ಇಂದಿನಿಂದ ವಿಧಾನಮಂಡಲ ಅಧಿವೇಶನ.. ಸರ್ಕಾರದ ವಿರುದ್ಧ BJP-JDS ಬತ್ತಳಿಕೆಯಲ್ಲಿರೋ ಅಸ್ತ್ರಗಳು ಯಾವ್ಯಾವು?

ಇನ್ನು ರಾಜ್ಯ ಸರ್ಕಾರ ಕೂಡ ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಹೇಳಿಕೆ, ಮೇಕೆದಾಟು ಯೋಜನೆಗಳಿಗೆ ಒಪ್ಪಿಗೆ ನೀಡುವಲ್ಲಿ ಕೇಂದ್ರದ ವಿಳಂಬ ತೆರಿಗೆ ಹಂಚಿಕೆ ಅನ್ಯಾಯವನ್ನ ಪ್ರಸ್ತಾಪಿಸಲಿದೆ. ಜೊತೆಗೆ ಕೇಂದ್ರದ ಅನುದಾನ ತಾರತಮ್ಯ ಪ್ರಸ್ತಾಪಿಸಿ ವಿಪಕ್ಷಗಳನ್ನ ಹಣಿಯಲು ಕಾಂಗ್ರೆಸ್ ಸಿದ್ಧವಾಗಿದೆ.

author-image
Bhimappa
CM_SIDDARAMAIAH (1)
Advertisment

ರಾಜ್ಯದಲ್ಲಿ ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭವಾಗುತ್ತಿದೆ. ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಹಲವು ತಂತ್ರ ಹೆಣೆದಿವೆ. ಅದಕ್ಕೆ ಪ್ರತಿಯಾಗಿ ಆಡಳಿತ ಕಾಂಗ್ರೆಸ್ ಸಹ ಪ್ರತಿತಂತ್ರಗಳನ್ನು ರೂಪಿಸಿದೆ. ಹೀಗಾಗಿ ಎರಡೂ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಲಿದ್ದು ಸದನದ ಕಲಾಪಗಳು ರಂಗೇರಲಿವೆ.

ವಿಧಾನಸೌಧದಲ್ಲಿ ಅಖಾಡ ರೆಡಿಯಾಗಿದ್ದು, ಇಂದಿನಿಂದ ಮಾತಿನ ಸಮರ ಶುರುವಾಗಲಿದೆ. ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗ್ತಿದೆ. ಆಡಳಿತ ಮತ್ತು ವಿಪಕ್ಷಗಳು ತಮ್ಮ ಬತ್ತಳಿಕೆ ಹರಿತಗೊಳಿಸ್ತಿದ್ದು, ಸದನದ ಕಲಾಪಗಳು ಕಾವೇರಲಿವೆ. 

cm siddaramaiah
ಸಿಎಂ ಸಿದ್ದರಾಮಯ್ಯ Photograph: (@siddaramaiah)

ವಿಪಕ್ಷಗಳ ದಶಾಸ್ತ್ರಕ್ಕೆ ಬತ್ತಳಿಕೆಯ ಪ್ರತ್ಯಾಸ್ತ್ರ ಸಿದ್ಧಪಡಿಸಿದ ಕೈಪಡೆ

ವಿಧಾನಮಂಡಲದ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿ ಆಗಸ್ಟ್​​ 22ರ ವರೆಗೂ ನಡೆಯಲಿದ್ದು, ಎರಡು ರಜೆ ಬಿಟ್ಟರೇ ಒಟ್ಟು 09 ದಿನ ಕಾರ್ಯಕಲಾಪಗಳು ನಡೆಯಲಿವೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನ ಮುಂದಿಟ್ಟು ಸರ್ಕಾರವನ್ನ ಕಟ್ಟಿಹಾಕಲು ಬಿಜೆಪಿ-ಜೆಡಿಎಸ್​​ ರಣವ್ಯೂಹ ರಚಿಸ್ತಿವೆ. ಅತ್ತ ಸದನಶೂರ ಸಿದ್ದರಾಮಯ್ಯ, ಮಾತಿನ ಮಲ್ಲ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಅನುಭವಿ ಆಡಳಿತ ಪಕ್ಷವು, ವಿಪಕ್ಷಗಳನ್ನ ಸಮರ್ಥವಾಗಿ ಎದುರಿಸಲು ಸಿದ್ಧತೆ ಮಾಡಿಕೊಂಡಿದೆ.

