/newsfirstlive-kannada/media/media_files/2025/10/27/parameshwar_dks-2025-10-27-13-06-38.jpg)
ಹೈಕಮ್ಯಾಂಡ್ ತೀರ್ಮಾನಿಸಿದರೇ, ಡಿಕೆಶಿ ರನ್ನು ಸಿಎಂ ಆಗಿ ಒಪ್ಪಿಕೊಳ್ಳುವೆ
ಒಂದು ವೇಳೆ ಕಾಂಗ್ರೆಸ್ ಹೈಕಮ್ಯಾಂಡ್ ನಾಯಕತ್ವ ಬದಲಾವಣೆ ಬಗ್ಗೆ ತೀರ್ಮಾನ ಕೈಗೊಂಡರೇ, ಡಿ.ಕೆ.ಶಿವಕುಮಾರ್ ರನ್ನು ಸಿಎಂ ಆಗಿ ಒಪ್ಪಿಕೊಳ್ಳುತ್ತೇವೆ ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಯಾರೋ ನನಗೆ ಸಿಎಂ ಆಕಾಂಕ್ಷೆ ಬಗ್ಗೆ ಕೇಳಿದ್ದರು. ನಾನು ಸಹಜವಾಗಿಯೇ ಪ್ರತಿಕ್ರಿಯಿಸಿ, ನಾನು ಕೂಡ ಸಿಎಂ ರೇಸ್ ನಲ್ಲಿದ್ದೇನೆ ಎಂದು ಹೇಳಿದ್ದೆ. ಆದರೇ, ಒಂದು ವೇಳೆ ಅಧಿಕಾರ ಹಸ್ತಾಂತರವಾಗುವುದಾದರೇ, ಡಿಕೆಶಿ ಸಿಎಂ ಆಗುವುದಾದರೇ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷೆ ಹೊಂದಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ಪುನರುಚ್ಚರಿಸಿದ್ದಾರೆ. ಪಕ್ಷಕ್ಕೆ ತಮ್ಮ ಕೊಡುಗೆ ಬಗ್ಗೆ ಕಾಂಗ್ರೆಸ್ ಹೈಕಮ್ಯಾಂಡ್ ಗೆ ಸಂಪೂರ್ಣವಾಗಿ ಅರಿವಿದೆ. ಆದರೇ, ಅಂತಿಮ ತೀರ್ಮಾನ ಹೈಕಮ್ಯಾಂಡ್ ನದ್ದು ಎಂದು ಪರಮೇಶ್ವರ್ ಪುನರುಚ್ಚರಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸಿಎಂ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ. ಆದರೇ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಒಪ್ಪಂದದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/08/18/dr-parameshwar-2025-08-18-12-53-08.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us