/newsfirstlive-kannada/media/media_files/2025/11/22/jds-25-years-celebrations-2025-11-22-18-08-32.jpg)
ಜೆಡಿಎಸ್ ಪಕ್ಷದಿಂದ 25 ವರ್ಷಾಚರಣೆ ಸಂಭ್ರಮ
ಜೆಡಿಎಸ್​ ಪಕ್ಷ 25 ವರ್ಷಗಳನ್ನು ಪೂರೈಸಿದ್ದು ಜನತಾ ಪರಿವಾರದಲ್ಲಿ ರಜತ ಮಹೋತ್ಸವ ಸಂಭ್ರಮಾಚರಣೆ 2ನೇ ದಿನವೂ ಅದ್ಧೂರಿಯಾಗಿ ನಡೆದಿದೆ. ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ದಿಗ್ಗಜರ ಸಮಾಗಮ ಆಯ್ತು.. ಕಾರ್ಯಕ್ರಮದಲ್ಲಿ ಮುಂದಿನ 25 ವರ್ಷಗಳು ಪಕ್ಷವನ್ನು ಸಂಘಟಿಸಿ ಬೆಳೆಸುವ ಸಂಕಲ್ಪ ಮಾಡಲಾಯ್ತು.. 2028ಕ್ಕೆ ಕುಮಾರಸ್ವಾಮಿಯನ್ನು ಮತ್ತೆ ಸಿಎಂ ಮಾಡುವ ಸಂಕಲ್ಪಗೈಯ್ಯಲಾಯ್ತು..
ಜೆಡಿಎಸ್ ರಾಷ್ಟ್ರೀಯ ಮಹಾ ಅಧಿವೇಶನ.. ಪ್ರಾದೇಶಿಕ ಪಕ್ಷ ಜೆಡಿಎಸ್​ಗೆ ಬೆಳ್ಳಿ ಹಬ್ಬದ ಸಂಭ್ರಮ.. ಜೆಪಿ ಭವನದಲ್ಲಿ ಹಸಿರು ಕಹಳೆ.. ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿ ವಿವಿಧ ರಾಜ್ಯಗಳ ಜೆಡಿಎಸ್ ನಾಯಕರ ಸಮಾಗಮ.. 25 ಸಂವತ್ಸರಗಳನ್ನು ಪೂರೈಸಿರುವ ತೆನೆ ಪರಿವಾರದಲ್ಲಿ ಸಂಭ್ರಮ ಸಡಗರ ಮೂಡಿರುವ ಕ್ಷಣ ಇದು..
ತೆನೆ ಪಕ್ಷದಲ್ಲಿ ರಜತ ಮಹೋತ್ಸವ ಸಂಭ್ರಮ
ಜೆ.ಪಿ ಭವನದಲ್ಲಿ JDS ದಿಗ್ಗಜರ ಸಮಾಗಮ
ಜೆಡಿಎಸ್ ಪಕ್ಷ 25 ವರ್ಷಗಳನ್ನು ಪೂರೈಸಿದ್ದು ‘ದಳ’ ಬಳಗದಲ್ಲಿ ರಜತ ಮಹೋತ್ಸವದ ರಂಗು ಮೇಳೈಸಿದೆ.. ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ.ಭನವನದಲ್ಲಿ ದೀಪ ಬೆಳಗುವ ಮೂಲಕ ಮಾಜಿ ಪ್ರಧಾನಿ ಹೆಚ್.​​ಡಿ ದೇವೇಗೌಡರು ಕಾರ್ಯಕ್ರಮ ಉದ್ಘಾಟಿಸಿ ಬೆಳ್ಳಿ ನಾಣ್ಯ ಬಿಡುಗಡೆ ಮಾಡಿದ್ರು.. ಈ ಬೆಳ್ಳಿ ನಾಣ್ಯದಲ್ಲಿ ಹೆಚ್.ಡಿ ದೇವೇಗೌಡ, ಕುಮಾರಸ್ವಾಮಿ ಭಾವಚಿತ್ರ ಹಾಗೂ ತೆನೆ ಹೊತ್ತ ಮಹಿಳೆಯ ಪೋಟೋವನ್ನ ಮುದ್ರಿಸಲಾಗಿದೆ.
25 ವರ್ಷಗಳ ಏಳು-ಬೀಳು ನೆನೆದ ಹೆಚ್​.ಡಿ.ದೇವೇಗೌಡ್ರು!