ಮುಂಗಾರು ಸಮರಕ್ಕೆ ಜೋಡೆತ್ತು ರೆಡಿ!

  • ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆ ಬಗ್ಗೆ ಚರ್ಚೆ 
  • ಹಳೆ ವರದಿ ಅಂಗೀಕರಿಸದೇ ಹೊಸ ಜಾತಿ ಗಣತಿ ನಿರ್ಧಾರ
  • SC-STಗೆ ಮೀಸಲಾದ ಅನುದಾನ, ಬೇರೆಡೆ ವರ್ಗಾವಣೆ
  • ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ, 11ಜನ ಸಾವು
  • ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ 
  • ಶಾಸಕರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಪ್ರಸ್ತಾಪ
  • ಬಿಜೆಪಿ ಶಾಸಕರನ್ನ ಗುರಿಯಾಗಿಸಿ ಎಫ್‌ಐಆರ್ ದಾಖಲು 
  • ರಾಜ್ಯದಲ್ಲಿ ಯೂರಿಯಾ ಗೊಬ್ಬರ ವಿತರಣೆಯಲ್ಲಿ ಗೊಂದಲ
  • ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರಕ್ಕೆ ಸರ್ಕಾರ ಕುಮ್ಮಕ್ಕು

ಇನ್ನು ರಾಜ್ಯ ಸರ್ಕಾರ ಕೂಡ ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಹೇಳಿಕೆ, ಮೇಕೆದಾಟು ಯೋಜನೆಗಳಿಗೆ ಒಪ್ಪಿಗೆ ನೀಡುವಲ್ಲಿ ಕೇಂದ್ರದ ವಿಳಂಬ ತೆರಿಗೆ ಹಂಚಿಕೆ ಅನ್ಯಾಯವನ್ನ ಪ್ರಸ್ತಾಪಿಸಲಿದೆ. ಜೊತೆಗೆ ಕೇಂದ್ರದ ಅನುದಾನ ತಾರತಮ್ಯ ಪ್ರಸ್ತಾಪಿಸಿ ವಿಪಕ್ಷಗಳನ್ನ ಹಣಿಯಲು ಕಾಂಗ್ರೆಸ್ ಸಿದ್ಧವಾಗಿದೆ.

ಇದನ್ನೂ ಓದಿ:ಡಾ.ವಿಷ್ಣುವರ್ಧನ್ ವಿರೋಧಿಗಳಿಗೆ ಬಸವಣ್ಣನವರ ವಚನದ ಮೂಲಕ ಉಪೇಂದ್ರ ತಿರುಗೇಟು

HDK_BYV

ಸರ್ಕಾರ ಕಟ್ಟಿಹಾಕಲು ಜೆಡಿಎಸ್ ಬಿಜೆಪಿ ಸಮನ್ವಯ ಸಭೆ

ಇನ್ನು ವಿಧಾನಸಭೆ ಅಧಿವೇಶನ ಹಿನ್ನೆಲೆ ಜೆಡಿಎಸ್ ಬಿಜೆಪಿ ಶಾಸಕರ ಸಮನ್ವಯ ಸಭೆ ನಡೆದಿದೆ. ಖಾಸಗಿ ಹೊಟೇಲ್​ನಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ನಾಯಕ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್​​ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಸದನ ತಂತ್ರ ಹೆಣೆಯಲಾಗಿದೆ.

ವಿಪಕ್ಷಗಳು ಹೋರಾಟಕ್ಕೆ ಅಣಿ ಆಗಿರೋದು ಪಕ್ಕಾ. ಇತ್ತ ಸರ್ಕಾರ ಕೆಲ ಪ್ರಮುಖ ವಿಧೇಯಕಗಳ ಮಂಡನೆಗೆ ಮುಂದಾಗಿದೆ. ಒಟ್ಟು 23 ವಿಧೇಯಕಗಳನ್ನ ಮಂಡಿಸಲು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಸದನ ಕದನ ಭೂಮಿಯಾಗಿ ಮಾರ್ಪಾಡೋದು ಗ್ಯಾರಂಟಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH Legislative Assembly
Advertisment