/newsfirstlive-kannada/media/post_attachments/wp-content/uploads/2024/06/kangana1.jpg)
ಬಾಲಿವುಡ್ ನಟಿ ಹಾಗೂ ಬಿಜೆಪಿ ಲೋಕಸಭಾ ಸದಸ್ಯೆ ಕಂಗನಾ ರಣಾವತ್, 2020ರ ತಮ್ಮ ಟ್ವೀಟ್‌ಗೆ ಈಗ ವಿಷಾದ ವ್ಯಕ್ತಪಡಿಸಿದ್ದಾರೆ. ರೈತ ಮಹಿಳೆಯೊಬ್ಬರು ಕಂಗನಾ ರಣಾವತ್ ಟ್ವೀಟ್ ವಿರುದ್ಧ ಮಾನನಷ್ಟ ಕೇಸ್ ಅನ್ನು ಪಂಜಾಬ್‌ನ ಭಟಿಂಡಾ ಕೋರ್ಟ್ ನಲ್ಲಿ ದಾಖಲಿಸಿದ್ದರು. ಈ ಮಾನನಷ್ಟ ಕೇಸ್ ನಲ್ಲಿ ಈಗ ಕಂಗನಾ ರಣಾವತ್ ತಮ್ಮ 2020ರ ಟ್ವೀಟ್‌ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ರೈತ ಮಹಿಳೆಯೊಬ್ಬರನ್ನು ಶಾಹೀನ್ ಬಾಗ್ ಹೋರಾಟದ ಕಾರ್ಯಕರ್ತೆ ಬಿಲ್ಕಿಸ್ ಭಾನು ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು. 2020ರ ತಮ್ಮ ಟ್ವೀಟ್ ಜನರಲ್ ಮೀಮ್ ಆಗಿತ್ತು. ಅದನ್ನ ನಾನು ರೀಟ್ವೀಟ್ ಮಾಡಿದ್ದೆ. ನಾನು ನೇರವಾಗಿ ಅದನ್ನು ಬರೆದಿರಲಿಲ್ಲ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಇಂದು ಭಟಿಂಡಾಗೆ ಬಂದು ಬಹಳ ಸಂತೋಷವಾಯಿತು. ತಾವೆಲ್ಲ ನೋಡುತ್ತಿರುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ನನ್ನ ಅಭಿಮಾನಿಗಳು ನನ್ನನ್ನು ಭೇಟಿಯಾಗಲು ಸೇರಿದ್ದಾರೆ. ಇದನ್ನು ಹೊರತುಪಡಿಸಿ, ಮಾತಾಜೀ ಅವರ ಪತಿಗೆ ನಾನು ನನ್ನ ಸಂದೇಶ ಕಳಿಸಿದ್ದಾನೆ. ನಾನು ನನ್ನ ಕನಸಿನಲ್ಲೂ ಈ ವಿವಾದವನ್ನು ಊಹಿಸಿಕೊಂಡಿರಲಿಲ್ಲ ಎಂದು ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ನೀವು ತಪ್ಪು ಅನ್ನು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಂಗನಾ ರಣಾವತ್, ನೀವು ಈ ಕೇಸ್ ಅನ್ನು ಹತ್ತಿರದಿಂದ ಗಮನಿಸಿದರೇ, ನಾನು ಒರಿಜಿನಲ್ ಆಗಿ ಆ ಟ್ವೀಟ್ ಮಾಡಿರಲಿಲ್ಲ. ಮೀಮ್ ಅನ್ನು ನಾನು ರೀಟ್ವೀಟ್ ಮಾಡಿದ್ದೆ. ನಾನು ಇದನ್ನು ಮಹಿಂದರ್ ಅವರ ಪತಿಯ ಜೊತೆಗೂ ಚರ್ಚೆ ಮಾಡಿದ್ದೇನೆ. ದೇಶಾದ್ಯಂತ ಬಹಳಷ್ಟು ಪ್ರತಿಭಟನೆಗಳು ನಡೆಯುತ್ತಿರುತ್ತಾವೆ. ಯಾರೋ ಒಬ್ಬರು ಜನರಲ್ ಆಗಿ ಮೀಮ್ ಮಾಡಿದ್ದರು. ಅದಕ್ಕೆ ಸಂಬಂಧಪಟ್ಟಂತೆ ವಿವಾದ ಇದು. ತಪ್ಪಾಗಿ ಅರ್ಥೈಯಿಸಿಕೊಂಡಿದ್ದರ ಬಗ್ಗೆ ನಾನು ವಿಷಾದ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ.
ಇನ್ನೂ ಕೇಸ್ ದಾಖಲಿಸಿದ್ದ ಮಹಿಂದರ್ ಕೌರ್ ಅವರ ಪರ ವಕೀಲ ರಘುಬೀರ್ ಬೇನಿವಾಲಾ ಅವರು ಮಾತನಾಡಿ, ಕಂಗನಾ ರಣಾವತ್ ಅವರಿಗೆ ಕೋರ್ಟ್ ಸಮನ್ಸ್ ನೀಡಿದ್ದರಿಂದ ಇಂದು ಕೋರ್ಟ್ ಗೆ ಹಾಜರಾಗಿದ್ದರು. ಇದು ಬೇಲ್ ಪಡೆದು , ಬೇಲ್ ಬಾಂಡ್ ಅನ್ನು ಸಲ್ಲಿಸುವ ಪ್ರಕ್ರಿಯೆ. ಕೋರ್ಟ್ ಒಳಗೆ ಕಂಗನಾ ರಣಾವತ್, ದೂರುದಾರರಿಗೆ ಕ್ಷಮೆ ಕೇಳಲು ಬಯಸುವುದಾಗಿ ಹೇಳಿದ್ದಾರೆ, ಏಕೆಂದರೇ, ಇದು ತಪ್ಪು ಗ್ರಹಿಕೆಯಿಂದ ಆಗಿದೆ. ಆದರೇ, ಇವತ್ತು ಮಹೀಂದರ್ ಕೌರ್ ಅವರಿಗೆ ಅನಾರೋಗ್ಯ. ಹೀಗಾಗಿ ಅವರ ಪತಿ ಕೋರ್ಟ್ ನಲ್ಲಿ ಉಪಸ್ಥಿತರಿದ್ದರು. ಇದು ಮಹೀಂದರ್ ಕೌರ್ ಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ರೈತರಿಗೆ ಸಂಬಂಧಿಸಿದ್ದು. ಸಾಕಷ್ಟು ಸಂಖ್ಯೆಯ ರೈತರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಕೋರ್ಟ್, ಮಹೀಂದರ್ ಪತಿಯನ್ನು ಈ ಬಗ್ಗೆ ಕೇಳಿದಾಗ, ಅವರು ನಾನೊಬ್ಬನೇ ತೀರ್ಮಾನಿಸಲು ಸಾಧ್ಯವಿಲ್ಲ. ಕಿಸಾನ್ ಯೂನಿಯನ್ ಜೊತೆ ಚರ್ಚಿಸಿ ತಮ್ಮ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2023/12/Kangana-ranaut-BJP.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us