ಬೆಂಗಳೂರು: ರಾಜ್ಯದಲ್ಲಿ ಈಗ ಹಾಲಿ ಸ್ಪೀಕರ್ ವರ್ಸಸ್ ಮಾಜಿ ಸ್ಪೀಕರ್ ನಡುವೆ ಭ್ರಷ್ಟಾಚಾರದ ಸಮರ ನಡೆಯುತ್ತಿದೆ. ಹಾಲಿ ಸ್ಪೀಕರ್ ಯುಟಿ ಖಾದರ್ ಅವರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದರು. ಆದರೆ ಇದಕ್ಕೀಗ ಕಾಂಗ್ರೆಸ್ ಪ್ರತ್ಯಾರೋಪ ಮಾಡಿದ್ದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಮತ್ತೆ 3 ಪ್ರಕರಣಗಳ ಆರೋಪ ಮಾಡಲಾಗಿದೆ.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾಂಗ್ರೆಸ್ ಮಾಡಿರುವ ಮೂರು ಪ್ರಕರಣಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ. ಕಾಗೇರಿ ಸ್ಪೀಕರ್ ಆಗಿದ್ದಾಗ ಟೆಂಡರ್​ನ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ದೂರು ನೀಡಲಾಗಿದೆ. ಹೀಗಾಗಿ ಸರ್ಕಾರ ತನಿಖೆಗೆ ಆದೇಶ ನೀಡುತ್ತಾ ಎಂದು ಕಾದು ನೋಡಬೇಕಿದೆ.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧದ ಪ್ರಕರಣಗಳು
- ವೈಫೈ ಇನ್​ಸ್ಟಾಲ್ ಮಾಡುವ ಮೊದಲೇ ಕಂಪನಿಗೆ ಟೆಂಡರ್
- ಶಾಸಕರ ಭವನದಲ್ಲಿ ಶಾಸಕರ ಓಡಾಟಕ್ಕೆ ನೆಕ್ಸಾನ್ ಕಾರು ಖರೀದಿ
- ಸರ್ಕಾರಿ ಚಾನಲ್‌ಗೆ ವರ್ಷಕ್ಕೆ 3 ಕೋಟಿ ರೂಪಾಯಿಯನ್ನು ಅಧಿವೇಶನ ಪ್ರಸಾರಕ್ಕೆ ನೀಡಿದ್ದೇಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


