Advertisment

ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲಿ 2ನೇ ಸ್ಥಾನ : 6 ತಿಂಗಳಲ್ಲಿ ಕರ್ನಾಟಕದಲ್ಲಿ 9.4 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ

ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಈ ಹಣಕಾಸು ವರ್ಷದ ಮೊದಲ 6 ತಿಂಗಳುಗಳಲ್ಲಿ ಕರ್ನಾಟಕಕ್ಕೆ 9.4 ಬಿಲಿಯನ್ ಡಾಲರ್ ಬಂಡವಾಳ ಹರಿದು ಬಂದು ಹೂಡಿಕೆಯಾಗಿದೆ. ಇದರಿಂದ ಕರ್ನಾಟಕದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಾವೆ.

author-image
Chandramohan
FDI IN KARNATAKA

ಎಫ್‌ಡಿಐ ನಲ್ಲಿ ಕರ್ನಾಟಕಕ್ಕೆ ದೇಶದಲ್ಲಿ 2ನೇ ಸ್ಥಾನ

Advertisment
  • ಎಫ್‌ಡಿಐ ನಲ್ಲಿ ಕರ್ನಾಟಕಕ್ಕೆ ದೇಶದಲ್ಲಿ 2ನೇ ಸ್ಥಾನ
  • ಈ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಕರ್ನಾಟಕದಲ್ಲಿ 9.4 ಬಿಲಿಯನ್ ಡಾಲರ್ ಹೂಡಿಕೆ


ಭಾರತಕ್ಕೆ ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ  3.15 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ ಹರಿದು ಬಂದಿದೆ.  ಭಾರತಕ್ಕೆ  35.18 ಬಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಹರಿದು ಬಂದಿದೆ.  2025-26 ರ ಹಣಕಾಸು ವರ್ಷದ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ 6 ತಿಂಗಳಲ್ಲಿ ಹರಿದು ಬಂದ ವಿದೇಶಿ ಬಂಡವಾಳವೂ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೇ, ಏರಿಕೆಯಾಗಿರುವುದು ವಿಶೇಷ. 
ಕಳೆದ ಹಣಕಾಸು ವರ್ಷದ ಮೊದಲ 6 ತಿಂಗಳುಗಳಿಗೆ ಹೋಲಿಸಿದರೇ, ಶೇ.18 ರಷ್ಟು ವಿದೇಶಿ ಬಂಡವಾಳ ಹೂಡಿಕೆ ಏರಿಕೆಯಾಗಿದೆ. 
ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ರಾಜ್ಯವು  ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದ ನಂತರದ 2ನೇ ಸ್ಥಾನವನ್ನು  ಕರ್ನಾಟಕ ಪಡೆದಿದೆ.  ಮಹಾರಾಷ್ಟ್ರಕ್ಕೆ 10.57 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯಾಗಿದೆ.  ಕರ್ನಾಟಕಕ್ಕೆ 9.4 ಬಿಲಿಯನ್ ಡಾಲರ್ ಬಂಡವಾಳ ಹರಿದು ಬಂದು ದಾಖಲೆ ನಿರ್ಮಾಣವಾಗಿದೆ. ಕರ್ನಾಟಕಕ್ಕೆ 80,997 ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ. ಮಹಾರಾಷ್ಟ್ರಕ್ಕೆ 91,337 ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ. 

Advertisment




  ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ತಮಿಳುನಾಡು, ಗುಜರಾತ್‌, ದೆಹಲಿಯನ್ನು ಕರ್ನಾಟಕ  ಹಿಂದಿಕ್ಕಿದೆ. ಕರ್ನಾಟಕಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿರುವುದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಾವೆ. ರಾಜ್ಯದ ಆರ್ಥಿಕ ಬೆಳವಣಿಗೆಗೆ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಅನುಕೂಲವಾಗುತ್ತೆ.  ಕೈಗಾರಿಕೆ ಕ್ಷೇತ್ರದ ಅಭಿವೃದ್ದಿಯಾಗುತ್ತೆ. ರಾಜ್ಯವೂ ಆರ್ಥಿಕ ಪ್ರಗತಿಯತ್ತ ದಾಪುಗಾಲು ಇಡಲು ಸಹಾಯಕವಾಗುತ್ತೆ. 
ಬಂಡವಾಳದಿಂದ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ, ರಾಜ್ಯದ ಬೆಳವಣಿಗೆ ಸಾಧ್ಯವಾಗುತ್ತೆ. ಹೀಗಾಗಿ ಬಂಡವಾಳ ಹೂಡಿಕೆಯೇ ಇವೆಲ್ಲಕ್ಕೂ ಮೂಲ ಹಾಗೂ ಮುಖ್ಯ .  

Advertisment



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

FDI INFLOW IN KARNATAKA
Advertisment
Advertisment
Advertisment