Advertisment

ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಎಂದ ಇನ್ಪೋಸಿಸ್‌ ಮೂರ್ತಿ ಅಂಡ್ ಸುಧಾಮೂರ್ತಿ: ಅವರೇನೂ ಬೃಹಸ್ಪತಿಗಳಾ ಎಂದ ಸಿಎಂ ಸಿದ್ದು

ಇನ್ಪೋಸಿಸ್ ಸಂಸ್ಥಾಪಕ ಎನ್‌.ಆರ್.ನಾರಾಯಣಮೂರ್ತಿ ಹಾಗೂ ಪತ್ನಿ ಸುಧಾಮೂರ್ತಿ ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಎಂದಿದ್ದಾರೆ. ಇದರ ಬಗ್ಗೆ ಸಿಎಂ ಸಿದ್ದು ಪ್ರತಿಕ್ರಿಯಿಸಿದ್ದು, ಇನ್ಪೋಸಿಸ್ ಅವರೇನೂ ಬೃಹಸ್ಪತಿಗಳಾ ಎಂದು ಪ್ರಶ್ನಿಸಿದ್ದಾರೆ.

author-image
Chandramohan
NRN AND CM SIDDU

ಸಮೀಕ್ಷೆಯಲ್ಲಿ ಭಾಗಿಯಾಗದ ಎನ್‌ಆರ್‌ಎನ್ ದಂಪತಿ ಬಗ್ಗೆ ಸಿಎಂ ಪ್ರತಿಕ್ರಿಯೆ

Advertisment
  • ಸಮೀಕ್ಷೆಯಲ್ಲಿ ಭಾಗಿಯಾಗದ ಎನ್‌ಆರ್‌ಎನ್ ದಂಪತಿ ಬಗ್ಗೆ ಸಿಎಂ ಪ್ರತಿಕ್ರಿಯೆ
  • ಇನ್ಪೋಸಿಸ್ ಅವರೇನೂ ಬೃಹಸ್ಪತಿಗಳಾ ಎಂದು ಪ್ರಶ್ನಿಸಿದ ಸಿಎಂ ಸಿದ್ದು
  • ಕೇಂದ್ರ ಸರ್ಕಾರದ ಸಮೀಕ್ಷೆಗೆ ಏನು ಉತ್ತರ ಕೊಡುತ್ತಾರೆ ನೋಡೋಣ-ಸಿಎಂ

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗಿಯಾಗಲು ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಪತ್ನಿ ಸುಧಾಮೂರ್ತಿ ನಿರಾಕರಿಸಿದ್ದಾರೆ. ಈ ವಿಷಯದ ಬಗ್ಗೆ ಇಂದು  ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.   ಅದು ಅವರಿಗೆ ಬಿಟ್ಟಿದ್ದು . ಇನ್ಫೋಸಿಸ್ ಅವರು ಬೃಹಸ್ಪತಿಗಳಾ? . ಇದು ಹಿಂದುಳಿದವರ ಸಮೀಕ್ಷೆ  ಅಲ್ಲ .  ಅವರಿಗೆ ತಪ್ಪು ಮಾಹಿತಿ ಇರಬಹುದು . ಕೇಂದ್ರ ಸರ್ಕಾರದ ಸಮೀಕ್ಷೆ ಗೆ ಏನು ಉತ್ತರ ಕೊಡ್ತಾರೆ ನೋಡೋಣ.  ಇದು 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

Advertisment

ಇನ್ಪೋಸಿಸ್‌ನ ಎನ್‌.ಆರ್.ನಾರಾಯಣಮೂರ್ತಿ ಹಾಗೂ  ಸುಧಾಮೂರ್ತಿ ದಂಪತಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಮೇಲ್ಜಾತಿಯವರಿಗೆ ಹಿಂದುಳಿದ  ವರ್ಗಗಳ  ಸಮೀಕ್ಷೆ ಬೇಕಾಗಿಲ್ಲ . ಸಿಎಂ ಸಿದ್ದರಾಮಯ್ಯ ಧೈರ್ಯ ಮಾಡಿ ಮಾಡುತ್ತಿದ್ದಾರೆ.  ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಅಂದ್ರೆ ಸಂವಿಧಾನ ವಿರೋಧಿಗಳು,  ದೇಶ ದ್ರೋಹಿಗಳು ಅಂತಾನೇ ಹೇಳಬೇಕಾಗುತ್ತೆ.   ಅವರೆಲ್ಲಾ ತಂತ್ರಜ್ಞಾನ ದಿಗ್ಗಜರು ಅನಿಸಿಕೊಂಡವರು . ಸರ್ಕಾರದಿಂದ ಒಂದು ರೂಪಾಯಿಗೆ ಭೂಮಿ ಪಡೆದುಕೊಂಡಿರುತ್ತಾರೆ.  ಸುಮಾರು 35 ಸಾವಿರ ಕೋಟಿ ತೆರಿಗೆ ಕಟ್ಟೋರು ಇದ್ದಾರೆ .  ತೆರಿಗೆ ಕಟ್ಟೋದರಿಂದ ತಪ್ಪಿಸಿಕೊಳ್ಳಲು ಭಾಗಿಯಾಗುತ್ತಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ. 

BK HARIPRASAD




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

CM REACTS TO NRN NOT PARTICIPATE IN SURVEY
Advertisment
Advertisment
Advertisment