ಎನ್​ಡಿಎ ಮೈತ್ರಿ ಬಿಡಲ್ಲ ಎನ್ನುತ್ತ ‘ಕೈ’ ಸರ್ಕಾರಕ್ಕೆ ಚಾಟಿ!
ಜೆಡಿಎಸ್​ನ ಭೀಷ್ಮ.. ಪಕ್ಷದ ರೂವಾರಿ, ಜೆಡಿಎಸ್ ಸಾರಥಿ ಹೆಚ್.ಡಿ.ದೇವೇಗೌಡ್ರು ಸಮಾರಂಭದಲ್ಲಿ 2ನೇ ದಿನವೂ ಉತ್ಸವದಲ್ಲಿ ಭಾಗಿಯಾಗಿ ಶಕ್ತಿ ತುಂಬಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್​​ಡಿಡಿ ಕಳೆದ 25 ವರ್ಷಗಳಿಂದ ಪಕ್ಷದ ಭಾಗವಾಗಿ ಹಲವು ಏಳುಬೀಳುಗಳನ್ನು ಕಂಡಿದ್ದೇವೆ.. ಯಾವುದೇ ಕಾರಣಕ್ಕೂ ಎನ್​ಡಿಎ ಜೊತೆಗಿನ ಮೈತ್ರಿ ಬಿಡಲ್ಲ ಎಂದ ಗೌಡ್ರು, ನಾನು ಜೆಡಿಎಸ್​​ನಲ್ಲೇ ಇದ್ದಿದ್ರೆ ಮುಖ್ಯಮಂತ್ರಿ ಮಾಡ್ತಿರಲಿಲ್ಲ ಎಂಬ ಸಿದ್ದರಾಮಯ್ಯ ಮಾತಿಗೆ ತಿರುಗೇಟು ಕೊಟ್ರು.. ಹಣಕಾಸು ಮಂತ್ರಿ ಮಾಡಿದ್ದು ನಾವೇ ಅಂತ ಹೇಳಿದ್ದರು. ಸಿದ್ದರಾಮಯ್ಯಗೆ ಆರೋಪ ಮಾಡುವಾಗ ಹಿಡಿತ ಇರಲಿ ಅಂತ ಎಚ್ಚರಿಕೆ ಕೊಟ್ರು.
/filters:format(webp)/newsfirstlive-kannada/media/media_files/2025/11/22/jds-25-years-celebrations02-2025-11-22-18-10-57.jpg)
‘ಸಿದ್ದರಾಮಯ್ಯರನ್ನು ಸಿಎಂ ಮಾಡಿ ಎಂದಿದ್ದೆ’ - ದೇವೇಗೌಡ
‘ಹಣಕಾಸು ಮಂತ್ರಿ ಮಾಡಿದ್ದು ನಾನು’ -ದೇವೇಗೌಡ
2 ಅವಧಿಯಲ್ಲಿ ಸಿಎಂ ಆಗಿದ್ದ ದಿನಗಳ ಬಗ್ಗೆ ಮೆಲುಕು
ಕಾಂಗ್ರೆಸ್​ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಬಳಿಕ ಮಾತನಾಡಿದ ಕೇಂದ್ರದ ಭಾರಿ ಕೈಗಾರಿಕಾ ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಾವು ಎರಡು ಅವಧಿಗೆ ಸಿಎಂ ಆಗಿದ್ದಾಗ ಮಾಡಿದ್ದ ಕೆಲಸಗಳನ್ನು ಮೆಲುಕಿ ಹಾಕಿದ್ರು..
ಒಟ್ಟಾರೆ, ಜೆಡಿಎಸ್ ರಜತ ಮಹೋತ್ಸವದ ಮೂಲಕ ಮುಂದಿನ 25 ವರ್ಷಗಳ ಕಾಲ ಪಟ್ಟ ಕಟ್ಟಿ ಬೆಳೆಸುವ ಸಂಕಲ್ಪ ಮಾಡಿದ್ರು.. 2028ಕ್ಕೆ ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವ ಸಂಕಲ್ಪ, ನಾಡನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಂಕಲ್ಪ ಮಾಡಲಾಯ್ತು.. ಕುಮಾರಸ್ವಾಮಿಯನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿ ಮಾಡುವ ಸಂಕಲ್ಪ ಮಾಡಲಾಯ್ತು..
ಮಂಜುನಾಥ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​​​ಫಸ್ಟ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us