Advertisment

ಕೊಟ್ಟ ಮಾತಿನ ಡಿಕೆ ಶಿವಕುಮಾರ್ ಪೋಸ್ಟ್‌ಗೆ ಸಿಎಂ ಸಿದ್ದರಾಮಯ್ಯ ಪೋಸ್ಟ್ ಮೂಲಕವೇ ಕೌಂಟರ್‌

ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಕಾಳಗ ಈಗ X ಖಾತೆಯಲ್ಲಿ ಪೋಸ್ಟರ್‌ ವಾರ್‌ಗೆ ತಿರುಗಿದೆ. ಬೆಳಗ್ಗೆ ಡಿಸಿಎಂ ಡಿ ಕೆ ಶಿವಕುಮಾರ x ಖಾತೆಯಲ್ಲಿ ಪೋಸ್ಟ್ ಆಗಿದ್ದ ಪೋಸ್ಟರ್‌ ಗೆ ಟಾಂಗ್ ಕೊಟ್ಟಂತೆ ಸಂಜೆ ವೇಳೆಗೆ ಸಿಎಂ ಸಿದ್ದರಾಮಯ್ಯ ನವರು x ಖಾತೆಯಲ್ಲಿ ಪ್ರತ್ಯುತ್ತರದ ಪೋಸ್ಟ್ ಮಾಡಲಾಗಿದೆ.

author-image
Siddeshkumar H P
karnataka-power-tussle_Karnataka-Powersharing_Karnataka-politial-developments_Dk-Shivakumar-vs-Siddaramaiah

ಡಿಸಿಎಂ ಮತ್ತು ಸಿಎಂ ಪೋಸ್ಟರ್‌ ವಾರ್ Photograph: (x post)

Advertisment

ರಾಜ್ಯ ರಾಜಕಾರಣದಲ್ಲಿ ಕುರ್ಚಿ ಗುದ್ದಾಟ ರೋಚಕ ಘಟ್ಟವನ್ನ ತಲುಪಿರೋದ್ರ ಮಧ್ಯೆಯೇ ಕೊಟ್ಟ ಮಾತಿಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಮಧ್ಯೆ ಪೋಸ್ಟ್ ವಾರ್ ಶುರುವಾಗಿದೆ. ಇಷ್ಟು ದಿನಗಳ ಕಾಲ ಬಹಿರಂಗವಾಗಿ ಪರಸ್ಪರ ಕೌಂಟರ್‌ ಕೊಡದಿದ್ದ ನಾಯಕರು ಈಗ ಪೋಸ್ಟ್ ಮೂಲಕ ನೇರಾ ನೇರ ತಿರುಗೇಟು ಕೊಟ್ಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಹಾಕಿದ್ದ ಕೊಟ್ಟ ಮಾತಿನ ಪೋಸ್ಟ್‌ಗೆ ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದ ಲೆಕ್ಕ ಕೊಟ್ಟು ಕೌಂಟರ್ ನೀಡಿದ್ದಾರೆ. 
ಡಿಕೆಶಿ ಮಾಡಿದ್ದ ಪೋಸ್ಟ್ ಏನು?

Advertisment


ಇವತ್ತು ಬೆಳಗ್ಗೆ ತಮ್ಮದೇ ಫೋಟೋವೊಂದನ್ನ ಪೋಸ್ಟ್ ಮಾಡಿದ್ದ ಡಿ.ಕೆ ಶಿವಕುಮಾರ್‌, ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ’  ಅಂತ ಬರೆದುಕೊಂಡಿದ್ರು. ಜೊತೆಗೆ ಆ ಫೋಟೋದ ಮೇಲೂ ಇದ್ದ ಬರವಣಿಗೆ ಗಮನ ಸೆಳೆದಿತ್ತು
‘ಮಾತಿನ ಶಕ್ತಿಯೇ ಜಗತ್ತಿನ ಶಕ್ತಿ. ಕೊಟ್ಟ ಮಾತನ್ನ ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ಅದು ನ್ಯಾಯಾಧೀಶರೇ ಆಗಿರ್ಲಿ, ಅಧ್ಯಕ್ಷರೇ ಆಗಿರ್ಲಿ, ನಾನು ಸೇರಿದಂತೆ ಯಾರೇ ಆಗಿರ್ಲಿ, ಎಲ್ಲರೂ ನುಡಿದಂತೆ ನಡೆಯಬೇಕು. ಮಾತಿನ ಶಕ್ತಿಯೇ ಜಗತ್ತಿನ ಶಕ್ತಿ.’
ಹೀಗಂತ ಡಿ.ಕೆ ಶಿವಕುಮಾರ್ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನೇರವಾಗಿ ಸಿಎಂ ಸಿದ್ದರಾಮಯ್ಯ ಅವ್ರಿಗೇ ಕೌಂಟರ್ ನೀಡಿದಂತಿತ್ತು. ಎರಡೂವರೆ ವರ್ಷಗಳ ನಂತ್ರ ಅಧಿಕಾರ ಹಸ್ತಾಂತರದ ಬಗ್ಗೆ ಕೊಟ್ಟ ಮಾತನ್ನ ನೆನಪಿಸಿದ ಹಾಗಿತ್ತು. ಆದ್ರೆ ಆ ನಂತ್ರ ಡಿ.ಕೆ ಶಿವಕುಮಾರ್ ಅವ್ರನ್ನ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನಾನ್ಯಾವುದೇ ಪೋಸ್ಟ್‌ ಮಾಡಿಲ್ಲ, ನನಗೇನು ಗೊತ್ತಿಲ್ಲ ಅಂದಿದ್ರು. 

