು, ರಾಜ್ಯಗಳ ಸಚಿವರು ಭ್ರಷ್ಟಾಚಾರ ಕೇಸ್ ನಲ್ಲಿ ಸತತ 30 ದಿನ ಜೈಲಿನಲ್ಲಿದ್ದರೇ, 31 ನೇ ದಿನ ತಮ್ಮ ಹುದ್ದೆಯನ್ನು ಕಳೆದುಕೊಳ್ಳುವರು. ಈ ಅಂಶ ಒಳಗೊಂಡ ಹೊಸ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಕೇಂದ್ರ ಸರ್ಕಾರ ಮಂಡಿಸುತ್ತಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.

author-image
Chandramohan
PM CM REMOVAL BILL

ಲೋಕಸಭೆಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವರು

Advertisment
  • ಪ್ರಧಾನಿ, ಸಿಎಂ, ಸಚಿವರು 30 ದಿನ ಜೈಲಿನಲ್ಲಿದ್ದರೇ, 31ನೇ ದಿನ ಹುದ್ದೆಯಿಂದ ಕೊಕ್
  • 5 ವರ್ಷಕ್ಕಿಂತ ಹೆಚ್ಚಿನ ಜೈಲುಶಿಕ್ಷೆ ವಿಧಿಸುವ ಕೇಸ್ ನಲ್ಲಿ ಜೈಲು ಪಾಲಾದರೇ, ಈ ಕ್ರಮ
  • ಬಿಜೆಪಿಯೇತರ ಸರ್ಕಾರಗಳ ಅಸ್ಥಿರಗೊಳಿಸುವ ಕಾನೂನು ಎಂದ ವಿಪಕ್ಷಗಳು

ಬುಧವಾರ ಲೋಕಸಭೆಯಲ್ಲಿ ಬಿರುಸಿನ ಅಧಿವೇಶನ ನಡೆಯುವ ನಿರೀಕ್ಷೆಯಿದೆ, ಏಕೆಂದರೆ ಸರ್ಕಾರವು ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿ ಅಥವಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸಚಿವರು ಗಂಭೀರ ಕ್ರಿಮಿನಲ್ ಆರೋಪಗಳಿಗೆ ಸಂಬಂಧಿಸಿದಂತೆ ಸತತ 30 ದಿನಗಳ ಕಾಲ ಜೈಲಿನಲ್ಲಿದ್ದರೆ ಅವರನ್ನು ಹುದ್ದೆಗಳಿಂದ ಪದಚ್ಯುತಗೊಳಿಸುವ ಮೂರು ವಿವಾದಾತ್ಮಕ ಮಸೂದೆಗಳನ್ನು ಮಂಡಿಸಲಿದೆ.
ಪ್ರಸ್ತಾವಿತ ಕಾನೂನುಗಳು - ಕೇಂದ್ರ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025, ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ 2025, ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2025 , ಇವುಗಳನ್ನು ಕೇಂದ್ರ ಗೃಹ ಸಚಿವರು ಮಂಡಿಸುವರು. ಗೃಹ ಸಚಿವ ಅಮಿತ್ ಶಾ ಕೂಡ ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯನ್ನು ಮಂಡಿಸಲಿದ್ದಾರೆ.
ಆದರೇ,  ವಿರೋಧ ಪಕ್ಷಗಳು ಪ್ರಸ್ತಾವಿತ ಮಸೂದೆಗೆ ಬಲವಾದ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರವು ತನ್ನ ಮುಖ್ಯಮಂತ್ರಿಗಳನ್ನು 'ಪಕ್ಷಪಾತಿ' ಕೇಂದ್ರ ಸಂಸ್ಥೆಗಳಿಂದ ಬಂಧಿಸುವ ಮೂಲಕ ಮತ್ತು ಅವರ 'ನಿರಂಕುಶ' ಬಂಧನದ ನಂತರ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಪ್ಲ್ಯಾನ್ ಮಾಡಿದೆ. ಈ  ಮೂಲಕ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ಕಾನೂನುಗಳನ್ನು ತರಲು ಉದ್ದೇಶಿಸಿದೆ ಎಂದು ವಿರೋಧ ಪಕ್ಷಗಳು ಹೇಳಿವೆ. 
ಮಾಧ್ಯಮದ ಜೊತೆ ಮಾತನಾಡಿದ ವಿರೋಧ ಪಕ್ಷದ ಸಂಸದರೊಬ್ಬರು, ಮಸೂದೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಸೂದೆ ಮಂಡಿಸಿದಾಗ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದರು. "ನಾವು ಅದನ್ನು ಪರಿಚಯಿಸಲು ಬಿಡುವುದಿಲ್ಲ. ನಾವು ಮಸೂದೆಯನ್ನು ಹರಿದು ಹಾಕುತ್ತೇವೆ" ಎಂದು ಅಧಿವೇಶನಕ್ಕೂ ಮುನ್ನ ಸಂಸದರು ಎಚ್ಚರಿಸಿದರು.
ವಿಷಯಾಧಾರಿತ ಮಸೂದೆಗಳು ಯಾವುವು?
ಮೂರು ದೊಡ್ಡ ಭ್ರಷ್ಟಾಚಾರ ವಿರೋಧಿ ಕರಡು ಕಾನೂನುಗಳ ಪ್ರಕಾರ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಲಾದ ಆರೋಪದ ಮೇಲೆ ಬಂಧಿಸಲ್ಪಟ್ಟು ಸತತ 30 ದಿನಗಳ ಕಾಲ ಬಂಧನದಲ್ಲಿಡಲ್ಪಟ್ಟ ಯಾವುದೇ ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರನ್ನು 31 ನೇ ದಿನದಂದು ಆಟೋ ಮ್ಯಾಟಿಕ್ ಆಗಿ ಅವರ ಹುದ್ದೆಯಿಂದ ತೆಗೆದು ಹಾಕಲಾಗುತ್ತೆ. 
ಕೇಂದ್ರ  ಸರ್ಕಾರದ ಈ ಕ್ರಮವು ಹಿಂದಿನ ವಿವಾದಗಳ ಹಿನ್ನೆಲೆಯಲ್ಲಿ ಬಂದಿದೆ.  ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರಂತಹ ನಾಯಕರು ಜೈಲಿನಲ್ಲಿದ್ದರೂ ಸಹ ಅಧಿಕಾರದಲ್ಲಿ ಮುಂದುವರಿದಿದ್ದರು. ಹೀಗಾಗಿ ಇಂಥ ಘಟನೆಗಳು ಪುನಾರಾವರ್ತನೆಯಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಈ ಹೊಸ ಕಾಯಿದೆಯನ್ನು ಜಾರಿಗೆ ತರಲು ಹೊರಟಿದೆ. ಆದರೇ, ವಿರೋಧ ಪಕ್ಷಗಳು ತೀವ್ರವಾಗಿ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಬಿಜೆಪಿಯೇತರ ಸರ್ಕಾರಗಳನ್ನು ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಈ ಮೂಲಕ ಅಸ್ಥಿರಗೊಳಿಸುತ್ತಾವೆ ಎಂಬ ಭಯ ವಿರೋಧ ಪಕ್ಷಗಳನ್ನು ಕಾಡುತ್ತಿದೆ. 

