/newsfirstlive-kannada/media/media_files/2026/01/10/jds-party-symbol-2026-01-10-13-37-41.jpg)
JDS ಚುನಾವಣಾ ಚಿಹ್ನೆ ಬದಲಾವಣೆಗೆ ನಿರ್ಧಾರ
ಜೆಡಿಎಸ್ ಪಕ್ಷದ ಚುನಾವಣಾ ಚಿಹ್ನೆ ಬದಲಾವಣೆಗೆ ಪ್ಲ್ಯಾನ್ ಮಾಡಲಾಗುತ್ತಿದೆ. ಹೊಸ ವರ್ಷ 2026 ರಲ್ಲಿ ಪಕ್ಷದ ಚುನಾವಣಾ ಚಿಹ್ನೆಯಲ್ಲಿ ಬದಲಾವಣೆ ತರುಲು ಜೆಡಿಎಸ್ ನಿರ್ಧಾರ ತೆಗೆದುಕೊಂಡಿದೆ. ತೆನೆ ಹೊತ್ತ ಮಹಿಳೆ ಸದ್ಯ ಜೆಡಿಎಸ್ ಪಕ್ಷದ ಚುನಾವಣಾ ಚಿಹ್ನೆಯಾಗಿದೆ. ತೆನೆ ಹೊತ್ತ ಮಹಿಳೆ ಚಿಹ್ನೆಯ ಜೊತೆಗೆ ತಮ್ಮ ಹಳೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್ ಮಾಡಲಾಗಿದೆ. ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ದೇವೇಗೌಡರ ಸಲಹೆಯಂತೆ ಈ ಚರ್ಚೆ ನಡೆಸಲಾಗಿದೆ. ಹೀಗಾಗಿ ಚುನಾವಣಾ ಆಯೋಗಕ್ಕೆ ಶೀಘ್ರದಲ್ಲೇ ಚುನಾವಣಾ ಚಿಹ್ನೆಯಲ್ಲಿ ಕೊಂಚ ಬದಲಾವಣೆಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಚುನಾವಣಾ ಆಯೋಗದಿಂದ ಹೊಸ ಚಿಹ್ನೆಗೆ ಅನುಮತಿ ಸಿಕ್ಕ ಕೂಡಲೇ ಜೆಡಿಎಸ್ ನ ಹೊಸ ಚುನಾವಣಾ ಚಿಹ್ನೆ ಬಿಡುಗಡೆಯಾಗಲಿದೆ.
ಚುನಾವಣಾ ಚಿಹ್ನೆ ಬದಲಾವಣೆ ಹಿಂದೆ ಒಂದಷ್ಟು ಭಾವನಾತ್ಮಕ ಲೆಕ್ಕಾಚಾರಗಳಿವೆ. ತೆನೆ ಹೊತ್ತ ಮಹಿಳೆ ಚಿಹ್ನೆಯ ಹಿಂದೆ ಚಕ್ರ ಸೇರಿಸುವುದರಿಂದ ಚಲಿಸುವಂತೆ ಕಾಣುತ್ತದೆ. ಇದು ಪಕ್ಷಕ್ಕೆ ಸಕಾರಾತ್ಮಕವಾದ ಶಕ್ತಿಯನ್ನ ಕೊಡುತ್ತದೆ. ಪಕ್ಷದ ಚಿಹ್ನೆಯ ಜೊತೆ ಪೂರ್ಣ ವೃತ್ತ ಹಾಕುವುದರಿಂದ ಪಕ್ಷಕ್ಕೆ ಒಳ್ಳೆಯದು ಅನ್ನೋ ನಂಬಿಕೆ ಕೂಡ ಜೆಡಿಎಸ್ ಪಕ್ಷದ ನಾಯಕರಲ್ಲಿದೆ.
ಈ ಹಿಂದೆ ಜೆಡಿಎಸ್ ಪಕ್ಷ ಚಕ್ರದ ಚುನಾವಣಾ ಚಿಹ್ನೆ ಹೊಂದಿತ್ತು. ಬಳಿಕ ಟ್ರಾಕ್ಟರ್ ಗುರುತು ಅನ್ನು ಹೊಂದಿತ್ತು. ಟ್ರಾಕ್ಟರ್ ವಾಹನವನ್ನೇ ಹೋಲುವ ಚಿಹ್ನೆಗಳನ್ನು ಪಕ್ಷೇತರ ಅಭ್ಯರ್ಥಿಗಳು ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪಡೆದಿದ್ದರಿಂದ ಜನತಾದಳದ ಅಭ್ಯರ್ಥಿಗಳಿಗೆ ಕೆಲವೆಡೆ ಸೋಲು ಉಂಟಾಗಿತ್ತು. ಹೀಗಾಗಿ ಚುನಾವಣಾ ಚಿಹ್ನೆ ಬದಲಾಯಿಸಿ, ತೆನೆ ಹೊತ್ತ ಮಹಿಳೆಯ ಗುರುತಿನ ಚುನಾವಣಾ ಚಿಹ್ನೆ ಪಡೆಯಲಾಗಿದೆ. ಆದರೇ, ಈಗ ತೆನೆ ಹೊತ್ತ ರೈತ ಮಹಿಳೆಯ ಜೊತೆಗೆ ಚಕ್ರವನ್ನು ಸೇರಿಸಲು ಜೆಡಿಎಸ್ ಪ್ಲ್ಯಾನ್ ಮಾಡಿದೆ. ಚಿಹ್ನೆಯ ಅಪ್ ಡೇಟ್ ನಿಂದ ಜೆಡಿಎಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅದೃಷ್ಟ ಖುಲಾಯಿಸುತ್ತಾ ಅನ್ನೋದು 2028ರ ಅಸೆಂಬ್ಲಿ ಚುನಾವಣೆಯ ಬಳಿಕ ಗೊತ್ತಾಗಲಿದೆ.
ಬೇಗ ಅಪ್ ಡೇಟ್ ಆದ ಚುನಾವಣಾ ಚಿಹ್ನೆ ಕೇಂದ್ರ ಚುನಾವಣಾ ಆಯೋಗದಿಂದ ಸಿಕ್ಕರೇ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗೆ ಹೊಸ ಚಿಹ್ನೆ ಬಳಸಿ ಜೆಡಿಎಸ್ ಚುನಾವಣೆ ಎದುರಿಸಬಹುದು . ಬೇಗ ಅಪ್ ಡೇಟ್ ಚುನಾವಣಾ ಚಿಹ್ನೆ ಸಿಗದೇ ಇದ್ದರೇ, ಮುಂದಿನ 2028 ರ ವಿಧಾನಸಭಾ ಚುನಾವಣೆಗೆ ಹೊಸ ಚಿಹ್ನೆ ಪಡೆದು ಸ್ಪರ್ಧಿಸಬಹುದು.
/filters:format(webp)/newsfirstlive-kannada/media/post_attachments/wp-content/uploads/2024/07/Modi-Devegowda-HDK-1.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us