Advertisment

ಭಾರತದ ಗ್ರಾಹಕರ ಹಿತಾಸಕ್ತಿ ರಕ್ಷಣೆಗೆ ಯಾವಾಗಲೂ ಆದ್ಯತೆ- ರಾಜ್ಯಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ

ಮಧ್ಯಪ್ರಾಚ್ಯ ಸಂಘರ್ಷ, ಭಾರತದಲ್ಲಿ ಕಚ್ಚಾತೈಲದ ಕೊರತೆಯಾಗದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರದ ವಿದೇಶಾಂಗ ಖಾತೆ ಸಚಿವ ಜೈಶಂಕರ್ ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಭಾರತದ ಗ್ರಾಹಕರ ಹಿತಾಸಕ್ತಿ ರಕ್ಷಣೆಗೆ ಕೇಂದ್ರ ಸರ್ಕಾರ ಯಾವಾಗಲೂ ಆದ್ಯತೆ ನೀಡುತ್ತೆ ಎಂದು ಹೇಳಿದ್ದಾರೆ.

author-image
Chandramohan
MEA JAI SHANKAR IN RS

ರಾಜ್ಯಸಭೆಯಲ್ಲಿ ಸಚಿವ ಜೈಶಂಕರ್ ಉತ್ತರ

Advertisment
  • ರಾಜ್ಯಸಭೆಯಲ್ಲಿ ಸಚಿವ ಜೈಶಂಕರ್ ಉತ್ತರ
  • ಮಧ್ಯಪ್ರಾಚ್ಯದ ಪರಿಸ್ಥಿತಿಯ ಪರಿಣಾಮಗಳ ಬಗ್ಗೆ ಉತ್ತರ
  • ತೈಲ ಕೊರತೆಯಾಗದಂತೆ ಕೇಂದ್ರ ಕೈಗೊಂಡ ಕ್ರಮದ ಬಗ್ಗೆ ಉತ್ತರ
  • ಜೊತೆಗೆ ಭಾರತೀಯರ ಸುರಕ್ಷತೆಗೆ ಕೈಗೊಂಡ ಕ್ರಮದ ಬಗ್ಗೆ ಉತ್ತರ

ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಬಗ್ಗೆ ರಾಜ್ಯಸಭೆಯಲ್ಲಿ  ಚರ್ಚೆಯಾಗಿದೆ. ಕೇಂದ್ರದ ವಿದೇಶಾಂಗ ಸಚಿವ  ಜೈಶಂಕರ್ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ನಿಲುವು ಹಾಗೂ ಇದುವರೆಗೂ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ. 
ಭಾರತದ ಗ್ರಾಹಕರ ಹಿತಾಸಕ್ತಿ ರಕ್ಷಣೆಯೇ ಸರ್ಕಾರದ ಆದ್ಯತೆ ಎಂದು ಕೇಂದ್ರದ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾತೈಲದ ಪೂರೈಕೆಯಲ್ಲಿ ತೊಂದರೆಯಾಗಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಹೀಗಾಗಿ ಭಾರತದ ಗ್ರಾಹಕರ ಹಿತಾಸಕ್ತಿ ರಕ್ಷಣೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಜೈಶಂಕರ್ ಹೇಳಿದ್ದಾರೆ. 
ಸಂಘರ್ಷವು ಗಂಭೀರವಾದ ಪೂರೈಕೆಯ ಸರಪಳಿ ಮೇಲೆ ಪರಿಣಾಮ ಬೀರಬಹುದು. ಇತ್ತೀಚಿನ ದಿನಗಳಲ್ಲಿ ಸಂಘರ್ಷ ತೀವ್ರವಾಗಿದೆ. ಸಂಘರ್ಷದಿಂದ ಕಚ್ಚಾತೈಲದ ಪೂರೈಕೆ, ಪೂರೈಕೆ ಮಾರ್ಗದ ಬಿಕ್ಕಟ್ಟು, ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಉಂಟಾಗಿದೆ.  ಬದಲಾಗುತ್ತಿರುವ ಪರಿಸ್ಥಿತಿಯನ್ನು ತೀರಾ ಹತ್ತಿರದಿಂದ ಮಾನಿಟರ್ ಮಾಡುತ್ತಿದ್ದೇವೆ.  ಇದು ಭಾರತದ ಆರ್ಥಿಕತೆಯ ಮೇಲೆ ಉಂಟು ಮಾಡುವ ಪರಿಣಾಮ, ಪೂರೈಕೆ ಸರಪಳಿಯ ಮೇಲಾಗುವ ಪರಿಣಾಮದ ಮೌಲ್ಯಮಾಪನ ಮಾಡಲಾಗುತ್ತಿದೆ. 
ವಿಪಕ್ಷಗಳ ಗದ್ದಲದ ಮಧ್ಯೆ ರಾಜ್ಯಸಭೆಯಲ್ಲಿ ಜೈಶಂಕರ್ ಹೇಳಿಕೆ ನೀಡಿದ್ದಾರೆ. 
ನಮ್ಮ ಸರ್ಕಾರವು ಫೆಬ್ರವರಿ 20 ರಂದು ಹೇಳಿಕೆ ಬಿಡುಗಡೆ ಮಾಡಿದೆ. ಎಲ್ಲ ಕಡೆಯವರು ತಾಳ್ಮೆ, ಸಂಯಮ ವಹಿಸುವಂತೆ ಒತ್ತಾಯಿಸಿದ್ದೇವೆ. ಬೆಳವಣಿಗೆಗಳ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಯಿಂದ ಉದ್ವಿಗ್ನ ವಾತಾವರಣ ಶಾಂತವಾಗಲು ಸಾಧ್ಯ ಎಂಬುದರಲ್ಲಿ  ಭಾರತ ನಂಬಿಕೆ ಇರಿಸಿಕೊಂಡಿದೆ. 

Advertisment

ಭಾರತದ ಆರ್ಥಿಕತೆಯ ಹಿತಾಸಕ್ತಿ, ಜಾಗತಿಕ ತೈಲ ಮಾರುಕಟ್ಟೆಗೆ ಪಶ್ಚಿಮ ಏಷ್ಯಾದ ಸ್ಥಿರತೆ ಬಹಳ ಮುಖ್ಯ. 
ಪಶ್ಚಿಮ ಏಷ್ಯಾ ಸ್ಥಿರತೆ ಮತ್ತು ಶಾಂತಿಯನ್ನು ಹೊಂದಿರಬೇಕು.  ಪಶ್ಟಿಮ ಏಷ್ಯಾದ ನಮ್ಮ ಮಿತ್ರರು, ಪಾಲುದಾರರ ಜೊತೆ ಸಂಪರ್ಕದಲ್ಲಿದ್ದೇವೆ.  ಬೆಳವಣಿಗೆಯನ್ನು ಹತ್ತಿರದಿಂದ ಟ್ರ್ಯಾಕ್ ಮಾಡುತ್ತಿದ್ದೇವೆ. 
ಭಾರತ ಸರ್ಕಾರವು ಭಾರತೀಯ ನಾಗರಿಕರ ಸುರಕ್ಷತೆ, ಯೋಗಕ್ಷೇಮಕ್ಕೆ ಒತ್ತು ನೀಡಿದೆ. ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆಗೆ ಒತ್ತು ನೀಡಲಾಗಿದೆ.  ಉದ್ವಿಗ್ನ ವಾತಾವರಣದ ಬಳಿಕ ಮಧ್ಯಪ್ರಾಚ್ಯದಿಂದ 67 ಸಾವಿರ ಭಾರತೀಯ ನಾಗರಿಕರು ವಾಪಸ್‌ ಆಗಿದ್ದಾರೆ ಎಂದು  ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. 

EXPORT TO MIDDLE EAST STOPPED

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

MEA JAISHANKAR MEA JAISHANKAR ON MIDDLE EAST TENSIONS
Advertisment
Advertisment
Advertisment