PM CM REMOVAL BILL 022

ತಮಿಳುನಾಡಿನ ಸೆಂತಿಲ್ ಬಾಲಾಜಿ , ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ 


"ಒಬ್ಬ ಸಚಿವರನ್ನು ಸತತ 30 ದಿನಗಳ ಕಾಲ ಅಧಿಕಾರದಲ್ಲಿದ್ದಾಗ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧ ಎಸಗಿದ ಆರೋಪದ ಮೇಲೆ ಬಂಧಿಸಿ ಕಸ್ಟಡಿಯಲ್ಲಿ ಇರಿಸಿದರೆ, ಅಂತಹ ಕಸ್ಟಡಿಗೆ ತೆಗೆದುಕೊಂಡ ಮೂವತ್ತೊಂದನೇ ದಿನದೊಳಗೆ ಪ್ರಧಾನಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಅವರನ್ನು ಅವರ ಹುದ್ದೆಯಿಂದ  ತೆಗೆದುಹಾಕಬೇಕು" ಎಂದು ಮಸೂದೆಯಲ್ಲಿ ಹೇಳಲಾಗಿದೆ. 
ವಿರೋಧದ ಕೂಗು
ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲು  ಪಟ್ಟಿ ಮಾಡಿದ ಕೂಡಲೇ, ಕಾಂಗ್ರೆಸ್ ಪಕ್ಷವು,  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದೆ.  ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಚುನಾವಣೆಯಲ್ಲಿ ಸೋಲಿಸಲು ವಿಫಲವಾದ ನಂತರ ಅವರನ್ನು ತೆಗೆದುಹಾಕಲು ಆಡಳಿತ ಪಕ್ಷವು ಅಂತಹ ಕಾನೂನನ್ನು ತರಲು ಬಯಸಿದೆ ಎಂದು ವಿರೋಧ ಪಕ್ಷಗಳು ಹೇಳಿವೆ. 
"ವಿರೋಧ ಪಕ್ಷವನ್ನು ಅಸ್ಥಿರಗೊಳಿಸಲು ಉತ್ತಮ ಮಾರ್ಗವೆಂದರೆ ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಬಂಧಿಸಲು ಪಕ್ಷಪಾತದ ಕೇಂದ್ರ ಸಂಸ್ಥೆಗಳನ್ನು ಬಿಡುವುದು ಮತ್ತು ಅವರನ್ನು ಚುನಾವಣೆಯಲ್ಲಿ  ಸೋಲಿಸಲು ಸಾಧ್ಯವಾಗದಿದ್ದರೂ, ಅನಿಯಂತ್ರಿತ ಬಂಧನಗಳ ಮೂಲಕ ಅವರನ್ನು ತೆಗೆದುಹಾಕುವುದು!! ಮತ್ತು ಯಾವುದೇ ಆಡಳಿತ ಪಕ್ಷದ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಎಂದಿಗೂ ಮುಟ್ಟಿಲ್ಲ!!" ಎಂದು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸದಸ್ಯ  ಅಭಿಷೇಕ್ ಮನುಸಿಂಘ್ವಿ ಟ್ವೀಟ್ ಮೂಲಕ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

PM AND CM REMOVAL LAW ANTI CORRUPTION L
Advertisment