/newsfirstlive-kannada/media/media_files/2025/11/21/dk-shivakumar-5-2025-11-21-15-46-36.jpg)
ಬೆಂಗಳೂರು: ಕರ್ನಾಟಕ ಕಾಂಗ್ರೆಸ್​ನಲ್ಲಿ ಪವರ್ ಶೇರಿಂಗ್ (Power sharing) ಹಂಗಾಮಾ ಮುಂದುವರಿದಿದ್ದು, ಮಹತ್ವದ ಬೆಳವಣಿಗೆ ಒಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ (DK Shivakumar) ಪರಪ್ಪನ ಅಗ್ರಹಾರದಲ್ಲಿರುವ ಜೈಲಿಗೆ ದಿಢೀರ್ ಭೇಟಿ ನೀಡಿದ್ದಾರೆ. ಆ ಮೂಲಕ ಖುರ್ಚಿ ಕದನಕ್ಕೆ ಶಿವಕುಮಾರ್ ಮತ್ತೊಂದು ದಾಳ ಉರುಳಿಸಿದ್ದಾರೆ.
ಯಾಕೆ ಜೈಲಿಗೆ ಭೇಟಿ..?
ಪ್ರಸ್ತುತ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್​​ ಬಣ ಹೈಕಮಾಂಡ್ ಮುಂದೆ ತಮ್ಮ ನಾಯಕನಿಗೆ ಸಿಎಂ ಕುರ್ಚಿ ನೀಡುವಂತೆ ಪಟ್ಟು ಹಿಡಿದಿರುವಂತೆ ಕಾಣ್ತಿದೆ. ಮತ್ತೊಂದು ಕಡೆ ನಾನು ಯಾವುದೇ ಬಣದ ನಾಯಕನಲ್ಲ. 140 ಶಾಸಕರ ಅಧ್ಯಕ್ಷನಿದ್ದೇನೆ. ಗುಂಪುಗಾರಿಕೆ ಮಾಡುವನು ನಾನಲ್ಲ ಎಂದು ಶಿವಕುಮಾರ್ ನೇರವಾಗಿ ಕಾಂಗ್ರೆಸ್​​ನ ಎಲ್ಲಾ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ. ಒಂದು ವೇಳೆ ಹೈಕಮಾಂಡ್​, ಸಿಎಂ ಸ್ಥಾನ ನೀಡಲು ಒಪ್ಪಿದರೆ ಶಾಸಕರ ಬೆಂಬಲ ಬೇಕು ಅನ್ನೋದು ಡಿಕೆಶಿಗೆ ಗೊತ್ತಿದೆ. ಇದೇ ಕಾರಣಕ್ಕೆ ನಾನು 140 ಶಾಸಕರ ಅಧ್ಯಕ್ಷ ಎನ್ನುತ್ತಲೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿರೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಮತ್ತೊಂದು ದಾಳ ಉರುಳಿಸಿದ ಸಿಎಂ ಸಿದ್ದು! ಕಾಂಗ್ರೆಸ್‌ನ ಒಕ್ಕಲಿಗ ಶಾಸಕರಿಗೆ ಸಿಎಂ ಸಿದ್ದು ಕರೆ, ಹೇಳಿದ್ದೇನು?
ಕಾರಣ ಇಷ್ಟೇ, ಜೈಲಿನಲ್ಲಿ ಕೆಲವು ಕಳಂಕಿತ ಶಾಸಕರಿದ್ದಾರೆ. ಸತೀಶ್ ಶೈಲ್, ವೀರೇಂದ್ರ ಪಪ್ಪಿ, ವಿನಯ್ ಕುಲಕರ್ಣಿ ಜೈಲಿನಲ್ಲಿದ್ದಾರೆ. ಇವರೆಲ್ಲ ಡಿ.ಕೆ.ಶಿವಕುಮಾರ್​ ಅವರ ಆಪ್ತರೂ ಹೌದು. ಅವರನ್ನು ಮಾತನ್ನಾಡಿಸುವ ಉದ್ದೇಶ ಹಾಗೂ ಸದ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಸುಳಿವು ಕೊಡುವ ಉದ್ದೇಶದಿಂದ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಮನೆಯಲ್ಲೇ ಕೂತ ಆಟ..!
ನಿನ್ನೆಯಿಂದ ಡಿ.ಕೆ.ಶಿವಕುಮಾರ್ ಮನೆಯಲ್ಲಿಯೇ ಕೂತು ಪೊಲಿಟಿಕಲ್ ಗೇಮ್ ಶುರುಮಾಡಿದ್ದಾರೆ. ಮನೆಯಿಂದ ಆಚೆ ಬಾರದ ಶಿವಕುಮಾರ್​, ತಮ್ಮ ಬೆಂಬಲಿಗರನ್ನು ದೆಹಲಿಗೆ ಕಳುಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮೇಲೆ ಒತ್ತಡ ಹೇರುವ ತಂತ್ರ ರೂಪಿಸಿದ್ದಾರೆ ಎಂದು ಚರ್ಚೆ ಆಗ್ತಿದೆ.
ಇದೀಗ ದೆಹಲಿಯ ಮಲ್ಲಿಕಾರ್ಜುನ್ ಖರ್ಗೆ ನಿವಾಸಕ್ಕೆ ಶರತ್ ಬಚ್ಚೆಗೌಡ ಆಗಮಿಸಿದ್ದಾರೆ. ಹೊಸಕೋಟೆ ಶಾಸಕರಾಗಿರುವ ಶರತ್ ಬಚ್ಚೆಗೌಡ, ಡಿಕೆ ಶಿವಕುಮಾರ್ ಅವರ ಅತ್ಯಪ್ತ. ಅದರಂತೆ ಡಿಕೆ ಪರವಾಗಿ ಪ್ರತಿಯೊಬ್ಬ ಶಾಸಕರು ಪ್ರತ್ಯೆಕವಾಗಿ ಖರ್ಗೆಯನ್ನು ಭೇಟಿ ಆಗುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us