/newsfirstlive-kannada/media/media_files/2026/02/04/gba-elections-1-2026-02-04-14-32-46.jpg)
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಬರುವ ಎಲ್ಲ ಐದು ಪಾಲಿಕೆಗಳಿಗೂ ಈ ವರ್ಷದ ಜೂನ್ 30 ರೊಳಗೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಚುನಾವಣೆಗೆ ರಾಜ್ಯದ ಮೂರು ರಾಜಕೀಯ ಪಕ್ಷಗಳು ಭರದಿಂದ ಸಿದ್ದತೆ ನಡೆಸುತ್ತಿವೆ.
ಎಲೆಕ್ಷನ್​ಗೆ NDA ಮೈತ್ರಿ ಮುಂದುವರಿಯುವ ಸುಳಿವು ಅನ್ನು ಈಗಾಗಲೇ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿದ್ದಾರೆ. ಆದರೇ, 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಸದ್ಯ 369 ವಾರ್ಡ್ ಗಳನ್ನು ರಚನೆ ಮಾಡಲಾಗಿದೆ. ಈ 369 ವಾರ್ಡ್ ಪೈಕಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ 120 ವಾರ್ಡ್ ಗಳನ್ನು ಬಿಜೆಪಿ ನೀಡಬೇಕೆಂದು ಜೆಡಿಎಸ್ ವರಿಷ್ಠ ದೇವೇಗೌಡ ಪಟ್ಟು ಹಿಡಿದಿದ್ದಾರೆ. ಜೆಡಿಎಸ್ ಪ್ರಬಲವಾಗಿರುವ ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಚಾಮರಾಜಪೇಟೆ ಸೇರಿದಂತೆ ಕೆಲವೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 120 ವಾರ್ಡ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಇಂಗಿತವನ್ನು ಜೆಡಿಎಸ್ ವರಿಷ್ಠ ದೇವೇಗೌಡ ವ್ಯಕ್ತಪಡಿಸಿದ್ದಾರೆ.
ಆದರೇ, ದೇವೇಗೌಡರ ಹೇಳಿಕೆ, ಇಚ್ಛೆಗೆ ಬೆಂಗಳೂರಿನ ಬಿಜೆಪಿ ಶಾಸಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ಪೈಕಿ ಯಾವುದೇ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಶಾಸಕರುಗಳೂ ಇಲ್ಲ. ಜೆಡಿಎಸ್ ಬೇಡಿಕೆಯಂತೆ , ವಾರ್ಡ್ ಗಳನ್ನು ಜೆಡಿಎಸ್ ಅಭ್ಯರ್ಥಿಗಳಿಗೆ ಬಿಟ್ಟುಕೊಟ್ಟರೇ, ಆ ವಾರ್ಡ್ ಕಾಂಗ್ರೆಸ್ ಪಾಲಾಗುತ್ತೆ. ಜೊತೆಗೆ ಬಿಜೆಪಿಯ ಆಸ್ತಿತ್ವಕ್ಕೂ ಕೊಡಲಿಪೆಟ್ಟು ಬೀಳುತ್ತೆ ಎಂಬ ಆತಂಕ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಇದೆ.
/filters:format(webp)/newsfirstlive-kannada/media/media_files/2026/02/04/gba-elections-2-2026-02-04-14-33-11.jpg)
ಹೀಗಾಗಿ ಜಿಬಿಎ ಎಲೆಕ್ಷನ್​​, BJPಗೆ ಟೆನ್ಷನ್​ ತಂದಿಟ್ಟಿದೆ. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 16 ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಹೆಚ್​​ಡಿಡಿ ಹೇಳಿಕೆ ಮೇಲೆ ವಾರ್ಡ್ ಬಿಟ್ಟು ಕೊಡಲು ಬಿಜೆಪಿಗೆ ಟೆನ್ಷನ್​ ಶುರುವಾಗಿದೆ. ವಾರ್ಡ್ ಅನ್ನು JDSಗೆ ಬಿಟ್ಟು ಕೊಟ್ರೆ, ಹಿನ್ನಡೆ ಆದ್ರೆ ವಾರ್ಡ್ ಕೈ ತಪ್ಪುವ ಆತಂಕ ಕೂಡ ಬಿಜೆಪಿ ನಾಯಕರಿಗೆ ಇದೆ. ಮುಂದೆ 2028ರ ವಿಧಾನಸಭಾ ಎಲೆಕ್ಷನ್ ನಲ್ಲೂ ಬಿಜೆಪಿ ಶಾಸಕರಿಗೆ, ಪಕ್ಷಕ್ಕೆ ಹಿನ್ನಡೆಯಾಗಲಿದೆ. ಹೆಚ್ಚಿನ ವಾರ್ಡ್ ಗಳನ್ನು ಜೆಡಿಎಸ್ ಬಿಟ್ಟುಕೊಡಲು ಬಿಜೆಪಿ ಶಾಸಕರು ಹಿಂದೇಟು ಹಾಕುತ್ತಿದ್ದಾರೆ.
ಆದರೇ, 120 ವಾರ್ಡ್ ಗಳಲ್ಲಿ ಜೆಡಿಎಸ್ ಸ್ಪರ್ಧಿಸಲು ಮಾಜಿ ಶಾಸಕರು, ಮಾಜಿ ಪಾಲಿಕೆ ಸದಸ್ಯರು ಸಿದ್ದತೆ ನಡೆಸುತ್ತಿದ್ದಾರೆ.
ಹೀಗಾಗಿ ಜಿಬಿಎ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ನಡುವೆ ವಾರ್ಡ್ ಹಂಚಿಕೆಯ ಬಿಕ್ಕಟ್ಟು ಎದುರಾಗಿದೆ. ಜಿಬಿಎ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಮೈತ್ರಿ ಮುಂದುವರಿಕೆಯಾಗಬೇಕಾದರೇ, ಸಹಮತಿಯಿಂದ ವಾರ್ಡ್ ಹಂಚಿಕೆ ಮಾಡಿಕೊಂಡರೇ ಮೈತ್ರಿ ಭಾಂಧವ್ಯ ಸುಗಮವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us