ಮಾತಿನ ಪೋಸ್ಟ್‌ಗೆ ಸಿದ್ದರಾಮಯ್ಯ ಕೌಂಟರ್‌!
ಸಾಮಾನ್ಯವಾಗಿ ಸಿಎಂ ಸಿದ್ದರಾಮಯ್ಯ ಯಾವತ್ತೂ ಇಂತಹ ಸೋಶಿಯಲ್ ಮೀಡಿಯಾ ವಾರ್‌ಗೆ, ಪೋಸ್ಟ್‌ ವಾರ್‌ಗೆ ಇಳಿದವ್ರೇ ಅಲ್ಲ. ಆದ್ರೆ ಸಂಜೆಯಾಗ್ತಿದ್ದಂತೆ ಅವ್ರ ಎಕ್ಸ್‌ ಖಾತೆಯಲ್ಲಿ ಹಾಕಿರೋ ಪೋಸ್ಟ್‌ ನೇರವಾಗಿ ಡಿ.ಕೆ ಶಿವಕುಮಾರ್‌ ಪೋಸ್ಟ್‌ಗೆ ಕೌಂಟರ್‌ ಕೊಡೋ ರೀತಿ ಇದೆ. ನಾನು ಮಾತು ಕೊಟ್ಟಿದ್ದು ರಾಜ್ಯದ ಜನರಿಗೆ, ಅದನ್ನ ಈಡೇರಿಸಿದ್ದೇನೆ, ನುಡಿದಂತೆ ನಡೆದಿದ್ದೇನೆ ಅಂತ ಪೋಸ್ಟ್ ಮೂಲಕ ಕೌಂಟರ್‌ ಕೊಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ.
ಜನರ ಜಗತ್ತನ್ನ ಉತ್ತಮಗೊಳಿಸದಿದ್ರೆ ಯಾವ ಮಾತೂ ಶಕ್ತಿಯುತವಲ್ಲ.. 
ಶಕ್ತಿ ಯೋಜನೆಯ ಅಡಿಯಲ್ಲಿ 600 ಕೋಟಿ ಟ್ರಿಪ್‌ಗಳನ್ನ ಮಹಿಳೆಯರಿಗೆ ನೀಡಿರೋ ಬಗ್ಗೆ ಘೋಷಣೆ ಮಾಡೋಕೆ ನನಗೆ ನಿಜಕ್ಕೂ ಹೆಮ್ಮೆಯಾಗ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ತಿಂಗಳಿನಿಂದ್ಲೇ ನಾವು ಗ್ಯಾರಂಟಿಗಳನ್ನ ಕಾರ್ಯರೂಪಕ್ಕೆ ತಂದ್ವಿ. ಮಾತಿನ ಮೂಲಕವಲ್ಲ, ಅದನ್ನ ಜನರಿಗೆ ತಲುಪಿಸೋ ಮೂಲಕ. 
ಶಕ್ತಿ - ಕೆಲಸ ಮಾಡೋ ಮಹಿಳೆಯರಿಗೆ 600 ಕೋಟಿ ಉಚಿತ ಟ್ರಿಪ್‌ಗಳನ್ನ ನೀಡೋ ಮೂಲಕ ಅವ್ರಿಗೆ ನೆರವಾಗಿದ್ದೇವೆ. 
ಗೃಹಲಕ್ಷ್ಮಿ - ಮಹಿಳೆಯರಿಂದ ನಡೆಯೋ 1.24 ಕೋಟಿ ಕುಟುಂಬಗಳಿಗೆ ಶಕ್ತಿ ತುಂಬಿದ್ದೇವೆ
ಯುವನಿಧಿ - ಮೂರು ಲಕ್ಷಕ್ಕೂ ಹೆಚ್ಚು ಯುವಕರಿಗೆ ಭರವಸೆ, ನೆರವು
ಅನ್ನಭಾಗ್ಯ 2.0 - 4.08 ಕೋಟಿ ಜನರಿಗೆ ಆಹಾರ ಭದ್ರತೆ ನೀಡಿದ್ದೇವೆ
ಗೃಹ ಜ್ಯೋತಿ - 1.64 ಕೋಟಿ ಕುಟುಂಬಗಳಿಗೆ ಉಚಿತ :ವಿದ್ಯುತ್ 
ನನ್ನ ಮೊದಲ ಅವಧಿಯಲ್ಲಿ (2013-2018) ಕೊಟ್ಟಿದ್ದ 165 ಭರವಸೆಗಳಲ್ಲಿ 157ನ್ನ ಈಡೇರಿಸಿದ್ದೆ. 95ಶೇ. ದಷ್ಟು ಭರವಸೆ ಈಡೇರಿಸಿದ್ದೆ. ಈ ಅವಧಿಯಲ್ಲಿ 593 ಭರವಸೆಗಳಲ್ಲಿ ಈಗಾಗ್ಲೇ 243ಕ್ಕೂ ಹೆಚ್ಚು ಭರವಸೆಗಳನ್ನ ಈಡೇರಿಸಿದ್ದೇನೆ. ಉಳಿದ ಭರವಸೆಗಳನ್ನ ಅದೇ ವಿಶ್ವಾಸಾರ್ಹತೆಯೊಂದಿಗೆ ಈಡೇರಿಸುತ್ತೇನೆ. 
ಜನ ಕೊಟ್ಟಿರೋ ಆದೇಶ ಇದು ಕೇವಲ ಸಂಖ್ಯೆಯಲ್ಲ, ಪೂರ್ತಿ ಐದು ವರ್ಷಗಳ ಕಾಲಕ್ಕೆ ಕೊಟ್ಟಿರೋ ಜವಾಬ್ದಾರಿ. ನಾನು ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟ ಮಾತನ್ನ ಉಳಿಸಿಕೊಂಡು ನುಡಿದಂತೆ ನಡೆಯುತ್ತಿದ್ದೇವೆ. 
ಕರ್ನಾಟಕದ ಜನರಿಗೆ ನಾವು ಕೊಟ್ಟಿರೋ ಮಾತು ಕೇವಲ ಘೋಷಣೆಯಲ್ಲ, ಅದು ನಮ್ಮ ಪಾಲಿಗೆ ಜಗತ್ತು. 

