/newsfirstlive-kannada/media/media_files/2025/11/26/rahul-gandhi-and-dks-1-2025-11-26-14-35-36.jpg)
ಕರ್ನಾಟಕದ ಸಿಎಂ ಕುರ್ಚಿ ಫೈಟ್ ಬಗ್ಗೆ ರಾಹುಲ್ ಗಾಂಧಿ ಮೌನವೇಕೆ?
ಕರ್ನಾಟಕದಲ್ಲಿ ಸಿಎಂ ಗಾದಿ ಜಟಾಪಟಿ ನಡೀತಿದ್ರೂ AICC ಅಧ್ಯಕ್ಷರೂ ಮೌನ ವಹಿಸಿದ್ದಾರೆ.
ಜೊತೆಗೆ ಕಾಂಗ್ರೆಸ್ ಹೈಕಮ್ಯಾಂಡ್ ನಾಯಕರಾದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಮೌನ ವಹಿಸಿದ್ದಾರೆ.
ಆದರೇ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಇಬ್ಬರೂ ಹೈಕಮ್ಯಾಂಡ್ ತೀರ್ಮಾನವೇ ಅಂತಿಮ ಎನ್ನುತ್ತಿದ್ದಾರೆ. ಮತ್ತೊಂದೆಡೆ ಈಗ ಗೊಂದಲವು ರಾಜ್ಯ ಮಟ್ಟದ್ದು. ಅವರೇ ಬಗೆಹರಿಸಿಕೊಳ್ಳಬೇಕು ಎಂದು ಈ ನಾಯಕತ್ವ ಗೊಂದಲದಲ್ಲಿ ಹೈಕಮ್ಯಾಂಡ್ ಮಧ್ಯಪ್ರವೇಶ ಮಾಡಲ್ಲ ಎಂಬ ಸಂದೇಶವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವಾನಿಸಿದ್ದಾರೆ.
ಆದರೇ, ನೆಹರು-ಗಾಂಧಿ ಪರಿವಾರದ ರಾಹುಲ್ ಗಾಂಧಿ ಮೌನವಾಗಿರುವುದು ಏಕೆ? ರಾಹುಲ್ ಗಾಂಧಿ ಮುಂದೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಿಎಂ ಹುದ್ದೆ ಹಂಚಿಕೆಯ ಬಗ್ಗೆ ಚರ್ಚೆಯೇ ಆಗಿಲ್ಲವೇ? ರಾಹುಲ್ ಗಾಂಧಿ ಮೌನಕ್ಕೆ ಕಾರಣವೇನು? ಇದಕ್ಕೆ ಹಲವು ಕಾರಣಗಳೂ ಇವೆ ಎಂದು ಕಾಂಗ್ರೆಸ್ ಹೈಕಮ್ಯಾಂಡ್ ಮೂಲಗಳು ಹೇಳುತ್ತಿವೆ. ಅವುಗಳೇನು ಅಂತ ನೋಡುವುದಾದರೇ,
ರಾಹುಲ್ ಮೌನವೇಕೆ?
ಕಾರಣಗಳೇನು?
1) ಅಧಿಕಾರ ಹಂಚಿಕೆ ಬಗ್ಗೆ ರಾಹುಲ್ ಗಾಂಧಿ ಮುಂದೆ ಆಗದ ಚರ್ಚೆ
2) ವೇಣುಗೋಪಾಲ್, ಖರ್ಗೆ, ಸುರ್ಜೇವಾಲಾ ಮುಂದೆ ಮಾತ್ರ ಚರ್ಚೆ
3) ಅಹಿಂದ ನಾಯಕನ ಎದುರು ಹಾಕಿಕೊಳ್ಳುವುದು ಬೇಡವೆಂಬ ಲೆಕ್ಕಚಾರ
4) AICC ಒಬಿಸಿ ಸಮಾವೇಶದಲ್ಲಿ ಒಬಿಸಿ ಚಾಂಪಿಯನ್ ಅಂತ ಹೇಳಿಕೆ
5) ಬದಲಾವಣೆಗೆ ಕೈ ಹಾಕಿದ್ರೆ ತಪ್ಪು ಸಂದೇಶ ಹೋಗಲಿದೆ ಎಂಬ ನಿಲುವು
6) ಏಕಾಏಕಿ ಸಿಎಂ ಬದಲಾವಣೆಗೆ ಕೈಹಾಕಿದರೆ ಪಕ್ಷದ ಮೇಲೆ ಪರಿಣಾಮ
7) ಪಕ್ಷ ಅಧಿಕಾರದ 3 ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಒಬಿಸಿ ಸಿಎಂ
8) ಸಿಎಂ ಸ್ಥಾನದಿಂದ ಕೈಬಿಟ್ರೆ ಯಾವ ಸ್ಥಾನ ನೀಡಬೇಕೆಂಬ ಗೊಂದಲ ಸೃಷ್ಟಿ
9) ಒಕ್ಕಲಿಗರಿಗೆ ಕೊಟ್ರೆ ಇಡೀ ಸಮಯದಾಯದಿಂದ ಪಕ್ಷಕ್ಕೆ ಆಗದ ಅನುಕೂಲ
10) ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷಕ್ಕೆ ಅಹಿಂದ ಮತಗಳೇ ಬೆನ್ನೆಲುಬಾಗಿ ನಿಂತಿರುವುದು
11) ಡಿಕೆಶಿ ಭೇಟಿ ಮಾಡಿದ್ರೆ ನೇರವಾಗಿ ಸಿಎಂ ಸ್ಥಾನ ಕೇಳ್ತಾರೆ ಎಂಬ ಆಲೋಚನೆ
12) ಡಿಕೆಶಿ ಬೇಡಿಕೆಯಂತೆ ಮಾಡಿದರೆ ಸಿದ್ದರಾಮಯ್ಯ ರೆಬೆಲ್ ಆಗುವ ಸಾಧ್ಯತೆ
13) ಬದಲಾವಣೆ ಅಗತ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಂತಿರುವುದು
14) ಸಿಎಂ ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಈಗಲೂ ಒಲವು ಹೊಂದಿರುವುದು
15) ಡಿಸಿಎಂ ಡಿಕೆಶಿ ಸೈದ್ಧಾಂತಿಕ ನಿಲುವಿನ ಬಗ್ಗೆ ಪಕ್ಷದಲ್ಲೇ ಅಪಸ್ವರ ಇರುವುದು
ಇಂದು ಡೆಲ್ಲಿಗೆ ಹೊರಟ ಡಿಕೆಶಿ!
