ಸಿದ್ದರಾಮಯ್ಯ ಪಟ್ಟ ಬಿಡ್ತಾರಾ, ಡಿಕೆಶಿ ಸಿಎಂ ಆಸೆ ಈಡೇರುತ್ತಾ ಅನ್ನೋದ್ರ ಬಗ್ಗೆ ರಾಜಕಾರಣದಲ್ಲಿ ಭಾರೀ ಚರ್ಚೆ ಆಗ್ತಿದೆ. ಒಕ್ಕಲಿಗ ನಾಯಕ ಡಿಕೆಶಿ ಪರ ನಿಂತ ನಿರ್ಮಲಾನಂದನಾಥ ಸ್ವಾಮೀಜಿಗೆ ಕುರುಬ ಸಮುದಾಯದ ಸ್ವಾಮೀಜಿಗಳು ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿಗಳ ಆಯ್ಕೆ ಸಂವಿಧಾನಿಕವಾಗಿ ಶಾಸಕರ ಅಧಿಕಾರ, ಸಿಎಂ ಯಾರಾಗಬೇಕು ಅನ್ನೋದನ್ನ ಶಾಸಕರು ನಿರ್ಧರಿಸುತ್ತಾರೆ ಅಂತ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಶ್ರೀಗಳ ಟಾಂಗ್ ನೀಡಿದ್ದಾರೆ.
ಏನಂದ್ರು ಶ್ರೀಗಳು..?
ಸಂವಿಧಾನದಲ್ಲಿ ಮಠಾಧೀಶರು ಹೇಳಿದ ತಕ್ಷಣ ಮುಖ್ಯಮಂತ್ರಿ ಆಗುವ ಅವಕಾಶ ಇದೆಯಾ? ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡುವಂತದ್ದು, ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಂತದ್ದು, ಸಂವಿಧಾನಿಕವಾಗಿ ಆಯ್ಕೆಯಾದ ಶಾಸಕರ ಅಧಿಕಾರ. ಹಾಗಾಗಿ ಶಾಸಕರು ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನು ನಿರ್ಧಾರ ಮಾಡುತ್ತಾರೆ. ಜೊತೆಗೆ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು, ಮಠಾಧೀಶರು ರಾಜಕಾರಣದಲ್ಲಿ ಎಂಟ್ರಿ ಆಗೋದು ಬೇಡ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us