Advertisment

ಸಿದ್ದರಾಮಯ್ಯರ ಈ ಪವರ್‌ಫುಲ್ ಟ್ವೀಟ್‌, ನೇರಾನೇರವಾಗಿ ಡಿ.ಕೆ ಶಿವಕುಮಾರ್‌ಗೆ ಕೌಂಟರ್‌ ಕೊಟ್ಟಂತಿದೆ. ಈ ಟ್ವೀಟ್‌ ಮೂಲಕ ನಾನು ಮಾತು ಕೊಟ್ಟಿದ್ದು ಡಿ.ಕೆ ಶಿವಕುಮಾರ್‌ಗೆ ಅಲ್ಲ, ಕರ್ನಾಟಕದ ಜನರಿಗೆ ಅನ್ನೋ ಸಂದೇಶ ನೇರವಾಗಿ ಪಾಸ್ ಮಾಡಿದ್ದಾರೆ ಸಿಎಂ. ಇದ್ರ ಜೊತೆಗೆ ಜನ ನನಗೆ ಅಧಿಕಾರ ಕೊಟ್ಟಿರೋದು ಪೂರ್ಣ 5 ವರ್ಷಕ್ಕೆ ಅನ್ನೋ ಸಂದೇಶವನ್ನೂ ಪಾಸ್ ಮಾಡಿದ್ದಾರೆ. 
ಅಲ್ಲಿಗೆ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಈಗ ಬಹಿರಂಗ ವೇದಿಕೆಗೆ ಬಂದಂತಾಗಿದೆ.

Siddaramaiah D K Shivakumar
Advertisment
Advertisment
Advertisment