ಇದೆಲ್ಲದರ ಮಧ್ಯೆ ಇಂದು ಡಿಸಿಎಂ ಡಿಕೆಶಿ ದೆಹಲಿ ಪ್ರವಾಸದಲ್ಲಿದ್ದಾರೆ. ಕೇಂದ್ರದ ಜಲಶಕ್ತಿ ಖಾತೆ ಸಚಿವರ ಜೊತೆ ಸಭೆಯಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಕೇಂದ್ರದ ವಸತಿ ಮತ್ತು ನಗರಾಭಿವೃದ್ದಿ ಖಾತೆ ಮಂತ್ರಿ ಮನೋಹರ್ ಲಾಲ್ ಖಟ್ಟರ್ ಜೊತೆ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಇದೇ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಡಿಕೆಶಿ ಯತ್ನಿಸುವ ಸಾಧ್ಯತೆ ಇದೆ. ಅಗತ್ಯ ಬಿದ್ದರೇ, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಡಿಕೆಶಿ ಯತ್ನಿಸುವರು.
ದೆಹಲಿಯ ಕಾಂಗ್ರೆಸ್ ಹೈಕಮ್ಯಾಂಡ್ ನಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಯಾವ ರೀತಿಯ ಸ್ಪಂದನೆ ಸಿಗುತ್ತೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಡಿಕೆಶಿ ‘ರಾಗಾ’!
1. ಈ ಹಿಂದೆ ದೆಹಲಿಗೆ ಬಂದಾಗ ಖಾಸಗಿ ಭೇಟಿಗೆ ಸಿಗದ ರಾಹುಲ್ ಗಾಂಧಿ
2. ಇಂದು ರಾಹುಲ್ ಭೇಟಿಗೆ ಮುಂದುವರಿದ ಡಿ.ಕೆ ಶಿವಕುಮಾರ್ ಕಸರತ್ತು
3. ನಾಯಕತ್ವ ಗೊಂದಲದಿಂದ ಅಂತರ ಕಾಯ್ದುಕೊಂಡ ಎಐಸಿಸಿ ಅಧ್ಯಕ್ಷರು
4. ತನ್ನ ಬೆನ್ನಿಗೆ ರಾಹುಲ್ ಗಾಂಧಿ ನಿಲ್ಲಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಡಿಕೆಶಿ
5. ಸಿದ್ದರಾಮಯ್ಯ, ನನ್ನ ಜೊತೆ ಸಭೆ ಮಾಡುವಂತೆ ಡಿಕೆಶಿ ಮನವಿಗೆ ತಯಾರಿ
6. ರಾಹುಲ್ ಜೊತೆ ಅಧಿಕಾರ ಒಪ್ಪಂದದ ಬಗ್ಗೆ ಚರ್ಚೆಗೆ ಶಿವಕುಮಾರ್ ಕಾತರ
7. ರಾಜ್ಯದ ಬಗ್ಗೆ ಗಮನಹರಿಸಿ ಎಂದು ರಾಹುಲ್​ಗೆ ಮನವಿ ಮಾಡಲಿರುವ ಡಿಕೆ
8. ಈಗಾಗಲೇ ಸತೀಶ್, ರಾಜಣ್ಣ ಸೇರಿ ಸಿಎಂ ಆಪ್ತರ ಭೇಟಿಯಾಗಿರೋ ಡಿಕೆಶಿ
9. ಅವರಿಂದ ಸಿಕ್ಕ ಅಭಿಪ್ರಾಯವನ್ನು ರಾಹುಲ್ ಗಮನಕ್ಕೆ ತರಲು ಡಿಕೆಶಿ ಸಜ್ಜು
10. ಡಿ.ಕೆ ಶಿವಕುಮಾರ್ ಬೇಡಿಕೆಗೆ ರಾಹುಲ್ ಗಾಂಧಿ ಏನು ಹೇಳ್ತಾರೆ ಎಂಬ ಕುತೂಹಲ
/filters:format(webp)/newsfirstlive-kannada/media/media_files/2025/12/23/dcm-dk-shivakumar-meets-manohar-lal-khattar-2025-12-23-16-39-37.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us